ಒಬ್ಬನ ಜತೆ ಎಂಗೇಜ್‌ಮೆಂಟ್, ಮತ್ತೊಬ್ಬನೊಂದಿಗೆ ವಿವಾಹ...!

ಹಾಸನ, ಭಾನುವಾರ, 19 ನವೆಂಬರ್ 2017 (14:15 IST)

ಯುವತಿಯೊಬ್ಬಳು ಒಬ್ಬನ ಜತೆ ಎಂಗೇಜ್‌ಮೆಂಟ್ ಮಾಡಿಕೊಂಡು ಮತ್ತೊಬ್ಬನ ಜೊತೆ ಮಾಡಿಕೊಂಡ ವಿಚಿತ್ರ ಘಟನೆ ಜಿಲ್ಲೆಯ ಸಕಲೇಶಪುರ ತಾಲೂಕಿನ ಯಸಳೂರು ಹೋಬಳಿಯಲ್ಲಿ ನಡೆದಿದೆ.
 
ಬೆಂಗಳೂರಿನಲ್ಲಿ ಇಂಜಿನಿಯರ್ ಆಗಿದ್ದ ಯುವಕನೊಂದಿಗೆ ಯುವತಿಗೆ ಎಂಗೇಜ್‌ಮೆಂಟ್ ಆಗಿತ್ತು. ವಿವಾಹ ದಿನಾಂಕವೂ ನಿಗದಿಯಾಗಿತ್ತು. ಆದರೆ, ಯುವತಿ ನಾಪತ್ತೆಯಾಗಿದ್ದಳು, ನಂತರ ಬೇರೆ ಯುವಕನೊಂದಿಗೆ ವಿವಾಹವಾದ ಫೋಟೋಗಳನ್ನು ಎಂಗೇಜ್‌ಮೆಂಟ್ ಮಾಡಿಕೊಂಡ ಭಾವಿ ವರನಿಗೆ ರವಾನಿಸಿದ್ದಾಳೆ
 
ಮಧ್ಯಪ್ರದೇಶದ ಇಂದೋರ್ ಮೂಲದ ಯುವಕನೊಂದಿಗೆ ಯುವತಿ ಸೆಪ್ಟೆಂಬರ್ 11 ರಂದೇ ಸಪ್ತಪದಿ ತುಳಿದಿದ್ದಾಳೆ. ಆದರೆ ಮಾಹಿತಿ ಗೌಪ್ಯವಾಗಿಟ್ಟಿದ್ದಳು. ಮನೆಯವರ ಒತ್ತಾಯದ ಮೇರೆಗೆ ಇಂಜಿನಿಯರ್‌ನೊಂದಿಗೆ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಳು ಎನ್ನಲಾಗಿದೆ.
 
ಯುವತಿಯ ಕಿತಾಪತಿಯಿಂದ ಇಂದು ಬೆಂಗಳೂರು ಮೂಲದ ಇಂಜಿನಿಯರ್‌ನೊಂದಿಗೆ ನಡೆಯಬೇಕಾಗಿದ್ದ ವಿವಾಹ ರದ್ದಾಗಿದೆ. ಎರಡು ಕುಟುಂಬಗಳು ಶಾಕ್‌ಗೊಳಗಾಗಿವೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬಿಎಸ್‌ವೈ, ಶೋಭಾ ಕರಂದ್ಲಾಜೆರಿಂದ ಪಶ್ಚಾತಾಪದ ಯಾತ್ರೆ: ಸಿಎಂ ವ್ಯಂಗ್ಯ

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಸಂಸದೆ ಶೋಭಾ ಕರಂದ್ಲಾಜೆ ಮಾಡಬಾರದ ತಪ್ಪುಗಳನ್ನು ...

news

ಗುಜರಾತ್ ಬಿಜೆಪಿಗೆ ಮತ್ತೊಂದು ಆಘಾತ: ಪ್ರಭಾವಿ ಮುಖಂಡ ಬಿಜೆಪಿಗೆ ಗುಡ್‌ಬೈ

ಗಾಂಧಿನಗರ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬಲಾಢ್ಯ ಕೋಟೆಯಾದ ಗುಜರಾತ್‌‌ನಲ್ಲಿ ಬಿಜೆಪಿ, ಶತಾಯ ಗತಾಯ ...

news

ಪ್ರಿಯಕರ ಮಾತನಾಡಿಸಲಿಲ್ಲವೆಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯತಮೆ

ತುಮಕೂರು: ಜೀವಕ್ಕಿಂತ ಹೆಚ್ಚಿಗೆ ಪ್ರೀತಿಸುವ ಪ್ರಿಯತಮ ತನ್ನನ್ನು ನಿರ್ಲಕ್ಷಿಸುತ್ತಿದ್ದಾನೆ ಎಂದು ...

news

ಮೋದಿ ಸರ್ಕಾರದಿಂದ ರೈತರ ಸಾಲ ಮನ್ನಾ ಸಾಧ್ಯವಿಲ್ಲ: ಸಚಿವ ಡಿ.ವಿ. ಸದಾನಂದ ಗೌಡ

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವಗ ಸರಕಾರದಿಂದ ರಾಜ್ಯದ ರೈತರ ಸಾಲ ಮನ್ನಾ ಮಾಡಲು ...

Widgets Magazine
Widgets Magazine