ಕೃಷ್ಣರನ್ನು ಬಿಜೆಪಿಗೆ ಸೇರಿಸದಂತೆ ಮೋದಿಗೆ ಹಿರೇಮಠ್ ಪತ್ರ

ಹುಬ್ಬಳ್ಳಿ, ಭಾನುವಾರ, 19 ಮಾರ್ಚ್ 2017 (17:38 IST)

Widgets Magazine

ಭೂ ಹಗರಣಗಳಲ್ಲಿ ಸಿಲುಕಿರುವ ಮಾಜಿ ಸಿಎಂ ಎಸ್.ಎಂ.ಕೃಷ್ಣರನ್ನು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳಿಸದಂತೆ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ್ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ.
 
ಮಾಜಿ ಸಿಎಂ ಕೃಷ್ಣ ಅವರ ಅಳಿಯ ಅರಣ್ಯ ಭೂಮಿಯನ್ನು ಕಬಳಿಸಿದ ಆರೋಪ ಎದುರಿಸುತ್ತಿದ್ದಾರೆ. ಅಳಿಯನನ್ನು ರಕ್ಷಿಸಲು ಕೃಷ್ಣ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
 
ಎಸ್.ಎಂ.ಕೃಷ್ಣ ಅವರ ಅಳಿಯ ಸಿದ್ಧಾರ್ಥ ಭೂ ಕಬಳಿಕೆ ಬಗ್ಗೆ ತನಿಖೆ ನಡೆಸುವಂತೆ ಕೋರಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಲಾಗಿದೆ. ಯಾವುದೇ ಕ್ಷಣದಲ್ಲೂ ಅವರ ವಿರುದ್ಧದ ಭೂ ಹಗರಣಗಳ ಬಗ್ಗೆ ತನಿಖೆಗೆ ಆದೇಶ ಹೊರಬೀಳಲಿದೆ ಎಂದರು.
 
ಭ್ರಷ್ಟಾಚಾರದ ವಿರುದ್ಧ ಸಮರ ಸಾರಿರುವ ಪ್ರಧಾನಮಂತ್ರಿ ಮೋದಿ, ಅದು ಹೇಗೆ ಭ್ರಷ್ಟಾಚಾರ ಆರೋಪಗಳಲ್ಲಿ ಸಿಲುಕಿರುವವರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸುತ್ತಾರೆ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ್ ಪ್ರಶ್ನಿಸಿದ್ದಾರೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಕಾಂಗ್ರೆಸ್ ಪಕ್ಷವನ್ನು ಯಾರೂ ನಂಬಬಾರದು: ಕೆ.ಎಸ್.ಈಶ್ವರಪ್ಪ

ವಿಜಯಪುರ: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಭ್ರಷ್ಟಾಚಾರ ಸರಕಾರ. ಕಾಂಗ್ರೆಸ್ ಪಕ್ಷವನ್ನು ...

news

ಅಡಳಿತ ಪರ ಕಾರ್ಯನಿರ್ವಹಣೆ: ನಾಲ್ವರು ಅಧಿಕಾರಿಗಳ ವರ್ಗಾವಣೆಗೆ ಬಿಜೆಪಿ ಆಗ್ರಹ

ಗುಂಡ್ಲುಪೇಟೆ: ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ನಾಲ್ವರು ಅಧಿಕಾರಿಗಳು ...

news

ಯುಗಾದಿ ಹಬ್ಬದಂದು ಎಚ್‌ಡಿಕೆ ಕ್ಯಾಬ್ಸ್‌ಗೆ ಚಾಲನೆ

ಓಲಾ ಮತ್ತು ಉಬೇರ್ ಕಂಪೆನಿಗಳಿಗೆ ಸವಾಲೊಡ್ಡಲು ಎಚ್‌ಡಿಕೆ ಕ್ಯಾಬ್ಸ್ ಹುಟ್ಟು ಹಾಕಲಾಗಿದ್ದು, ಯುಗಾದಿ ...

news

ಗ್ರಾಮಸ್ಥರ ಮಾತಿಗೆ ಯಾಕೆ ಕಿವಿಗೊಡಲ್ಲ: ಸಚಿವರ ಕಿಡಿ

ಹಾಸನ: ಜಿಲ್ಲೆಯ ಸಕಲೇಶ್‌ಪುರದ ಬಾಳ್ಳುಪೇಟೆ ಗ್ರಾಮದ ಆಸ್ಪತ್ರೆ ಹದಗೆಟ್ಟಿದೆ ಎನ್ನುವ ಗ್ರಾಮಸ್ಥರ ಮಾತಿಗೆ ...

Widgets Magazine