ಐಟಿ ದಾಳಿ ಬಗ್ಗೆ ಡಿ.ಕೆ. ಸುರೇಶ್ ಮೊದಲ ಪ್ರತಿಕ್ರಿಯೆ

ಬೆಂಗಳೂರು, ಬುಧವಾರ, 2 ಆಗಸ್ಟ್ 2017 (13:15 IST)

ಡಿ.ಕೆ. ಶಿವಕುಮಾರ್ ನಿವಾಸ ಮತ್ತು ಸಂಬಂಧಿಕರ ಮನೆ ಮೇಲೆ ದಾಳಿ ಕುರಿತಂತೆ ಪ್ರತಿಕ್ರಿಯಿಸಿರುವ ಸಹೋದರ ಮತ್ತು ಸಂಸದ ಡಿ.ಕೆ. ಸುರೇಶ್, ಇದು ನಮ್ಮನ್ನ ಬೆದರಿಸುವ ತಂತ್ರ, ಚುನಾವಣೆ ಸಂದರ್ಭದಲ್ಲಿ ಕ಻ಂಗ್ರೆಸ್ ನಾಯಕರನ್ನ ಬೆದರಿಸಿ ಗೆಲ್ಲುವ ತಂತ್ರವನ್ನ ಬಿಜೆಪಿ ಮಾಡುತ್ತಿದೆ.
 


ಇವತ್ತು ಗುಜರಾತ್`ನಿಂದ ರಾಜ್ಯಸಭಾ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. ಶಾಸಕರು ಮತ್ತು ನಮ್ಮನ್ನ ಬೆದರಿಸಲು ಈ ದಾಳಿ ನಡೆಸಲಾಗಿದೆ. ಬಿಜೆಪಿಗೆ ಶಾಸಕರ ಬಲ ಿಲ್ಲಿದ್ದರೂ ಗೆಲ್ಲಲು ಕುದುರೆ ವ್ಯಾಪಾರ ನಡೆಸಲು ಸಿದ್ಧರಾಗಿದ್ದರು. ಡಿ.ಕೆ. ಶಿವಕುಮಾರ್ ಕುಟುಂಬ ಸಂಪೂರ್ಣ ತೆರಿಗೆ ಪಾವತಿಸಿದೆ. ಇದರಿಂದ ನಾವು ವಿಚಲಿತರಾಗುವುದಿಲ್ಲ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
 
ಈ ರಾಜಕೀಯ ಷಡ್ಯಂತ್ರದಿಂದ ನಾವು ಹೊರ ಬರುತ್ತೆವೆ. ರಾಜಕೀಯವ ಜೊತೆಗೆ ವ್ಯಾಪಾರ, ವಹಿವಾಟುಗಳನ್ನೂ ನಾವು ಮಾಡುತ್ತಿದ್ದೇವೆ. ಆರ್ಥಿಕವಾಗಿ ಇಲಾಖೆಗೆ ನೀಡಬೇಕಾದ ದಾಖಲೆಗಳನ್ನ ನೀಡಿದ್ದೇವೆ. ಗುಜರಾತ್ ರಾಜ್ಯಸಭೆ ಚುನಾವಣೆಯಲ್ಲಿ ನಮ್ಮನ್ನ ಎದುರಿಸಲೇ ಇವತ್ತು ದಾಳಿ ನಡೆಸಲಾಗಿದೆ ಎಂದು ಡಿ.ಕೆ. ಸುರೇಶ್ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಐಟಿ ದಾಳಿಯಂತಹ ಗೊಡ್ಡು ಬೆದರಿಕೆಗಳಿಗೆ ಮಣಿಯೋಲ್ಲ: ಸಿಎಂ ಗುಡುಗು

ಬೆಂಗಳೂರು: ಇಂಧನ ಖಾತೆ ಸಚಿವ ಡಿ.ಕೆ.ಶಿವಕುಮಾರ್ ಮನೆಗಳ ಮೇಲೆ ನಡೆಸಿರುವ ದಾಳಿಯಲ್ಲಿ ಕೇಂದ್ರದ ...

news

ಡಿಕೆಶಿ ನಿವಾಸದ ಮೇಲೆ ದಾಳಿಗೆ ಬಿಜೆಪಿ ಹೈಕಮಾಂಡ್ ಕುಮ್ಮಕ್ಕು

ಬೆಂಗಳೂರು: ಕಾಂಗ್ರೆಸ್ ನಾಯಕರನ್ನು ಗುರಿಯಾಗಿಸಿಕೊಂಡು ಐಟಿ ದಾಳಿ ನಡೆಸಲಾಗುತ್ತಿದೆ. ಪ್ರಧಾನಿ ಮೋದಿಯಿಂದ ...

news

ಐಟಿ ದಾಳಿ ವೇಳೆ ದಾಖಲೆ ಹರಿಯಲು ಯತ್ನ: ಅರುಣ್ ಜೇಟ್ಲಿ

ಈಗಲ್ ಟನ್ ರೆಸಾರ್ಟ್`ನಲ್ಲಿ ಐಟಿ ದಾಳಿ ವೇಳೆ ದಾಖಲೆಗಳನ್ನ ಹರಿಯಲು ಸಚಿವರು ಪ್ರಯತ್ನ ನಡೆಸಿದ್ದಾರೆ. ಬಳಿಕ ...

news

‘ಐಟಿ ರೇಡ್ ಗೂ ಗುಜರಾತ್ ರಾಜಕಾರಣಕ್ಕೂ ಸಂಬಂಧವಿಲ್ಲ’

ನವದೆಹಲಿ: ಸಚಿವ ಡಿಕೆ ಶಿವಕುಮಾರ್ ಅವರ ನಿವಾಸಗಳ ಮೇಲೆ ಇಂದು ಐಟಿ ಅಧಿಕಾರಿಗಳು ದಾಳಿ ನಡೆಸಿರುವುದು ...

Widgets Magazine