ಬರಗಾಲವಿದ್ದರೂ ಸಿಎಂ ಪ್ರವಾಸ ಮಾಡ್ತಿಲ್ಲ: ಬಿಎಸ್ವೈ ಟೀಕೆ

ಯಾದಗಿರಿ, ಶುಕ್ರವಾರ, 10 ಆಗಸ್ಟ್ 2018 (15:08 IST)

2018 -19 ಸಾಲಿನಲ್ಲಿ 10 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದ್ರೆ ಕೆಲವರಿಗೆ ಇನ್ನು  ಪರಿಹಾರ ಹಣ ಕೊಟ್ಟಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹೇಳಿದ್ದಾರೆ.

ಯಾದಗಿರಿಯಲ್ಲಿ ಮಾತನಾಡಿದ ಅವರು, ಯಾದಗಿರಿ ಜಿಲ್ಲೆಯಲ್ಲಿ ಕಡಿಮೆ ಪ್ರಮಾಣದ ಮಳೆಯಾಗಿದ್ದು,
ಬಿತ್ತನೆ ಪ್ರಮಾಣ ಕಡಿಮೆಯಾಗಿದೆ, ಕಡೆಚೂರ- ಬಾಡಿಗಾಳ ಕೈಗಾರಿಕೆ ಸ್ಥಾಪನೆ ಮಾಡುವಲ್ಲಿ ನಿಷ್ಕಾಳಜಿ ತೋರಿದೆ. ಕೊನೆ ಭಾಗದ ಕಾಲುವೆ, ಹಾಗೂ ಸರಿಯಾಗಿ ವಿದ್ಯುತ್ ಪೂರೈಸುತ್ತಿಲ್ಲ. ಇದರಿಂದ ರೈತರು ಸಂಕಷ್ಟದಲ್ಲಿದ್ದಾರೆ. ಆಡಳಿತ ಪಕ್ಷ ಜನರ ಸಮಸ್ಯೆ ಆಲಿಸುತ್ತಿಲ್ಲ ಎಂದು ದೂರಿದರು.

ಸಾಲ ಮನ್ನಾ ಮಾಡುತ್ತೆನೆಂದು ಹೇಳಿದ ಸಿಎಂ ಕುಮಾರಸ್ವಾಮಿ ಮಾತು ತಪ್ಪಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯ ಸ್ಥಗಿತಗೊಂಡಿದೆ. 10 ಸಾವಿರ ಕೋಟಿ ಬಾಕಿ ಬಿಲ್ಲ ಇದೆ. ಹೀಗಾಗಿ ಕೆಲಸ ಮಾಡಲು ಗುತ್ತಿಗೆದಾರರು ಅಭಿವೃದ್ಧಿ ಕಾರ್ಯಮಾಡಲು ಮುಂದೆ ಬರುತ್ತಿಲ್ಲ ಎಂದರು.

13 ಜಿಲ್ಲೆಯಲ್ಲಿ ಬರಗಾಲ ಆವರಿಸಿದೆ. ಸಿಎಂ ಹಾಗೂ ಕೃಷಿ ಸಚಿವರು ಪ್ರವಾಸ ಮಾಡುತ್ತಿಲ್ಲ, ಅವರಿಗೆ ವರ್ಗಾವಣೆ ಒಂದು ದಂಧೆಯಾಗಿದೆ ಎಂದು ಟೀಕಿಸಿದರು.
 
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮಿಲಿಟರಿ ಸೇನೆಗೆ ಭೂಮಿ ನೀಡಲು ಮುಂದಾದ ಬಿಬಿಎಂಪಿ

ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ತಮ್ಮನಾಯಕನಹಳ್ಳಿಯಲ್ಲಿರುವ ಸರ್ಕಾರಿ ಗೋಮಾಳ ಭೂಮಿಯನ್ನು ಮಿಲಿಟರಿ ...

news

ಸಿಎಂ ಕ್ಷೇತ್ರ ಭಯೋತ್ಪಾದಕರ ಅಡಗುತಾಣ: ಆರೋಪ

ಸಿಎಂ ಕ್ಷೇತ್ರ ಭಯೋತ್ಪಾದಕರ ಅಡಗುತಾಣವಾಗ್ತಿದೆ. ಹೀಗಂತ ಆರೋಪಿಸಿ ಬಿಜೆಪಿ ಕಾರ್ಯಕರ್ತರು ಬೀದಿಗಿಳಿದು ...

news

ಪತಿಯ ಗುಂಡೇಟಿಗೆ ಬಲಿಯಾದ ಪಾಕಿಸ್ತಾನದ ಖ್ಯಾತ ಗಾಯಕಿ ರೇಷ್ಮಾ

ಇಸ್ಲಾಮಾಬಾದ್ : ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪಾಕಿಸ್ತಾನದ ಖ್ಯಾತ ನಟಿ ಹಾಗೂ ಗಾಯಕಿ ರೇಷ್ಮಾ ಅವರನ್ನು ...

news

ಹುಡುಗಿಗಾಗಿ ಕಿತ್ತಾಡಿದರು; ಮಸಣ ಸೇರಿದ ಯುವಕ

ಒಂದೇ ಹುಡುಗಿಯ ವಿಷಯವಾಗಿ ಮೂವರು ಯುಕವರು ಕಿತ್ತಾಡಿಕೊಂಡಿದ್ದಾರೆ. ಮೂವರ ಜಗಳದಲ್ಲಿ ಒಬ್ಬ ಕೊಲೆಯಾಗಿ ...

Widgets Magazine