ಸರ್ಕಾರಿ ಗೌರವದೊಂದಿಗೆ ಇಂದು ಖಮರುಲ್ ಇಸ್ಲಾಂ ಅಂತ್ಯಕ್ರಿಯೆ

ಕಲಬುರ್ಗಿ, ಮಂಗಳವಾರ, 19 ಸೆಪ್ಟಂಬರ್ 2017 (12:22 IST)

ಕಲಬುರ್ಗಿ: ಖಮರುಲ್ ಇಸ್ಲಾಂ ಅವರ ಪಾರ್ಥಿವ ಶರೀರ ಇಲ್ಲಿನ ನೊಬೆಲ್ ಶಾಲೆಯ ಬಳಿ ಇರುವ ಖಮರುಲ್ ಅವರ ಮನೆಗೆ ಪಾರ್ಥಿವ ಶರೀರ ತಲುಪಿದೆ.

 
ಅವರ ಮನೆಯಲ್ಲಿ ಇಸ್ಲಾಂ ಧರ್ಮದ ಧಾರ್ಮಿಕ ವಿಧಿವಿಧಾನ ನೆರವೇರಿಸಲಾಯಿತು. ಬಳಿಕ ತೆರೆದ ವಾಹನದಲ್ಲಿ ಎಮ್.ಎಸ್.ಕೆ.ಮಿಲ್, ಜಿಲಾನಾಬಾದ್, ಆಳಂದ ಚೆಕ್ ಪೋಸ್ಟ್, ಹುಮನಾಬಾದ್ ರಿಂಗ್ ರೋಡ್ ಮಾರ್ಗವಾಗಿ ಮುಸ್ಲಿಂ ಚೌಕ್ ನಲ್ಲಿರುವ ಕೆಸಿಟಿ ಕಾಲೇಜು ಮೈದಾನದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿದೆ. ಮಧ್ಯಾಹ್ನ 1 ಗಂಟೆಯಿಂದ ಸಂಜೆ 5 ಗಂಟೆವರೆಗೆ ಸಾರ್ವಜನಿಕ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ನಂತರ ಮೈದಾನದಲ್ಲಿ ಸರ್ಕಾರಿ ಗೌರವ ಮತ್ತು ನಮಾಜ್ ಸಲ್ಲಿಸಲಾಗುವುದು. ಬಳಿಕ ಜಿಲ್ಲಾ ನ್ಯಾಯಾಲಯ ಹಿಂಭಾಗದ ಖಲಂದರ್ ಖಾನ್ ಖಬರಿಸ್ಥಾನದಲ್ಲಿ ಅಂತಿಮ ಸಂಸ್ಕಾರ ನೆರವೇರಲಿದೆ.

ಗಣ್ಯರ ಸಂತಾಪ

ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಚಿವ ಶರಣಪ್ರಕಾಶ ಪಾಟೀಲ್, ಪ್ರಿಯಾಂಕ್ ಖರ್ಗೆ, ಶಾಸಕ ಮಾಲಿಕಯ್ಯ ಗುತ್ತೇದಾರ್ ಸೇರಿ ಹಲವು ಮುಖಂಡರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮಹಿಳಾ ಮೀಸಲಾತಿ ಜಾರಿಗೆ ಪ್ರಧಾನಿ ಮೋದಿ ಪ್ಲ್ಯಾನ್

ನವದೆಹಲಿ: ತ್ರಿವಳಿ ತಲಾಖ್‌ ರದ್ದುಗೊಳಿಸಿ ಮಹಿಳೆಯರ ಮನಗೆದ್ದಿರುವ ಪ್ರಧಾನಿ ಮೋದಿ,ಇದೀಗ ಮಹಿಳಾ ಮೀಸಲಾತಿ ...

news

ಡಿಪೋ ಮ್ಯಾನೇಜರ್ ಕಿರುಕುಳ ಆರೋಪ: ಚಾಲಕ ಆತ್ಮಹತ್ಯೆ ಯತ್ನ

ಬೆಂಗಳೂರು: ಡಿಪೋ ಮ್ಯಾನೇಜರ್ ಪ್ರಕಾಶ್ ಕಿರುಕುಳಕ್ಕೆ ಬೇಸತ್ತು ಬಿಎಂಟಿಸಿ ಡ್ರೈವರ್ ಆತ್ಮಹತ್ಯೆಗೆ ...

news

ಅ. 6 ರಿಂದ ವಿಧಾನ ಮಂಡಲ ವಿಶೇಷ ಅಧಿವೇಶನ

ಬೆಂಗಳೂರು: ಮುಂದಿನ ತಿಂಗಳು 6 ರಿಂದ ಮೂರು ದಿನಗಳವರೆಗೆ ವಿಧಾನಸೌಧ ಸುವರ್ಣ ಮಹೋತ್ಸವ ಹಿನ್ನಲೆಯಲ್ಲಿ ವಿಶೇಷ ...

news

ಅಮೆರಿಕಾದಲ್ಲಿ ನಾಳೆ ರಾಹುಲ್ ಗಾಂಧಿ ಭಾಷಣ

ನ್ಯೂಯಾರ್ಕ್: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ನಾಳೆ ಅಮೆರಿಕಾದಲ್ಲಿ ಸಾರ್ವಜನಿಕ ಸಭೆಯೊಂದರಲ್ಲಿ ...

Widgets Magazine