ಈಶ್ವರಪ್ಪ ಪಿಎ ವಿನಯ್‌ ಅಪಹರಣ ಪ್ರಕರಣ: ಬಿಎಸ್‌ವೈ ಆಪ್ತ ರಾಜೇಂದ್ರ ವಿಚಾರಣೆ

ಬೆಂಗಳೂರು, ಮಂಗಳವಾರ, 11 ಜುಲೈ 2017 (12:32 IST)

ಆಪ್ತ ಸಹಾಯಕ ವಿನಯ್‌ನನ್ನು ಅಪಹರಿಸಲು ವಿಫಲಯತ್ನ ನಡೆಸಿ ಹಲ್ಲೆಗೈದಿದ್ದ ಆರೋಪದ ಮೇಲೆ ರಾಜೇಂದ್ರ ಅರಸ್‌ ವಿಚಾರಣೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ.
 
ಕಳೆದ ಮೇ 11 ರಂದು ಕೆಲ ದುಷ್ಕರ್ಮಿಗಳ ತಂಡ ವಿನಯ್‌ರನ್ನು ಅಪಹರಿಸಲು ಪ್ರಯತ್ನಿಸಿತ್ತು. ಆದರೆ, ವಿನಯ್ ಜೋರಾಗಿ ಕೂಗಿದ್ದರಿಂದ ಸ್ಥಳೀಯರು ಆಗಮಿಸಿದಾಗ ಆರೋಪಿಗಳು ಪರಾರಿಯಾಗಿದ್ದರು.
 
ನಿನ್ನೆ ಸಹಾ ಮಹಾಲಕ್ಷ್ಮಿ ಲೇಔಟ್ ಠಾಣೆಯ ಪೊಲೀಸ್ ಅಧಿಕಾರಿಗಳು ರಾಜೇಂದ್ರನನ್ನು ವಿಚಾರಣೆಗೆ ಒಳಪಡಿಸಿದ್ದರು. ಪೊಲೀಸ್ ಅಧಿಕಾರಿಗಳು ವಿಚಾರಣೆ ನಡೆಸಲು ಅನುವಾಗುತ್ತಿದ್ದಂತೆ ರಾಜೇಂದ್ರ ಕೋರ್ಟ್‌ನಲ್ಲಿ ಜಾಮೀನು ಪಡೆದುಕೊಂಡಿದ್ದರು.
 
ಒಂದು ಕಡೆ ಈಶ್ವರಪ್ಪ ಮತ್ತು ಮಧ್ಯೆ ಕಚ್ಚಾಟವಿದ್ದರೆ, ಮತ್ತೊಂದೆಡೆ ಅವರಿಬ್ಬರ ಆಪ್ತರ ನಡುವೆ ವೈಮನಸ್ಸಿರುವುದು ವಿಚಿತ್ರವಾಗಿದೆ. ಯಾವ ಕಾರಣಕ್ಕೆ ವಿನಯ್‌ರನ್ನು ಅಪಹರಿಸಲು ಯತ್ನಿಸಲಾಯಿತು. ಅದರಲ್ಲಿ ಯಾರು ಭಾಗಿಯಾಗಿದ್ದಾರೆ ಎನ್ನುವ ಬಗ್ಗೆ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ಯಡಿಯೂರಪ್ಪ ಈಶ್ವರಪ್ಪ ರಾಜೇಂದ್ರ ಅರಸ್ ವಿನಯ್ ಅಪಹರಣ ಪೊಲೀಸ್ Yeddyurappa Eashwarappa Vinay Kidnap Police Rajendra Urs

ಸುದ್ದಿಗಳು

news

ಉದ್ಯಮಿ ಮುಖೇಶ್ ಅಂಬಾನಿ ನಿವಾಸದಲ್ಲಿ ಅಗ್ನಿ ಅವಘಡ

ಉದ್ಯಮಿ ಮುಖೇಶ್ ಅಂಬಾನಿ ನಿರ್ಮಿಸಿರುವ ಮುಂಬೈನ ಬಿಲಿಯನ್ ಡಾಲರ್ ನಿವಾರ್ ಆಂಟಿಲಿಯಾದಲ್ಲಿ ಕಳೆದ ರಾತ್ರಿ ...

news

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕಾರು ಅಪಘಾತ

ನವದೆಹಲಿ: ಮಾಜಿ ಪ್ರಧಾನಿ, ಕಾಂಗ್ರೆಸ್ ನಾಯಕ ಮನಮೋಹನ್ ಸಿಂಗ್ ಪ್ರಯಾಣಿಸುತ್ತಿದ್ದ ಕಾರು ಇಂದು ಬೆಳಗ್ಗೆ ...

news

ಸುಪ್ರೀಂಕೋರ್ಟ್`ನಲ್ಲಿ ಕಾವೇರಿ ಐತೀರ್ಪಿನ ಮೇಲ್ಮನವಿ ಅರ್ಜಿಗಳ ವಿಚಾರಣೆ ಆರಂಭ

ಕಾವೇರಿ ನ್ಯಾಯಮಂಡಳಿಯ ಐತೀರ್ಪು ಪ್ರಶ್ನಿಸಿ ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿ ರಾಜ್ಯಗಳು ...

news

ಅಪ್ಪ ಪುಸ್ತಕ, ಬ್ಯಾಗ್ ತಂದುಕೊಡಲಿಲ್ಲವೆಂದು ಈ ಬಾಲಕ ಹೀಗೆ ಮಾಡೋದಾ?!

ನಾಗ್ಪುರ: ತಂದೆ ಶಾಲೆಗೆ ಬೇಕಾದ ಪುಸ್ತಕ, ಬ್ಯಾಗ್ ತಂದುಕೊಡಲಿಲ್ಲವೆಂದು ಏಳನೇ ತರಗತಿ ಓದುತ್ತಿದ್ದ ಬಾಲಕ ...

Widgets Magazine