ಕಾಡು ಹುಲಿ V/S ಸಫಾರಿ ಹುಲಿ ನಡುವೆ ರೋಚಕ ಫೈಟ್

ಬೆಂಗಳೂರು, ಮಂಗಳವಾರ, 13 ಆಗಸ್ಟ್ 2019 (14:00 IST)

ಹುಲಿ ಅಂದರೆ ಸಾಕು ಭಯ ಬೀಳೋರೆ ಹೆಚ್ಚು. ಹುಲಿ ಮತ್ತೊಂದು ಹುಲಿ ಜತೆ ಕಾದಾಡ ನಡೆಸಿದ್ರೆ ಹೇಗಿರಬೇಡಾ?

ಕಾಡಿನ ಹುಲಿ ಹಾಗೂ ಸಫಾರಿ ಹುಲಿಯ ನಡುವೆ ನಡೆದಿದೆ. ಎರಡು ಹುಲಿಗಳ ಫೈಟಿಂಗ್ ದೃಶ್ಯ ಸಫಾರಿ ವಾಹನದಲ್ಲಿದ್ದ ಪ್ರಾಣಿ ಪ್ರಿಯರ ಮೊಬೈಲ್ ನಲ್ಲಿ ಸೆರೆಯಾಗಿದೆ.

ಬನ್ನೇರುಘಟ್ಟ ಬಯೋಲಾಜಿಕಲ್ ಸಫಾರಿಯಲ್ಲಿ ಕಾಡಿನ ಹುಲಿ ಹಾಗೂ ಸಫಾರಿ ಹುಲಿ ನಡುವೆ ಕಾದಾಟ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ಅಧಿಕೃತವಾಗಿ ಕರ್ನಾಟಕ ಫಾರೆಸ್ಟ್ ಡಿಪಾರ್ಟ್ಮೆಂಟ್ ನ ಪೇಜ್ ನಲ್ಲಿ ಪ್ರಕಟಮಾಡಲಾಗಿದೆ. ಎರಡು ಹುಲಿಗಳ ನಡುವಿನ ಫೈಟ್ ಸಫಾರಿ ಪ್ರಿಯರಿಗೆ ರೋಚಕ ಮನರಂಜನೆ ನೀಡಿದೆ.

ಬನ್ನೇರುಘಟ್ಟ ಅರಣ್ಯ ವ್ಯಾಪ್ತಿಯಲ್ಲಿ ಸಂಚಾರ ಮಾಡಿಕೊಂಡಿದ್ದ ಕಾಡಿನ ಹುಲಿ ಆಗಾಗ ಸಫಾರಿಯಲ್ಲಿನ ಹುಲಿಗಳ ಜಾಗದ ಬಳಿ ಕಾಣಿಸಿಕೊಂಡು ಸಫಾರಿಯಲ್ಲಿನ ಹುಲಿಗಳ ಮೇಲೆ ಆಗಾಗ್ಗೆ ಕಾದಾಟ ನಡೆಸುತ್ತಲೆ ಇದೆ.

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಒಂದು ಕೋಟಿ ದೇಣಿಗೆ ನೀಡಿದ ಅನರ್ಹ ಶಾಸಕ

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅನರ್ಹಗೊಂಡಿರೋ ಮಾಜಿ ಸಚಿವ ಒಂದು ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ.

news

ಅಂಥ ಕೆಲಸಕ್ಕೂ ಲಂಚ ಪಡೆದ ಪೊಲೀಸ್ ಕಥೆ ಏನಾಯ್ತು?

ಪೊಲೀಸ್ ಎಂದರೆ ರಕ್ಷಣೆ ಮಾಡೋರು ಅಂತ ಜನರು ತಿಳಿದುಕೊಳ್ಳೋದು ಕಾಮನ್. ಆದರೆ ಇಲ್ಲೊಬ್ಬ ಪೇದೆ ಮಾಡಬಾರದ ಕೆಲಸ ...

news

ನಿಖಿಲ್ ಕುಮಾರಸ್ವಾಮಿ ಕಾರ್ಯಕ್ಕೆ ಭಾರೀ ಮೆಚ್ಚುಗೆ ಯಾಕೆ?

ಮಾಜಿ ಮುಖ್ಯಮಂತ್ರಿಯ ಪುತ್ರರಾಗಿರೋ ನಿಖಿಲ್ ಮಾಡಿರೋ ಈ ಕೆಲಸಕ್ಕೆ ಭಾರೀ ಪ್ರಶಂಸೆ ವ್ಯಕ್ತವಾಗತೊಡಗಿದೆ.

news

ರಜೆಗೆ ಬಂದ ಯೋಧ ಬಾರದ ಲೋಕಕ್ಕೆ ತೆರಳಿದ

ಅವರು ದೇಶವನ್ನು ಕಾಯುವ ಯೋಧ. ರಜೆ ಅಂತ ತಮ್ಮ ಊರಿಗೆ ಬಂದಿದ್ದರು. ಆದರೆ ರಜೆ ಮುಗಿಸಿ ತೆರಳಬೇಕಿದ್ದ ಯೋಧ ...