Widgets Magazine

ಇಡ್ಲಿ ತಿಂದ ಬಿಲ್ ಕೇಳಿದ್ದಕ್ಕೆ ರೌಡಿಶೀಟರ್ ಮಾಡಿದ್ದೇನು ಗೊತ್ತಾ? ಶಾಕಿಂಗ್!

ಕಲಬುರಗಿ| Jagadeesh| Last Modified ಮಂಗಳವಾರ, 12 ಫೆಬ್ರವರಿ 2019 (15:33 IST)
ಇಡ್ಲಿ ತಿಂದ ಬಿಲ್ ಕೇಳಿದಕ್ಕೆ ವ್ಯಾಪಾರಿಯೊಬ್ಬನ ಮೇಲೆ ರೌಡಿಶೀಟರ್‌ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.

ಕಲಬುರಗಿ ನಗರದ ಲಾಲಗೇರಿ ಕ್ರಾಸ್ ಬಳಿ ಘಟನೆ ನಡೆದಿದೆ.

ಕುಖ್ಯಾತ ರೌಡಿಶೀಟರ್ ಅಪ್ಪಾಸಾಬ್‌ನಿಂದ ಇಡ್ಲಿ ವ್ಯಾಪಾರಿ ಲೋಹಿತ್ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ.

ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ರೌಡಿಶೀಟರ್ ಅಪ್ಪಾಸಾಬ್ ಸ್ಥಳದಿಂದ ಪರಾರಿಯಾಗಿದ್ದಾನೆ. ತೀವ್ರ ಗಾಯಗೊಂಡ ಇಡ್ಲಿ ವ್ಯಾಪಾರಿ ಲೋಹಿತ್‌ನನ್ನ
ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ನ್ಯೂ ರಾಘವೇಂದ್ರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರಕರಣ ಇದಾಗಿದೆ.


ಇದರಲ್ಲಿ ಇನ್ನಷ್ಟು ಓದಿ :