ವೈದ್ಯರ ಮುಷ್ಕರ,,ರೋಗಿಗಳ ಪರದಾಟ..18ಕ್ಕೂ ಹೆಚ್ಚು ಸಾವು

ಬೆಂಗಳೂರು, ಗುರುವಾರ, 16 ನವೆಂಬರ್ 2017 (11:11 IST)

ಖಾಸಗಿ ವೈದ್ಯರ ಮುಷ್ಕರ ಮುಂದುವರಿದಿದ್ದು ರೋಗಿಗಳ ಪರದಾಟ ತಾರಕ್ಕಕೇರಿದೆ. ಈಗಾಗಲೇ ರೋಗಿಗಳ ಸಾವಿನ ಸಂಖ್ಯೆ 18ಕ್ಕೂ ಹೆಚ್ಚಾಗಿದೆ ಎಂದು ಮೂಲಗಳು ತಿಳಿಸಿವೆ.
 
ಖಾಸಗಿ ವೈದ್ಯರ ಮತ್ತು ಸರಕಾರದ ಮೊಂಡಾಟದಿಂದಾಗಿ ರೋಗಿಗಳು ದಯನೀಯ ಸ್ಥಿತಿ ಎದುರಿಸುವಂತಾಗಿದೆ. ರಾಜ್ಯ ಸರಕಾರ ಜಾರಿಗೆ ತರಲು ಉದ್ದೇಶಿಸಿರುವ ಕೆಪಿಎಂಇ ಕಾಯ್ದೆ ವಿರೋಧಿಸಿ ಖಾಸಗಿ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ.
 
ಖಾಸಗಿ ವೈದ್ಯರಿಗೆ ಮುಷ್ಕರ ನಿಲ್ಲಿಸುವಂತೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಯಾವುದೇ ಕಾರಣಕ್ಕೂ ಮಸೂದೆ ಒಪ್ಪುವ ಮಾತೇ ಇಲ್ಲ ಎಂದು ಖಾಸಗಿ ವೈದ್ಯರ ಸಂಘ ಹಟಕ್ಕೆ ಬಿದ್ದಿದೆ ಎನ್ನಲಾಗಿದೆ.
 
ಖಾಸಗಿ ವೈದ್ಯರ ಮಷ್ಕರ ನಾಲ್ಕನೇ ದಿನಕ್ಕೆ ಕಾಲಿರಿಸಿದ್ದು ಜೆಡಿಎಸ್ ಮತ್ತು ಬಿಜೆಪಿ ವೈದ್ಯರನ್ನು ಬೆಂಬಲಿಸುತ್ತಿವೆ. ಮಸೂದೆ ಜನಸಾಮಾನ್ಯರ ಪರವಾಗಿದ್ದರಿಂದ ಸದನದಲ್ಲಿ ಮಂಡಿಸಿಯೇ ಸಿದ್ದ ಎಂದು ಆರೋಗ್ಯ ಖಾತೆ ಸಚಿವ ಕೆ.ಆರ್.ರಮೇಶ್ ಕುಮಾರ್  ಘೋಷಿಸಿದ್ದಾರೆ.  
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಖಾಸಗಿ ವೈದ್ಯರಿಗೆ ಸಿಎಂ ಸಿದ್ದರಾಮಯ್ಯ ಟ್ವಿಟರ್ ನಲ್ಲಿ ಮನವಿ

ಬೆಂಗಳೂರು: ಖಾಸಗಿ ವೈದ್ಯರಿಗೆ ಕಡಿವಾಣ ಹಾಕುವಂತಹ ವಿಧೇಯಕ ಮಂಡಿಸಲು ಹೊರಟಿರುವ ಸರ್ಕಾರದ ವಿರುದ್ಧ ಮುಷ್ಕರ ...

news

ಮುನಿದ ಪತ್ನಿಯ ಹಾಡು ಹೇಳಿ ಒಲಿಸಿಕೊಂಡ ಪತಿ

ನವದೆಹಲಿ: ಸಿನಿಮಾಗಳಲ್ಲಿ ಹೀರೋಯಿನ್ ಮುನಿಸಿಕೊಂಡಾಗ ಹೀರೋ ಹಾಡು ಹೇಳಿ ಆಕೆಯನ್ನು ಒಲಿಸಿಕೊಳ್ಳುವುದು ...

news

ಈಗಲೂ ಮೋದಿಯೇ ಭಾರತೀಯರ ಜನಪ್ರಿಯ ನಾಯಕ! ರಾಹುಲ್, ಕೇಜ್ರಿವಾಲ್ ಗೆ ಯಾವ ಸ್ಥಾನ?

ನವದೆಹಲಿ: ಈಗಲೂ ಭಾರತೀಯರ ಜನಪ್ರಿಯ ನಾಯಕನಾಗಿ ಪ್ರಧಾನಿ ಮೋದಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ ಎಂದು ...

news

ನಗೆಪಾಟಲಿಗೀಡಾದ ರಾಹುಲ್ ಗಾಂಧಿ ವ್ಯಂಗ್ಯ!

ಅಹಮ್ಮದಾಬಾದ್: ಗುಜರಾತ್ ಚುನಾವಣೆ ಪ್ರಚಾರಕ್ಕಾಗಿ ಗುಜರಾತ್ ನಲ್ಲಿ ಬೀಡುಬಿಟ್ಟಿರುವ ಕಾಂಗ್ರೆಸ್ ಯುವರಾಜ ...

Widgets Magazine
Widgets Magazine