ಜೋಡಿ ಕೊಲೆ ಪ್ರಕರಣ: ಪಾಲಿಕೆ ಮಾಜಿ ಸದಸ್ಯ ಕೋರ್ಟಗೆ ಹಾಜರ್

ಮೈಸೂರು, ಶುಕ್ರವಾರ, 13 ಜುಲೈ 2018 (16:07 IST)

  


ಸಾಂಸ್ಕೃತಿಕ ನಗರಿಯನ್ನು ಬೆಚ್ಚಿ ಬೀಳಿಸಿದ್ದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟಗೆ ಹಾಜರಾಗಿದ್ದಾನೆ.
 
 ಮೈಸೂರು ಜೋಡಿ ಕೊಲೆ ಹಿನ್ನಲೆ.ಪ್ರಮುಖ ಆರೋಪಿಗಳ ಜೊತೆ  ಪಾಲಿಕೆ ಮಾಜಿ ಸದಸ್ಯ ಕೋರ್ಟ್‌ಗೆ ಹಾಜರಾಗಿದ್ದಾನೆ. ಜಯಲಕ್ಷ್ಮಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಪ್ರಕರಣ ಇದಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮತ್ತೆ ಕೋರ್ಟ್‌ಗೆ ಹಾಜರು ಪಡಿಸಲಾಗಿದೆ. ಮೈಸೂರು ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಅವ್ವ ಮಾದೇಶ್ ಅಲಿಯಾಸ್ ಸಿ.ಮಾದೇಶ್ ನನ್ನು ಪ್ರಕರಣದ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಪೊಲೀಸರು ಹಾಜರುಪಡಿಸಿದ್ದಾರೆ.


ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಶಿಕ್ಷೆಯಾಗಿತ್ತು. ಪ್ರಮುಖ ಆರೋಪಿಗಳು ಹಾಗೂ ಮಹದೇಶ್‌ಗೆ ಜೈಲು ಶಿಕ್ಷೆಯಾಗಿತ್ತು. ಪ್ರಮುಖ ಆರೋಪಿಗಳ ಜೊತೆ ಅವ್ವ ಮಾದೇಶ್, ಕಾಳ, ಮಂಜ ಸೇರಿದಂತೆ ಇಪ್ಪತ್ತಕ್ಕೂ ಅಧಿಕ ಆರೋಪಿಗಳು ಕೋರ್ಟಗೆ ಹಾಜರು ಪಡಿಸಲಾಯಿತು. ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಯಿತು. ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ವಿಚಾರಣೆಗಾಗಿ ಪೊಲೀಸರು ಕೋರ್ಟಗೆ ಕರೆತಂದಿದ್ದರು.

 ಇದರಲ್ಲಿ ಇನ್ನಷ್ಟು ಓದಿ :  
ಜೋಡಿ ಕೊಲೆ ಪ್ರಕರಣ ಪಾಲಿಕೆ ಮಾಜಿ ಸದಸ್ಯ ಸಿ.ಮಾದೇಶ ನ್ಯಾಯಾಲಯ Murder Case Court C.madesh Former Member Of Corporation

ಸುದ್ದಿಗಳು

news

ಕೆಸರಿನಲ್ಲಿ ಸಿಲುಕಿ ಸಾವು!

ರಾಜ್ಯಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆಗೆ ಈಗಾಗಲೇ ಹಲವು ಜನರು ಬಲಿಯಾಗಿದ್ದಾರೆ. ಅಪಾರ ಪ್ರಮಾಣದ ಹಾನಿ ...

news

ಪ್ರಧಾನಿ ನರೇಂದ್ರ ಮೋದಿ ಕಾರ್ಪೋರೇಟ್ ಮಗ ಎಂದವರಾರು?

ಲೋಕಸಭಾ ಚುನಾವಣಾ ಸಮೀಪಿಸಿದಾಗ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಈಗ ರೈತರ ನೆನಪಾಗಿದೆ. ದೇಶದಲ್ಲಿ ...

news

ರಾಶಿಗಟ್ಟಲೇ ಆಧಾರಕಾರ್ಡ ಪತ್ತೆ ಪ್ರಕರಣ: ತನಿಖೆಗೆ ಆದೇಶ

ಪಿಬಿ ರಸ್ತೆಯಲ್ಲಿರುವ ಭವಾನಿ ಬಾರ್ ನಲ್ಲಿ ಪತ್ತೆಯಾಗಿದ್ದ ರಾಶಿ ಗಟ್ಟಲೇ ಆಧಾರ ಕಾರ್ಡಗಳು ನಕಲಿ ಇರುವ ಶಂಕೆ ...

news

ಜಾಲತಾಣದಲ್ಲಿ ಅಂಬೇಡ್ಕರ್ ಗೆ ಅವಮಾನ: ರಾಮಸೇನಾ ಕಾರ್ಯಕರ್ತನಿಗೆ ಧರ್ಮದೇಟು

ಸಾಮಾಜಿಕ ಜಾಲ ತಾಣದಲ್ಲಿ ಸಂವಿಂಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರಗೆ ಅವಮಾನ ಮಾಡಿರುವ ಘಟನೆಗೆ ...

Widgets Magazine