ಬೆಂಗಳೂರನ್ನೇ ಬೆಚ್ಚಿ ಬೀಳಿಸಿತು ಪಾಪಿ ಅಳಿಯನ ಬೀಭತ್ಸ ಕೃತ್ಯ

ಬೆಂಗಳೂರು, ಶನಿವಾರ, 4 ಮಾರ್ಚ್ 2017 (08:21 IST)

ಕ್ಷುಲ್ಲಕ ಕಾರಣಕ್ಕಾಗಿ ಪಾಪಿ ಅಳಿಯನೋರ್ವ ಅತ್ತೆ-ಮಾವ, ಪತ್ನಿ ಸೇರಿದಂತೆ ನಾಲ್ವರ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದು ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿ ಮತ್ತಿಬ್ಬರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಕೋಣನಕುಂಟೆಯ ಅನ್ನಪೂರ್ಣೇಶ್ವರಿ ನಗರದಲ್ಲಿ ಈ ದಾರುಣ ಘಟನೆ ನಡೆದಿದೆ.
ಮುರುಗಮ್ಮ, ಕುಮಾರ್ ಕೊಲೆಯಾದ ದಂಪತಿ. ಅವರ ಮಗಳಾದ ಸತ್ಯಾ ಪತಿ ಸೆಂಥಿಲ್ ಕುಮಾರ್ ನಿನ್ನೆ ಈ ಹೇಯ ಕೃತ್ಯವನ್ನೆಸಗಿದ್ದಾನೆ. ಚಾಕುವಿನಿಂದ ಮನಬಂದಂತೆ ಅತ್ತೆ ಮಾವ ಮತ್ತು ಪತ್ನಿಯ ಮೇಲಾತ ದಾಳಿ ನಡೆಸಿದ್ದಾನೆ. ಸಹಾಯಕ್ಕಾಗಿ ಬಂದಿದ್ದ ಪಕ್ಕದ ಮನೆಯವರ ಮಂಜುನಾಥ್ ಮೇಲೂ ದಾಳಿ ನಡಸಿದ್ದಾನೆ. ಪರಿಣಾಮ ಅತ್ತೆ- ಸ್ಥಳದಲ್ಲೇ ಸಾವನ್ನಪ್ಪಿದರೆ ಮಾವ ಕುಮಾರ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಗಾಯಗೊಂಡಿರುವ ಆತನ ಪತ್ನಿ ಮತ್ತು ಮಂಜುನಾಥ್ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
 
ಆರೋಪಿಯ ಪುಟ್ಟ ಮಗುವನ್ನು ನೆರೆಮನೆಯವರು ಎತ್ತಿಕೊಂಡು ಹೋಗಿ ರಕ್ಷಿಸಿದ್ದಾರೆ.
 
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
 
ಕೃತ್ಯ ನಡೆಸಿದ ಬಳಿಕ ಆರೋಪಿ ಅಲ್ಲಿಂದ ಪರಾರಿಯಾಗಿದ್ದು ಆತನಿಗಾಗಿ ಶೋಧ ಕಾರ್ಯ ಮುಂದುವರೆದಿದೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ರಾಜ್ಯದ ಐದು ಜಿಲ್ಲೆಗಳು ಬಯಲು ಮಲ ವಿಸರ್ಜನೆ

ದೇಶದ 101 ಜಿಲ್ಲೆಗಳು ಬಯಲು ಶೌಚಮುಕ್ತ ಎಂದು ಕೇಂದ್ರ ಸರ್ಕಾರ ಘೋಷಿಸಿದ್ದು, ಈ ಪೈಕಿ ಕರ್ನಾಟಕದ ಐದು ...

news

ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಗೆ ದಾಖಲಾದ ಕುಮಾರಸ್ವಾಮಿ

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಅನಾರೋಗ್ಯಕ್ಕೀಡಾಗಿದ್ದು ಅವರನ್ನು ನಗರದ ವಿಕ್ರಮ್ ...

news

ಜೆಡಿಎಸ್ ಬಂಡಾಯ ಶಾಸಕರಿಗೆ ಕಾಂಗ್ರೆಸ್ ಟಿಕೆಟ್: ಸಿಎಂ ಭರವಸೆ

ಬೆಂಗಳೂರು: ಜೆಡಿಎಸ್ ಪಕ್ಷದ ಬಂಡಾಯ ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಚರ್ಚೆ ...

news

ಅಪಘಾತದಲ್ಲಿ ಕಾಲು ಕಳೆದುಕೊಂಡು ಒದ್ದಾಡುತ್ತಿದ್ದರೂ ರಕ್ಷಣೆಗೆ ಬಾರದೆ ವಿಡಿಯೋ ಮಾಡುತ್ತಿದ್ದ ಜನ

ಅಪಘಾತದಲ್ಲಿ ವ್ಯಕ್ತಿಯೊಬ್ಬ ಕಾಲು ಕಳೆದುಕೊಂಡು ಒದ್ದಾಡುತ್ತಿದ್ದರೂ ಸುತ್ತಮುತ್ತಲಿದ್ದ ಜನ ನೆರವಿಗೆ ಬಾರದೆ ...

Widgets Magazine
Widgets Magazine