ಇಂಜಿನಿಯರಿಂಗ್ ವಿದ್ಯಾರ್ಥಿನಿ ಕಿಡ್ನಾಪ್ ಕೇಸ್ ಸುಖಾಂತ್ಯ

ಬೆಳಗಾವಿ, ಬುಧವಾರ, 19 ಏಪ್ರಿಲ್ 2017 (15:44 IST)

Widgets Magazine

ಕಡಿಮೆ ಅವಧಿಯಲ್ಲಿ ಹಣಗಳಿಸಿ ಐಷಾರಾಮಿ ಜೀವನ ಸಾಗಿಸಲು ಪ್ರಿಯಕರನ ನೆರವಿನಿಂದ ತನ್ನ ಗೆಳತಿಯನ್ನೇ ಅಪಹರಿಸಿದ ವಿದ್ಯಾರ್ಥಿನಿಯೊಬ್ಬಳು ಇದೀಗ ಪೊಲೀಸರ ಅತಿಥಿಯಾಗಿದ್ದಾಳೆ.  
 
ಬೆಳಗಾವಿಯ ಜಿಐಟಿ ಕಾಲೇಜಿನ 23 ವರ್ಷದ ವಿದ್ಯಾರ್ಥಿನಿ ಅರ್ಪಿತಾ ನಾಯಕ್ ಊಟಕ್ಕೆಂದು ಸ್ನೇಹಿತೆ ದಿವ್ಯಾ ಮಲಘಾಣ ಜೊತೆ ತೆರಳಿದ್ದರು, ಊಟ ಮಾಡುವ ಸಂದರ್ಭದಲ್ಲಿ ಎಳೆನೀರಲ್ಲಿ ನಿದ್ರೆ ಮಾತ್ರೆ ಬೆರಿಸಿದ್ದರು. ಅರ್ಪಿತಾ ನಿದ್ರೆಗೆ ಜಾರಿದಾಗ
 
ಆಕೆಯ ಮೂಗಿಗೆ ಕ್ಲೋರೋಫಾರ್ಮ್ ಒತ್ತಿ ಪ್ರಜ್ಞೆಯನ್ನು ತಪ್ಪಿಸಿದ್ದರು. ಪ್ರಜ್ಞೆ ತಪ್ಪಿದ ವಿದ್ಯಾರ್ಥಿನಿಯನ್ನು ಅಪಹರಿಸಿದ್ದರು. ವಿದ್ಯಾರ್ಥಿನಿ ತಂದೆ ಬಳಿ 5 ಕೋಟಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
 
ಆರೋಪಿಗಳಾದ ದಿವ್ಯಾ ಮತ್ತು ಆಕೆಯ ಪ್ರಿಯತಮ ಕೇದಾರಿ, ಹಣ ನೀಡದಿದ್ದಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅರ್ಪಿತಾ ತಂದೆಗೆ ಎಚ್ಚರಿಕೆ ನೀಡಿದ್ದರು. ಅರ್ಪಿತಾ ಪ್ರಜ್ಞೆಗೆ ಮರಳಿದ ನಂತರ ಪೋಷಕರಿಗೆ ಕರೆ ಮಾಡಿ ತನ್ನ ಗೆಳತಿಯೇ ಅಪಹರಿಸಿದ್ದಾಳೆ ಎಂದು ಮಾಹಿತಿ ನೀಡಿದ್ದಳು. 
 
ಅರ್ಪಿತಾ ಪೋಷಕರು ಟಿಳಕವಾಡಿ ಪೊಲೀಸರಿಗೆ ಮಾಹಿತಿ ನೀಡಿದ ನಂತರ ಆರೋಪಿಗಳಾದ ದಿವ್ಯಾ, ಕೇದಾರ್ ಮತ್ತು ಕಾರು ಚಾಲಕನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಭೀಕರ ಬಸ್ ದುರಂತಕ್ಕೆ 43 ಬಲಿ!

ಶಿಮ್ಲಾ: ಇಲ್ಲಿನ ನೆರ್ವಾ ಎಂಬಲ್ಲಿ ನದಿಯೊಂದಕ್ಕೆ ಬಸ್ ಉರುಳಿ ಬಿದ್ದ ಪರಿಣಾಮ 43 ಮಂದಿ ಮೃತಪಟ್ಟ ಧಾರುಣ ...

news

ಅಯೋಧ್ಯೆ, ಗಂಗಾ, ತಿರಂಗಾಗಾಗಿ ಯಾವುದೇ ಶಿಕ್ಷೆಗೆ ಸಿದ್ದ: ಸಚಿವೆ ಉಮಾಭಾರತಿ

ನವದೆಹಲಿ: ಅಯೋಧ್ಯೆ, ಗಂಗಾ, ತಿರಂಗಾಗಾಗಿ ಯಾವುದೇ ಶಿಕ್ಷೆಗೆ ಸಿದ್ದ. ರಾಮಮಂದಿರ ನಿರ್ಮಾಣಕ್ಕಾಗಿ ಎಂತಹ ...

news

ಇದೆಂತಹಾ ಭಂಡ ಧೈರ್ಯ ಚೀನಾಕ್ಕೆ?!

ನವದೆಹಲಿ: ಸದಾ ಭಾರತದೊಂದಿಗೆ ಅರುಣಾಚಲ ಪ್ರದೇಶ ತನ್ನದು ಎಂದು ಗಡಿ ತಗಾದೆ ತೆಗೆಯುವ ಚೀನಾ ಇನ್ನೂ ಒಂದು ...

news

ಕೆಂಪು ಗೂಟದ ಕಾರಿನ ಗೌರವ ಇನ್ನು ಯಾರಿಗೂ ಇಲ್ಲ!

ನವದೆಹಲಿ: ವಿಐಪಿಗಳ ಕಾರಿನ ಮೇಲೆ ಕಾಣಿಸಿಕೊಳ್ಳುವ ಕೆಂಪು ಗೂಟ ಇನ್ನು ಮುಂದೆ ತೆರೆಮರೆಗೆ ಸರಿಯಲಿದೆ. ...