ವಿಚಿತ್ರ ಸುರಂಗ ಪತ್ತೆಯಾಗಿದ್ದು ಎಲ್ಲಿ ಗೊತ್ತಾ?

ಬುಧವಾರ, 12 ಸೆಪ್ಟಂಬರ್ 2018 (16:21 IST)

ಆ ಗ್ರಾಮದಲ್ಲಿ ಇದ್ದಕ್ಕಿದ್ದಂತೆಯೇ ಸುರಂಗವೊಂದು ಪತ್ತೆಯಾಗಿದೆ. ಗ್ರಾಮದ ಪ್ರಮುಖ ರಸ್ತೆ ಹಾಗೂ ಮುಖ್ಯ ರಸ್ತೆಯಲ್ಲಿಯೇ ಪತ್ತೆಯಾಗಿದೆ. ಹೀಗಾಗಿ ಗ್ರಾಮಸ್ಥರು ಆತಂಕಗೊಂಡಿದ್ದಾರೆ.
 
ಮಂಡ್ಯದಲ್ಲಿ ವಿಚಿತ್ರ ಸುರಂಗ ಪತ್ತೆಯಾಗಿದೆ. ಮಂಡ್ಯ‌ ಜಿಲ್ಲೆಯ ಮದ್ದೂರು ತಾಲ್ಲೂಕಿನ ಮುಟ್ಟನಹಳ್ಳಿ ಗ್ರಾಮದಲ್ಲಿ ಪತ್ತೆಯಾದ ಸುರಂಗ ಇದಾಗಿದೆ. ಕಳೆದ ಮೂರು ದಿನಗಳ ಹಿಂದೆ ಗ್ರಾಮಸ್ಥರ ಕಣ್ಣಿಗೆ ಬಿದ್ದಿರುವ ಸುರಂಗ ಮಾರ್ಗವು,
ಮುಟ್ಡನಹಳ್ಳಿ ಗ್ರಾಮದ ರಸ್ತೆ ಮಧ್ಯದಲ್ಲೇ ಪತ್ತೆಯಾಗಿದೆ. ಸುರಂಗ ನೋಡಿ ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ಸುಮಾರು ಹತ್ತರಿಂದ ಹದುನೈದು ಅಡಿ ಇರುವ ಸುರಂಗವು ಕಳೆದ ಮೂರು ದಿನಗಳ ಹಿಂದೆ ಮಳೆ ಬಂದ ಪರಿಣಾಮ ಕುಸಿದಿರುವ ಭೂಮಿಯಿಂದ ರಸ್ತೆ ನಡುವೆ ಕಾಣಿಸಿಕೊಂಡಿದೆ.

ಈ ಕುರಿತು ಮಾಹಿತಿ ನೀಡಿದರೂ ಸ್ಥಳಕ್ಕೆ ಸಂಬಂಧಿಸಿದ ಅಧಿಕಾರಿಗಳು ಭೇಟಿ ನೀಡಿಲ್ಲ. ಮಕ್ಕಳು, ಪ್ರಾಣಿಗಳು ಸುರಂಗದ ಒಳಗೆ ಬೀಳಬಹುದೆಂಬ ಆತಂಕದಲ್ಲಿ ಗ್ರಾಮಸ್ಥರು ಮಣ್ಣು ಮುಚ್ಚಿದ್ದಾರೆ. ಮಣ್ಣು ಮುಚ್ಚಿದರೂ ಇನ್ನು ಆರು ಅಡಿ ಆಳ ಇರುವ ಸುರಂಗ ಆತಂಕಕ್ಕೆ ಕಾರಣವಾಗಿದೆ. ಸುರಂಗದ ಸುತ್ತ ಕಲ್ಲು ಚಪ್ಪಡಿ ಮುಚ್ಚಲಾಗಿದೆ.

 

 

ನಗರಸಭಾ ಸದಸ್ಯನ ಕೈಯಲ್ಲಿ ಅರಳಿದ ಗಣಪ

ನಗರಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಯೋರ್ವರು ಒತ್ತಡದ ನಡುವೆಯೂ 6೦ಕ್ಕೂ ಹೆಚ್ಚು ಗಣೇಶ ...

ಹಿರಣ್ಯಕೇಶಿ ನದಿಯಲ್ಲಿ ಮೊಸಳೆ ಪ್ರತ್ಯಕ್ಷ: ಆತಂಕದಲ್ಲಿ ಜನತೆ

ಹಿರಣ್ಯಕೇಶಿ ನದಿಯಲ್ಲಿ ಆಗಾಗ್ಗೆ ಮೊಸಳೆಯೊಂದು ಕಾಣಿಸಿಕೊಳ್ಳುತ್ತಿದೆ. ಇದು ಜನರಲ್ಲಿ ಆತಂಕಕ್ಕೆ ...

ಶ್ರೀ ಕೃಷ್ಣ ದೇವಾಲಯಕ್ಕೆ ಕನ್ನ: ಹುಂಡಿ ಕಳ್ಳತನ

ಕೃಷ್ಣ ದೇಗುಲದಲ್ಲಿ ಕಳ್ಳತನ ಮಾಡಲಾಗಿದೆ. ತಡರಾತ್ರಿ ದೇವಸ್ಥಾನದ ಬಾಗಿಲು ಒಡೆದ ಕಳ್ಳರು, ಹುಂಡಿಯನ್ನು ...

ಗೌರಿ ಗಣೇಶ ಪ್ರತಿಷ್ಠಾಪನೆ: ಪರ್ಮಿಷನ್ ಕಡ್ಡಾಯ

ಗೌರಿ ಗಣೇಶ ಚತುರ್ಥಿ ಹಿನ್ನೆಲೆ-ಗಣೇಶ ಚತುರ್ಥಿ ಆಚರಣೆಗೆ ಹಾಗೂ ಸಾರ್ವಜನಿಕ ಸ್ಥಳದಲ್ಲಿ ಗಣೇಶ ಮೂರ್ತಿ ...