ಕಾಂಗ್ರೆಸ್ ಪಕ್ಷವನ್ನು ಕಸ ಗುಡಿಸುವಂತೆ ಗುಡಿಸಿ ಹಾಕ್ತೇವೆ: ಈಶ್ವರಪ್ಪ ಗುಡುಗು

ಬಾಗಲಕೋಟೆ, ಶುಕ್ರವಾರ, 6 ಅಕ್ಟೋಬರ್ 2017 (16:07 IST)

ಕಾಂಗ್ರೆಸ್ ಪಕ್ಷವನ್ನು ಕಸ ಗುಡಿಸುವಂತೆ ಗುಡಿಸಿ ಹಾಕ್ತೇನೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಅಬ್ಬರಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ಪಟ್ಟಣದಲ್ಲಿ ಆಯೋಜಿಸಲಾದ ನೇಕಾರರ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಕಳ್ಳರ ಪಕ್ಷ. ಇದೀಗ ಮನೆ ಮನೆಗೆ ಮತ ಕೇಳಲು ಬರುತ್ತಿದ್ದಾರೆ. ಹುಷಾರಾಗಿರಿ, ಬೇಗ ಮನೆಗೆ ಬೀಗ ಹಾಕಿಕೊಳ್ಳಿ ಎಂದು ಮತದಾರರಿಗೆ ಕರೆ ನೀಡಿದರು.
 
ಅಧಿಕಾರದ ಮದದಲ್ಲಿ ಕಲಿತಿದ್ದೇನೆಂದು ಮರೆತಿದ್ದಾರೆ. ದುಡ್ಡಿನ ಬಲದಿಂದ ಚುನಾವಣೆ ಗೆಲ್ಲುತ್ತೇವೆ ಎನ್ನುವ ಭ್ರಮೆಯಲ್ಲಿದ್ದಾರೆ. ಇಂತಹ ದರ್ಪದ ಮುಖ್ಯಮಂತ್ರಿಯನ್ನು ಮನೆಗೆ ಕಳುಹಿಸಿ ಎಂದು ಕಿಡಿಕಾರಿದರು.
 
ಸಿಎಂ ಸಿದ್ದರಾಮಯ್ಯಗೆ ಮಾನ ಮರ್ಯಾದೆ ಇದೇಯಾ? ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಉಮಾಶ್ರೀ ನೇಕಾರರ ಮಗಳು ಎಂದರು. ನೇಕಾರರ ಏಳಿಗೆಗಾಗಿ ಸಚಿವೆಯನ್ನಾಗಿ ಮಾಡಿದರು. ಆದರೆ, ಸಚಿವೆ ಉಮಾಶ್ರೀ ಮೇಯುವ ಅಡಳಿತ ಮುಂದುವರಿಸಿದ್ದಾರೆ ಎಂದು ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಜಿ.ಪರಮೇಶ್ವರ್‌ರನ್ನು ಸೋಲಿಸಿದ್ದೇ ಸಿಎಂ ಸಿದ್ದರಾಮಯ್ಯ: ಈಶ್ವರಪ್ಪ

ಬೆಂಗಳೂರು: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್‌ರನ್ನು ಸೋಲಿಸಿದ್ದೇ ಸಿಎಂ ...

news

ಬಾಬಾ ರಾಮ್ ರಹೀಮ್‌ ಬೆಡ್‌ರೂಮಿಗೆ ಬಾ ಅಂದಿದ್ದ: ಮಾಡೆಲ್ ಮರೀನಾ

ಮುಂಬೈ: ಬಾಲಿವುಡ್ ಐಟಂಗರ್ಲ್ ರಾಖಿ ಸಾವಂತ್‌ ನನ್ನನ್ನು ಬಾಬಾ ರಾಮ್ ರಹೀಮ್ ಬೆಡ್‌ರೂಮಿಗೆ ಕರೆದುಕೊಂಡು ...

news

ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿಯೇ ಚುನಾವಣೆ: ಕೆ.ಸಿ ವೇಣುಗೋಪಾಲ್

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿಯೇ ಮುಂದಿನ ವಿಧಾನಸಭೆ ಚುನಾವಣೆ ನಡೆಯಲಿದೆ ಎಂದು ...

news

ಪ್ರಕಾಶ್ ರೈಗೆ ಶಿವರಾಮ ಕಾರಂತ ಪ್ರಶಸ್ತಿ: ಬಿಜೆಪಿ ತೀವ್ರ ವಿರೋಧ

ಬೆಂಗಳೂರು: ಬಹುಭಾಷಾ ನಟ ಪ್ರಕಾಶ್ ರೈಗೆ ಶಿವರಾಮ ಕಾರಂತ ಪ್ರಶಸ್ತಿ ನೀಡುವುದಕ್ಕೆ ಬಿಜೆಪಿ ತೀವ್ರ ವಿರೋಧ ...

Widgets Magazine
Widgets Magazine