ಶಾಸಕ ಗೋಪಾಲಯ್ಯ ಬಿಜೆಪಿ ಸೇರ್ಪಡೆಗೆ ಕಾರ್ಯಕರ್ತರು ವಿರೋಧಿಸುತ್ತಿರುವುದರ ಹಿಂದಿನ ಕಾರಣವೇನು ಗೊತ್ತಾ?

ಬೆಂಗಳೂರು, ಗುರುವಾರ, 11 ಜುಲೈ 2019 (11:04 IST)

ಬೆಂಗಳೂರು : ಅತೃಪ್ತ ಶಾಸಕ ಗೋಪಾಲಯ್ಯರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳಲು ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಇದಕ್ಕೆ ಕಾರಣವೇನೆಂಬುದನ್ನು ಕೂಡ ಕಾರ್ಯಕರ್ತರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.




ಬಿಬಿಎಂಪಿ ಮಾಜಿ ಮೇಯರ್ ಎಸ್. ಹರೀಶ್ ನೇತೃತ್ವದಲ್ಲಿ ಸುಮಾರು 50ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಬಿಜೆಪಿ ರಾಜ್ಯಾಧ್ಯಕ್ಷ ಅವರ ನಿವಾಸಕ್ಕೆ ಆಗಮಿಸಿ ಭೇಟಿ ಮಾಡಿ ಬಿಜೆಪಿಗೆ ಸೇರ್ಪಡೆಗೆ ನಮ್ಮ ವಿರೋಧ ಇದೆ ಎಂದು ಹೇಳಿದ್ದಾರೆ.


ಹಾಗೇ ಶಾಸಕ ಗೋಪಾಲಯ್ಯರ ಮೇಲೆ 1996ರಲ್ಲಿ ಬಿಜೆಪಿ ಕಾರ್ಯಕರ್ತರನ್ನು ಕೊಲೆ ಮಾಡಿಸಿದ ಆರೋಪವಿದೆ. ಶಾಸಕರ ಗೋಪಾಲಯ್ಯ ಹಿನ್ನಲೆ ಉಳ್ಳವರಾಗಿದ್ದಾರೆ. ಈಗ ಮಂತ್ರಿ ಆಸೆಗಾಗಿ ಗೋಪಾಲಯ್ಯ ಬಿಜೆಪಿಗೆ ಬರ್ತಾ ಇದ್ದಾರೆ. ಅವರ ಸೇರ್ಪಡೆಯಿಂದ ಪಕ್ಷಕ್ಕೆ ಯಾವುದೇ ಲಾಭವಿಲ್ಲ. ಜೆಡಿಎಸ್ ನಿಂದ ಸವಲತ್ತು ಸ್ವೀಕರಿಸಿ ಆ ಪಕ್ಷಕ್ಕೆ ದ್ರೋಹ ಬಗೆದಿದ್ದಾರೆ.


ರಾಜ್ಯಸಭಾ ಚುನಾವಣೆಯಲ್ಲೂ ಅಡ್ಡ ಮತದಾನ ಮಾಡಿದ್ದಾರೆ. ಇಂಥವರನ್ನು ಸೇರಿಸಿಕೊಂಡರೆ ಪಕ್ಷದ ತತ್ವ ಸಿದ್ಧಾಂತಕ್ಕೆ ಬೆಲೆ ಇಲ್ಲದಂತಾಗುತ್ತದೆ ಎಂದು ವಿರೋಧಕ್ಕೆ ಕಾರಣವೇನೆಂಬುದನ್ನು ಬಿಜೆಪಿ ನಾಯಕರಿಗೆ ಬರೆದಿರುವ ಪತ್ರದಲ್ಲಿ ಕಾರ್ಯಕರ್ತರು ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಶಾಸಕ ರೇಣುಕಾಚಾರ್ಯ ವಾಗ್ದಾಳಿ

ಬೆಂಗಳೂರು : ಶಾಸಕರ ರಾಜೀನಾಮೆ ಅಂಗೀಕಾರ ಮಾಡಲು ವಿಳಂಬ ಮಾಡುತ್ತಿರುವ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ...

news

ಅತೃಪ್ತರ ಸೇರ್ಪಡೆಗೂ ಮುನ್ನ ಬಿಜೆಪಿಗೆ ಎದುರಾಗಿದೆ ಸಂಕಷ್ಟ

ಬೆಂಗಳೂರು : ಅತೃಪ್ತರನ್ನು ಸೇರ್ಪಡೆ ಮಾಡಿಕೊಂಡು ಸರ್ಕಾರ ರಚನೆ ಮಾಡಬೇಕೆಂದುಕೊಂಡಿದ್ದ ಬಿಜೆಪಿಗೆ ...

news

ನಾನು ಶಾಸಕ ಸ್ಥಾನಕ್ಕೆ ಮಾತ್ರ ರಾಜೀನಾಮೆ ನೀಡಿದ್ದು, ಕಾಂಗ್ರೆಸ್ ನಲ್ಲಿಯೇ ಇದ್ದೇನೆ- ಎಸ್.ಟಿ.ಸೋಮಶೇಖರ್

ಬೆಂಗಳೂರು : ರಾಜೀನಾಮೆ ನೀಡಿ ಮುಂಬೈ ಸೇರಿದ್ದ ಯಶವಂತಪುರ ಕಾಂಗ್ರೆಸ್ ಶಾಸಕ ಎಸ್.ಟಿ.ಸೋಮಶೇಖರ್ ತಡರಾತ್ರಿ ...

news

ಮೈತ್ರಿ ಸರ್ಕಾರದ ಉಳಿವಿಗಾಗಿ ತಿಮ್ಮಪ್ಪನ ಮೊರೆ ಹೋದ ರೇವಣ್ಣ

ಬೆಂಗಳೂರು : ಶಾಸಕರ ರಾಜೀನಾಮೆ ಪ್ರಕ್ರಿಯೆಯಿಂದ ಉರುಳಿ ಬೀಳುವ ಹಂತದಲ್ಲಿದ್ದ ಮೈತ್ರಿ ಸರ್ಕಾರವನ್ನ ಉಳಿಸಪ್ಪ ...