ನೂತನವಾಗಿ ಸರ್ಕಾರ ರಚನೆಯಾಗಿದೆ.ಎಂಟು ಜನ ಸಚಿವರಾಗಿದ್ದಾರೆ.ಸಚಿವರು ಮಾತನಾಡೋದು ನೋಡಿದ್ರೆ.ಇವರು ರಾಜ್ಯದ ಹಿತದೃಷ್ಠಿ ಬಿಟ್ಟು.ದ್ವೇಷದ ರಾಜಕಾರಣ ಮಾಡಲು ಪ್ರಾರಂಭಿಸಿದ್ದಾರೆ.ರಾಜ್ಯದ ಅಭಿವೃದ್ಧಿ ಬದಲು, ದೇಶದ ಪ್ರಾಮುಖ್ಯತೆ ಬಹಳ ಇದೆ ಅನಿಸ್ತಿದೆ.ಅವರು ಏನೇ ಮಾಡಿದ್ರೂ, ತನಿಖೆ ಮಾಡಿದ್ರೂ ಎದುರಿಸಲು ಸಿದ್ದರಿದ್ದೇವೆ.ಹಿಂದೆ ಸರ್ಕಾರವಿದ್ದಾಗಲೂ ಹೀಗೆ ಮಾಡಿದ್ರೂ, ನಾವು ಎದರಿಸಿದ್ವಿ.ಅವರ ವಿಚಾರ ಮತ್ತು ಕಾರ್ಯಾಚರಣೆ ಹಿಮ್ಮೆಟ್ಟುತ್ತೇವೆ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಕಾಂಗ್ರೆಸ್ ವಿರುದ್ಧ ಕಿಡಿಕರಿದ್ದಾರೆ.