ಆಸ್ತಿಕೊಡಲಿಲ್ಲ ಎಂಬ ಕಾರಣಕ್ಕೆ ಮಗ ತಂದೆಗೆ ಮಾಡಿದ್ದೇನು ಗೊತ್ತಾ? ಕೇಳಿದ್ರೆ ಶಾಕ್ ಆಗ್ತೀರಾ

ಬೆಂಗಳೂರು, ಬುಧವಾರ, 29 ಆಗಸ್ಟ್ 2018 (06:33 IST)

ಬೆಂಗಳೂರು : ಆಸ್ತಿಗಾಗಿ ಜನರು ಸಂಬಂಧಗಳನ್ನು ಲೆಕ್ಕಿಸದೆ ಎಂತಹ ಕ್ರೂರ ಕೃತ್ಯಕ್ಕೂ ಮುಂದಾಗುತ್ತಾರೆ ಎಂಬುದಕ್ಕೆ ಜೆ.ಪಿ.ನಗರದ ಶಾಕಾಂಬರಿ ಬಡವಾಣೆಯಲ್ಲಿ ನಡೆದ ಘಟನೆ ಒಂದು ಸಾಕ್ಷಿಯಾಗಿದೆ.


ಆಸ್ತಿ ಬರೆದುಕೊಡಲಿಲ್ಲ ಅಂತಾ ಪಾಪಿ ಮಗ ಚೇತನ್ ಎಂಬಾತ ತನ್ನ ಬೆರಳುಗಳಿಂದಲೇ 65 ವರ್ಷದ ತಂದೆ ಪರಮೇಶ್ ಅವರ ಕಣ್ಣು ಕಿತ್ತು ಹಾಕಿದ್ದಾನೆ. ಈ ಘಟನೆ ಮಂಗಳವಾರ ಮಧ್ಯಾಹ್ನ ಸುಮಾರು 12.30ಕ್ಕೆ ವೇಳೆ ನಡೆದಿದೆ.


ವಿಧಾನಸೌಧದ ಮುಖ್ಯ ಕಾರ್ಯದರ್ಶಿಗಳ ಕಚೇರಿಯ ನಿವೃತ್ತ ನೌಕರರಾಗಿರುವ ಪರಮೇಶ್ ಶಾಕಾಂಬರಿ ನಗರದಲ್ಲಿ ಸ್ವಂತ ಮನೆ ಮಾಡಿಕೊಂಡು ನಿವೃತ್ತಿ ಜೀವನ ನಡೆಸುತ್ತಿದ್ದರು. ಅವರ ಎರಡನೇ ಮಗನಾಗಿರುವ ಚೇತನ್ ಒಬ್ಬ ಡ್ರಗ್ ಅಡಿಕ್ಟ್ ಆಗಿದ್ದು, ಮನೆಯಲ್ಲಿ ಹಣಕ್ಕಾಗಿ ಪೋಷಕರನ್ನು ಪದೇ ಪದೇ ಪೀಡಿಸುತ್ತಿದ್ದನಂತೆ. ಪೋಷಕರು ಹಣ ಕೊಡದೇ ಇದ್ದಾಗ ಆಸ್ತಿಯಲ್ಲಿ ಪಾಲು ಬೇಕೆಂದು ಹಠ ಹಿಡಿಯುತ್ತಾನಂತೆ.


ಅಂದು ಕೂಡ ಚೇತನ್ ಆಸ್ತಿಯಲ್ಲಿ ಪಾಲು ಬೇಕೆಂದು ತಂದೆಯೊಂದಿಗೆ ಜಗಳ ಮಾಡಿ ತನ್ನ ಬೆರಳುಗಳ ಉಗುರಿನ ಸಹಾಯದಿಂದ ತಂದೆಯ ಕಣ್ಣು ಗುಡ್ಡೆಯನ್ನು ಕಿತ್ತು ಬಿಸಾಕಿದ್ದಾನೆ. ಮತ್ತೊಂದು ಕಣ್ಣು ಸಂಪೂರ್ಣ ರಕ್ತಮಯವಾಗಿದೆ. ನಂತರ ಅಲ್ಲಿಂದ ಪರಾರಿಯಾಗಲು ಯತ್ನಿಸಿದ ಚೇತನ್ ನನ್ನು ಸ್ಥಳೀಯರು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದಾರೆ.


ಗಾಯಗೊಂಡಿದ್ದ ಪರಮೇಶ್ ಅವರನ್ನು ಜೆ.ಪಿ.ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು ಅವರನ್ನು ನೋಡಿದ ವೈದ್ಯರು ಎರಡು ಕಣ್ಣುಗಳು ಸಂಪೂರ್ಣ ಹಾನಿಗೊಳಗಾಗಿವೆ ಎಂದು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಐದು ವರ್ಷ ಜೆಡಿಎಸ್ ನವರೇ ಸಿಎಂ: ದಿನೇಶ್ ಗುಂಡೂರಾವ್ ಸ್ಪಷ್ಟನೆ

ಸಿದ್ದರಾಮಯ್ಯನವರ ಹೇಳಿಕೆಯನ್ನು ಬೇರೆ ರೀತಿ ಅರ್ಥೈಸಲಾಗಿದೆ. ಆದರೆ ಸಮ್ಮಿಶ್ರ ಸರ್ಕಾರದ ಒಪ್ಪಂದದಂತೆ ಐದು ...

news

ಸಿದ್ದರಾಮಯ್ಯ ವಿದೇಶ ಪ್ರವಾಸದ ಬಳಿಕ ಮೈತ್ರಿ ಸರ್ಕಾರದ ವಿಚ್ಛೇದನ: ಭವಿಷ್ಯ ನುಡಿದವರಾರು?

ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಬೆಂಬಲಿತ ಜೆಡಿಎಸ್ ನ ಅಪವಿತ್ರ ಮೈತ್ರಿ ಸರ್ಕಾರ ಬಹಳ ದಿನ ...

news

ಬಡವರ ಹಣ ಪೀಕುತ್ತಿರುವ ಸರಕಾರಿ ವೈದ್ಯೆ!

ವೈದ್ಯರನ್ನು ಈಗಿನ ಕಾಲದಲ್ಲಿ ಆರೋಗ್ಯವನ್ನು ಕಾಪಾಡುವ ದೇವರೆಂದು ನಂಬಿದ್ದಾರೆ. ಅದರಂತೆ ಸರಕಾರ ಬಡವರ ...

news

ಸ್ಥಳೀಯ ಚುನಾವಣೆ: ಪ್ರಚಾರದಲ್ಲಿ ಕೆಪಿಎನ್

ವಿಧಾನ ಪರಿಷತ್ ಸದಸ್ಯ ಹಾಗೂ ಬಿಜೆಪಿ ಮುಖಂಡ ಕೆ.ಪಿ.ನಂಜುಂಡಿ ಸ್ಥಳೀಯ ಸಂಸ್ಥೆ ಚುನಾವಣೆ ಹಿನ್ನೆಲೆಯಲ್ಲಿ ...

Widgets Magazine