ಶಾಸಕ ಹೆಚ್ ವೈ ಮೇಟಿ ಅವರ ವಿರುದ್ದ ಫೇಸ್‍ಬುಕ್‍ ಪೋಸ್ಟ್ ನಲ್ಲಿ ಈ ಯುವಕ ಹಾಕಿದ್ದೇನು ಗೊತ್ತಾ...?

ಬಾಗಲಕೋಟೆ, ಶುಕ್ರವಾರ, 9 ಫೆಬ್ರವರಿ 2018 (10:39 IST)

ಬಾಗಲಕೋಟೆ : ಶಾಸಕ ಹೆಚ್ ವೈ ಮೇಟಿಯವರನ್ನು ಬಾಗಲಕೋಟೆಯ ಹರನಸಿಕಾರಿ ಕಾಲೋನಿಯಲ್ಲಿನ ಚರ್ಚ್ ನ ಕಾರ್ಯಕ್ರಮಕ್ಕೆ ಆಹ್ವಾನಿಸಲಾದ ಹಿನ್ನಲೆಯಲ್ಲಿ , ಅವರ ಬಗ್ಗೆ ಭಾವಚಿತ್ರ ಸಮೇತ ಅವಹೇಳನಕಾರಿಯಾಗಿ ಬರೆದು ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ ಯುವಕನೋರ್ವನನ್ನು ಬಾಗಲಕೋಟೆ ಪೊಲೀಸರು ಬಂಧಿಸಿದ್ದಾರೆ.


ಮೂಲತಃ ಬಾಗಲಕೋಟೆಯ ಡ್ಯಾನಿಯಲ್ ನ್ಯೂಟನ್ ಎಂಬ ಯುವಕ, ಹವ್ಯಾಸಿ ಹಾವು ಹಿಡಿಯುವ ವ್ಯಕ್ತಿಯಾಗಿದ್ದು ಸ್ನೇಕ್ ಡ್ಯಾನಿಯಲ್ ಎಂದೇ ಹೆಸರುವಾಸಿಯಾಗಿರುವ ಈತ ತನ್ನ ಫೇಸ್‍ಬುಕ್ ನಲ್ಲಿ ‘’ಇಂತವರನ್ನು ಮಂದಿರ, ಮಸೀದಿ ಚರ್ಚ್‍ಗಳ ಧಾರ್ಮಿಕ ಕಾರ್ಯಕ್ಕೆ ಆಹ್ವಾನಿಸೋದು ಸರಿಯಲ್ಲ. ಹಾಗಂತ ನನಗೆ ಅವರ ಬಗ್ಗೆ ವೈಯಕ್ತಿಕ ದ್ವೇಷವಿಲ್ಲ. ಸಮಾಜ ತಲೆತಗ್ಗಿಸುವಂತ ಕೃತ್ಯವೆಸಗಿದ ಇಂತವರನ್ನು ಧಾರ್ಮಿಕ ಸ್ಥಳಕ್ಕೆ ಆಹ್ವಾನಿಸಿ, ಪವಿತ್ರ ಸ್ಥಳವನ್ನು ಅಪವಿತ್ರ ಮಾಡಬೇಡಿ ಎಂಬ ಕಳಕಳಿ’’ ಎಂದು ಬರೆದು ಹೆಚ್ ವೈ ಮೇಟಿ ಅವರಿಗೆ ಅವಹೇಳನ ಮಾಡಿದ್ದಾನೆ.


ಇದನ್ನು ಗಮನಿಸಿದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮೇಟಿ ಬೆಂಬಲಿಗರು ಪೊಲೀಸರಿಗೆ ತಿಳಿಸಿದ್ದರಿಂದ ಆತನನ್ನು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಒಂದು ಲಕ್ಷಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸುವ ಶಪಥಗೈದ ಆನಂದಸಿಂಗ್

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಒಂದು ಲಕ್ಷಕ್ಕೂ ಅಧಿಕ ಮತಗಳು ಪಡೆದು ಗೆಲುವು ಸಾಧಿಸುವುದಾಗಿ ಮಾಜಿ ...

news

ರಜನಿಕಾಂತ್ ಜೊತೆಗೆ ಚುನಾವಣೆ ಎದರಿಸಲು ಯೋಚಿಸಿಬೇಕಿದೆ- ಕಮಲ್ ಹಾಸನ್

ಸೂಪರ್ ಸ್ಟಾರ್ ರಜನಿಕಾಂತ ಹಾಗೂ ನಾನು ಒಟ್ಟಾಗಿ ಚುನಾವಣೆ ಎದುರಿಸುವ ಅಗತ್ಯಬಿದ್ದರೆ ಆಲೋಚನೆ ...

news

ಯೋಧರು ಸಾಯುತ್ತಿದ್ದರೆ ಸರ್ಕಾರದಿಂದ ಪಕೋಡ ಮಾತು- ಶಿವಸೇನೆ ಕಿಡಿ

ಗಡಿಯಲ್ಲಿ ಯೋಧರು ಸಾಯುತ್ತಿದ್ದರೆ ಸರ್ಕಾರ ಪಕೋಡ ಬಗ್ಗೆ ಮಾತನಾಡುತ್ತಿದೆ ಎಂದು ಎನ್ ಡಿಎ ಮಿತ್ರಪತ್ರ ...

news

ಮಠಗಳ ವಿರೋಧಕ್ಕೆ ಬೆಚ್ಚಿದ ಸರ್ಕಾರ: ಮಹಾಮಸ್ತಕಾಭಿಷೇಕ ವೇದಿಕೆಯಲ್ಲೇ ಕಾಂಗ್ರೆಸ್ ಶಾಸಕರಿಗೆ ಛೀಮಾರಿ?!

ಬೆಂಗಳೂರು: ಮಠ ಹಾಗೂ ಮಠದ ವ್ಯಾಪ್ತಿಯಲ್ಲಿರುವ ದೇವಾಲಯಗಳನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳಲು ಹೊರಟಿದ್ದ ...

Widgets Magazine
Widgets Magazine