ಪಾಕಿಸ್ತಾನ್ ಜಿಂದಾಬಾದ್ ಅನ್ನೋ ದೇಶದ್ರೋಹಿಗಳನ್ನ ಸುಮ್ಮನೆ ಬಿಡಲ್ಲ: ಈಶ್ವರಪ್ಪ

ಬೆಂಗಳೂರು, ಗುರುವಾರ, 2 ನವೆಂಬರ್ 2017 (15:49 IST)

ಬೆಂಗಳೂರು: ನರೇಂದ್ರ ಮೋದಿ ಇದ್ದಂತೆ. ಕಾಂಗ್ರೆಸ್ ಕಚೇರಿಯಲ್ಲಿ ಕುಳಿತು ಉಗಿದ್ರೆ ಸೂರ್ಯನಿಗೆ ಉಗಿದಂತೆ. ಅದು ನಿಮ್ಮ ಮುಖಕ್ಕೆ ವಾಪಸ್ ಬೀಳುತ್ತೆ ಎಂದು ಕೆ.ಎಸ್.ತಿರುಗೇಟು ನೀಡಿದ್ದಾರೆ.


ಪರಿವರ್ತನಾ ಯಾತ್ರೆ ಉದ್ದೇಶಿಸಿ ಮಾತನಾಡಿದ ಅವರು, ಪಾಕಿಸ್ತಾನದ ಉಗ್ರವಾದಿಗಳು ಭಾರತದ ಸೈನಿಕರ ತಲೆ ಕತ್ತರಿಸಿದರೆ, ಪ್ರಧಾನಿ ನರೇಂದ್ರ ಮೋದಿಯವರು ಪಾಕಿಸ್ತಾನಕ್ಕೆ ನುಗ್ಗಿ 2 ಸಾವಿರ ಸೈನಿಕರನ್ನು ನಿರ್ನಾನ ಮಾಡಿದ್ರು ಎಂದರು.

ಮೋದಿಗೆ ನನ್ನ ಕಂಡರೆ ಭಯ ಎಂದು ಸಿದ್ದರಾಮಯ್ಯ ಹೇಳ್ತಾರೆ. ಸಿದ್ದರಾಮಯ್ಯ ಎಲ್ಲಿ? ನರೇಂದ್ರ ಮೋದಿ ಎಲ್ಲಿ? ಸಿದ್ದರಾಮಯ್ಯ ಮೈ ಮೇಲೆ ಜ್ಞಾನ ಇಟ್ಕೊಂಡು ಮಾತನಾಡಲಿ. ಪ್ರಧಾನಿ‌ ಮೋದಿ‌ ಇಡೀ ಪ್ರಪಂಚಕ್ಕೆ ಸೂರ್ಯ ಇದ್ದಂಗೆ. ಕಾಂಗ್ರೆಸ್ ಕಚೇರಿಯಲ್ಲಿ ಕುಳಿತು ಸೂರ್ಯಂಗೆ ಉಗುಳೋಕೆ ಹೋಗ್ತೀರಾ? ಎಂದು ಸಿಎಂ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದರು.

ನಾವ್ಯಾರೂ ನಾಮರ್ದರಲ್ಲ. ಇಲ್ಲಿದ್ದುಕ್ಕೊಂಡು ಪಾಕಿಸ್ತಾನ್ ಜಿಂದಾಬಾದ್ ಅನ್ನೋ ದೇಶದ್ರೋಹಿಗಳನ್ನ ಸುಮ್ಮನೆ ಬಿಡಲ್ಲ. ಹಿಂದೂ ಯುವಕರ ಕಗ್ಗೊಲೆ ಮಾಡುವ ದೇಶದ್ರೋಹಿಗಳನ್ನ ಸುಮ್ಮನೆ ಬಿಡಲ್ಲ. ಮೋದಿಗೆ ನನ್ನ ಕಂಡರೆ ಭಯ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಕೂಡಲೇ ಸಿದ್ದರಾಮಯ್ಯ ರಾಜ್ಯದ ಜನತೆ ಕ್ಷಮೆ ಕೇಳಲಿ. ಮೋದಿ ಜತೆ ಇಡೀ ಪ್ರಪಂಚವೇ ಇದೆ. ಆದರೆ ಮೋದಿ ವಿರುದ್ದ ಇರೋರು  ಇಬ್ಬರೆ. ಅದು ಸಿದ್ದರಾಮಯ್ಯ ಮತ್ತು ಪಾಕಿಸ್ತಾನ ಎಂದರು.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಟಿಪ್ಪು ಜಯಂತಿಗಿರುವ ಉತ್ಸಾಹ ರಾಜ್ಯೋತ್ಸವ ಆಚರಣೆಗಿಲ್ಲ: ಅಮಿತ್ ಷಾ ಲೇವಡಿ

ಬೆಂಗಳೂರು: ಸಿಎಂ ಸಿದ್ದರಾಮಯ್ಯಗೆ ಕರ್ನಾಟಕ ರಾಜ್ಯೋತ್ಸವ ಆಚರಿಸುವ ಉತ್ಸಾಹ ಇರಲಿಲ್ಲ. ಏಕೆಂದರೆ ಅವರು ...

news

ಭ್ರಷ್ಟಾಚಾರದಲ್ಲಿ ಸಿದ್ದರಾಮಯ್ಯ ಸರ್ಕಾರ ರಾಷ್ಟ್ರದಲ್ಲಿಯೇ ಮೊದಲು: ಯಡಿಯೂರಪ್ಪ

ಬೆಂಗಳೂರು: ಇಡೀ ದೇಶದಲ್ಲೇ ಅತ್ಯಂತ ಭ್ರಷ್ಟ ಸರ್ಕಾರ ಸಿದ್ದರಾಮಯ್ಯ ಸರ್ಕಾರ ಎಂದು ಯಡಿಯೂರಪ್ಪ ರಾಜ್ಯ ...

news

ಭ್ರಷ್ಟಾಚಾರದ ಸರ್ಕಾರ ಕೊಡ್ತೇವೆ ಎಂದು ಮೋದಿ ಹೇಳಿದ್ದಾರೆ: ಡಿವಿಎಸ್ ಎಡವಟ್ಟು

ಬೆಂಗಳೂರು: ಬಿಜೆಪಿ ಪರಿವರ್ತನಾ ಯಾತ್ರೆಗೆ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ದೀಪ ಬೆಳಗಿಸುವ ಮೂಲಕ ಯಾತ್ರೆಗೆ ...

news

ಅಂದಾನಿ, ಅಧಾನಿ, ಅಮಿತ್ ಷಾಗೆ ಬಂತಾ ಅಚ್ಛೇದಿನ್: ಸಿಎಂ

ಬೆಂಗಳೂರು: ಬಿಜೆಪಿಯವರು ಪರಿವರ್ತನಾ ರ್ಯಾಲಿ ಎಂದು ದೊಡ್ಡ ನಾಟಕ ಶುರು ಮಾಡಿದ್ದಾರೆ. ಇದು ಅವರು ಮಾಡಿದ ...

Widgets Magazine
Widgets Magazine