ಮಿತಿ ಮೀರಿದ ಆನೆ ಹಾವಳಿ: ಬೆಳೆ ನಾಶ

ಆನೇಕಲ್, ಭಾನುವಾರ, 13 ಜನವರಿ 2019 (17:45 IST)

ಆನೆಗಳ ಗುಂಪು ಎರಡು ಗುಂಪುಗಳಲ್ಲಿ ಕಾಣಿಸಿಕೊಂಡು ಜನರಲ್ಲಿ ಆತಂಕಕ್ಕೆ ಕಾರಣವಾಗಿವೆ.

ಆನೇಕಲ್ ಗಡಿ ಭಾಗದ ತಮಿಳುನಾಡಿನ ಬಿರ್ಜೆಪಲ್ಲಿ ಗ್ರಾಮದ ಬಳಿ ಆನೆಗಳು ಕಾಣಿಸಿಕೊಂಡಿವೆ. ಇಡೀ ರಾತ್ರಿ  ಗ್ರಾಮದ ಪಕ್ಕದಲ್ಲೇ ಬೀಡು ಬಿಟ್ಟಿದ್ದ ಆನೆಗಳಿಂದ ಅಲ್ಲಿನ ಜನರು ನಿದ್ದೆ ಬಿಡುವಂತಾಗಿದೆ.

ಸುತ್ತ ಮುತ್ತಲ ಹೊಲಗಳಲ್ಲಿ ಬೆಳೆದಿದ್ದ ಬೆಳೆ ನಾಶವಾಗಿದೆ. ಗ್ರಾಮಸ್ಥರು ಹಾಗು ಅರಣ್ಯ ಸಿಬ್ಬಂದಿಯಿಂದ ಕಾಡಾನೆಗಳನ್ನು ಓಡಿಸುವ ಯತ್ನ ಮುಂದುವರಿದಿದೆ. ಆದರೆ ಗ್ರಾಮಸ್ಥರ ಮೇಲೆ ಆನೆಗಳು ತಿರುಗಿ ಬೀಳುತ್ತಿವೆ. ಗ್ರಾಮದ ಯುವಕನ ಮೇಲೆ ಆನೆಯೊಂದು ದಾಳಿ ನಡೆಸಿದ್ದು, ಕೂದಲು ಎಳೆ ಅಂತರದಲ್ಲಿ ಯುವಕ ಪಾರಾಗಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಹಾಗೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ಮುಂದುವರಿದಿದೆ.

ಅರಣ್ಯ ಸಿಬ್ಬಂದಿ ವಿರುದ್ಧ ರೊಚ್ಚಿಗೆದ್ದು  ಗ್ರಾಮಸ್ಥರು ಪ್ರತಿಭಟನೆ ಹಾದಿ ತುಳಿದಿದ್ದಾರೆ. ಆನೆಗಳು ಕಾಡಿನಿಂದ ನಾಡಿಗೆ ಬರದಂತೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಒತ್ತಾಯ ಮಾಡುತ್ತಿದ್ದಾರೆ.  

 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕಸ್ತೂರು ದೊಡ್ಡಮ್ಮತಾಯಿ ಜಾತ್ರೆ ಸಂಭ್ರಮ

ಇತಿಹಾಸ ಪ್ರಸಿದ್ದ ಕಸ್ತೂರು ದೊಡ್ಡಮ್ಮತಾಯಿ ಜಾತ್ರೆ ಅದ್ಧೂರಿಯಾಗಿ ನೆರವೇರಿತು.

news

ಶ್ರೀಗಂಧ ಕಳ್ಳತನ ಮಾಡುತ್ತಿದ್ದ ಆರೋಪಿ ಬಂಧನ

ಶ್ರೀಗಂಧದ ಕಳ್ಳತನ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧನ ಮಾಡಲಾಗಿದೆ.

news

ಕಸಾಯಿಖಾನೆಗೆ ಸಾಗಿಸುತ್ತಿದ್ದ ಹಸುಗಳ ರಕ್ಷಣೆ: ಶ್ರೀರಾಮ ಸೇನೆ ಕಾರ್ಯಕರ್ತರ ಮೇಲೆ ಜಾತಿ ನಿಂದನೆ ಕೇಸ್

ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ಹಸುಗಳ ರಕ್ಷಣೆ ಮಾಡಿರುವ ಘಟನೆ ನಡೆದಿದೆ.

news

ಪ್ರಧಾನಿ ಬಗ್ಗೆ ಸಚಿವ ಬಂಡೆಪ್ಪ ಕಾಶೆಂಪೂರ ಹೇಳಿದ್ದೇನು ಗೊತ್ತಾ?

ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಮಾತನಾಡಿರುವ ಪ್ರಧಾನಿಗೆ ಸಚಿವ ತಿರುಗೇಟು ನೀಡಿದ್ದಾರೆ.

Widgets Magazine