ಮಾಜಿ ಸಚಿವ ಖಮರುಲ್ ಇಸ್ಲಾಂ ನಿಧನ

ಬೆಂಗಳೂರು, ಸೋಮವಾರ, 18 ಸೆಪ್ಟಂಬರ್ 2017 (12:55 IST)

Widgets Magazine

ಬೆಂಗಳೂರು: ಮಾಜಿ ಸಚಿವ, ಕಲಬುರ್ಗಿಉತ್ತರ ಮತಕ್ಷೇತ್ರದ ಶಾಸಕ ಖಮರುಲ್ ಇಸ್ಲಾಂ(69) ಹೃದಯಾಘಾತದಿಂದ ಮೃತಪಟ್ಟಿದ್ದಾರೆ.


1948 ಜನವರಿ 27ರಂದು ಜನಿಸಿದ್ದ ಖಮರುಲ್ ಇಸ್ಲಾಂ, 1978ರಲ್ಲಿ ರಾಜಕೀಯ ಪ್ರವೇಶಿಸಿದ್ದರು. 6 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. 1996-98ರ ಅವಧಿಯಲ್ಲಿ ಒಮ್ಮೆ ಸಂಸದರಾಗಿಯೂ ಆಯ್ಕೆಯಾಗಿದ್ದರು. ಮೊದಲಿಗೆ ಮುಸ್ಲೀಂ ಲೀಗ್ ನಿಂದ ಶಾಸಕರಾಗಿದ್ದ ಅವರು, ನಂತರ ಜೆಡಿಎಸ್ ಸೇರಿ ಮೊದಲ ಬಾರಿ ವಸತಿ ಸಚಿವರಾಗಿದ್ದರು.

ನಂತರ ಕಾಂಗ್ರೆಸ್ ನಲ್ಲಿ ಮುಂದುವರೆದು, ಅಖಿಲ ಭಾರತ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಮತ್ತು ಕೇರಳ ರಾಜ್ಯದ ಉಸ್ತುವಾರಿ ಸಹ ಆಗಿದ್ದರು. ರಾಜ್ಯ ವಸತಿ, ಕಾರ್ಮಿಕ, ವಕ್ಫ್, ಪೌರಾಡಳಿತ ಸಚಿವರು ಆಗಿದ್ದರು. ಬಳಿಕ ಸಚಿವ ಸ್ಥಾನ ಕಳೆದುಕೊಂಡಿದ್ದರು. ಮಕ್ಕಳಿಲ್ಲದ ಕಾರಣ ಒಂದು ಗಂಡು ಮಗುವನ್ನು ದತ್ತು ಪಡೆದಿದ್ದಾರೆ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಬಿಎಸ್‌ವೈಗೆ ಉ. ಕರ್ನಾಟಕದಿಂದ ಸ್ಪರ್ಧಿಸುವಂತೆ ಹೈಕಮಾಂಡ್ ಸೂಚನೆ

ಕಲಬುರಗಿ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಉತ್ತರ ಕರ್ನಾಟಕದಿಂದ ಸ್ಪರ್ಧಿಸುವಂತೆ ಬಿಜೆಪಿ ಪಕ್ಷದ ...

news

ಟಿಟಿವಿ ದಿನಕರನ್ ಬಣದ 18 ಶಾಸಕರನ್ನ ಅನರ್ಹಗೊಳಿಸಿ ಸ್ಪೀಕರ್ ಆದೇಶ

ತಮಿಳುನಾಡು ರಾಜಕೀಯದಲ್ಲಿ ಮತ್ತೊಂದು ಹೈಡ್ರಾಮಾ ನಡೆದಿದೆ. ಶಶಿಕಲಾ ಆಪ್ತ ಟಿಟಿವಿ ದಿನಕರನ್ ಜೊತೆ ...

news

ಅರ್ಜುನ ನೇತೃತ್ವದ ಗಜಪಡೆಗೆ ಅಂಬಾರಿ ಹೊರುವ ತಾಲೀಮು ಶುರು

ಮೈಸೂರು: ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ ಭರ್ಜರಿ ತಯಾರಿ ನಡೆದಿದೆ. ಇದರ ಮಧ್ಯೆಯೇ ಅಂಬಾರಿ ಹೊರಲಿರುವ ...

news

ಸೆ.23ರಂದು ಸಿಎಂ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ: ಯಡಿಯೂರಪ್ಪ

ಕಲಬುರ್ಗಿ: ಮುಂದಿನ ನಾಲ್ಕೈದು ದಿನಗಳಲ್ಲಿ ಕಾಂಗ್ರೆಸ್ ಸಚಿವರು, ಶಾಸಕರು ಮಾಡಿರುವ ಭ್ರಷ್ಟಾಚಾರ ದಾಖಲೆ ...

Widgets Magazine