ನಮ್ಮ ಕಾರ್ಯಕರ್ತರನ್ನು ಮುಟ್ಟಿದ್ರೆ ಹುಷಾರ್: ಎಸ್‌ಪಿಗೆ ಕರಂದ್ಲಾಜೆ ವಾರ್ನಿಂಗ್

ಉಡುಪಿ:, ಗುರುವಾರ, 13 ಜುಲೈ 2017 (18:57 IST)

ಬಿಜೆಪಿಯ ನಮ್ಮ ಕಾರ್ಯಕರ್ತರನ್ನು ಮುಟ್ಟಿದ್ರೆ ಹುಷಾರ್ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸಂಸದೆ ಶೋಭಾ ಕರಂದ್ಲಾಜೆ ಧಮಕಿ ಹಾಕಿದ್ದಾರೆ.
 
ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆಯನ್ನು ವಿರೋಧಿಸಿ ಸಂಸದೆ ಶೋಭಾ ಕರಂದ್ಲಾಜೆ ಸೇರಿದಂತೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಭಾರಿ ಪ್ರತಿಭಟನೆ ನಡೆಸಿದರು.
 
ಈ ಸಂದರ್ಭದಲ್ಲಿ ಮಾತನಾಡಿದ ಸಂಸದೆ ಶೋಬಾ ಕರಂದ್ಲಾಜೆ, ನಾವು ಮೀಟಿಂಗ್ ಕರೆದರೆ ಸ್ಥಳಕ್ಕೆ ಬರುವುದಿಲ್ಲ. ನೀವೇನು ಸರಕಾರದ ಎಸ್‌ಪಿಯೋ ಅಥವಾ ಕಾಂಗ್ರೆಸ್ ಪಕ್ಷದ ಎಸ್‌ಪಿಯೋ ಕಾಂಗ್ರೆಸ್ ಪಕ್ಷದ ಸರಕಾರ ಕೇವಲ 10 ತಿಂಗಳು ಅಧಿಕಾರದಲ್ಲಿರುತ್ತದೆ ಎನ್ನುವುದು ಮರೆಯಬೇಡಿ ಎಂದು ಗುಡುಗಿದ್ದಾರೆ. 
 
ಪೊಲೀಸ್ ಇಲಾಖೆಗೆ ಏನು‌ ಪಾಠ ಕಲಿಸಬೇಕು ಎನ್ನುವುದು ನಮಗೆ ಗೊತ್ತಿದೆ. ಸರಕಾರಗಳು ಬರುತ್ತವೆ, ಹೋಗುತ್ತವೆ. ಆದ್ರೆ  ನೀವು ಅನ್ಯಾಯ ಮಾಡಬೇಡಿ. ಜನತೆಗೆ ನ್ಯಾಯ ಒದಗಿಸುವ ಪ್ರಯತ್ನ ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ಶೋಭಾ ಕರಂದ್ಲಾಜೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಜೆಪಿ Bjp Shobha Karandlaje Supritendent Of Police

ಸುದ್ದಿಗಳು

news

ಕಾಂಡೂಮ್`ಗಾಗಿ ಸರ್ಕಾರಿ ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿದ ಯುವಕ..!

ಸಾಮಾನ್ಯವಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಮೂಲಭೂತ ಸೌಲಭ್ಯಗಳಿಗಾಗಿ ಪ್ರತಿಭಟನೆ ನಡೆಸುವುದನ್ನ ...

news

70 ವರ್ಷವಾದ್ರೂ ಸಿಎಂ ಆಗೋಕೆ ಓಡಾಡುತ್ತಿದ್ದಾರೆ: ಬಿಎಸ್‌ವೈಗೆ ಸಿಎಂ ಲೇವಡಿ

ಲಿಂಗಸಗೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪಗೆ 70 ವರ್ಷ ವಯಸ್ಸಾಗಿದೆ. ಇನ್ನೂ ...

news

ಯಡಿಯೂರಪ್ಪಗೆ ಬಹಿರಂಗ ಸವಾಲು ಹಾಕಿದ ಸಿಎಂ ಸಿದ್ದರಾಮಯ್ಯ

ರಾಜ್ಯ ಸರ್ಕಾರದ ಇದುವರೆಗಿನ ಅಭಿವೃದ್ಧಿ ವಿಷಯದ ಚರ್ಚೆಗೆ ಮಾಜಿ ಸಿಎಂ ಯಡಿಯೂರಪ್ಪಗೆ ಸಿಎಂ ಸಿದ್ದರಾಮಯ್ಯ ...

news

ಗಂಗಾ ನದಿಯಲ್ಲಿ ಕಸ ಹಾಕಿದರೆ 50 ಸಾವಿರ ದಂಡ: ಎನ್ ಜಿಟಿ ಆದೇಶ

ಹಿಂದೂಗಳ ಪವಿತ್ರ ಗಂಗಾ ನದಿಯಲ್ಲಿ ಕಸ ಹಾಕುವವರಿಗೆ 50,000 ರೂಪಾಯಿ ದಂಡ ವಿಧಿಸುವಂತೆ ರಾಷ್ಟ್ರೀಯ ಹಸಿರು ...

Widgets Magazine