ಹಾಸನದಲ್ಲಿ ರೈತ ಸಜೀವ ದಹನ

ಹಾಸನ, ಶುಕ್ರವಾರ, 10 ಮಾರ್ಚ್ 2017 (11:25 IST)

Widgets Magazine

ಹಾಸನ(ಮಾ.10): ಹೊಲಕ್ಕೆ ಹೋಗಿದ್ದ ರೈತ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸಜೀವ ದಹನವಾಗಿರುವ ಘಟನೆ ಜಿಲ್ಲೆಯ ಆಲೂರು ತಾಲೂಕಿನ ಗಂಜಿಗೆರೆ ಗ್ರಾಮದಲ್ಲಿ ನಡೆದಿದೆ. ಅಗ್ನಿಗಾಹುತಿಯಾದ ರೈತನನ್ನ ಎಂದು ಗುರ್ತಿಸಲಾಗಿದೆ. 


ಸಂಬಂಧಿಕರು ಹೇಳುವ ಪ್ರಕಾರ, ನಿನ್ನೆ ಬೆಳಗ್ಗೆ ಪುಟ್ಟಸ್ವಾಮಿಗೌಡ ಊಟ ಮುಗಿಸಿ ಹೊಲಕ್ಕೆ ಹೋಗಿದ್ದರು. ಹೊಲದಲ್ಲಿದ್ದ ತೇಗದ ಮರಗಳಿಗೆ ಬಿದ್ದ ಬೆಂಕಿ ನಂದಿಸಲು ಹೋದಾಗ ಅಗ್ನಿಜ್ವಾಲೆಯಿಂದ ತಪ್ಪಿಸಿಕೊಳ್ಲಲಾಗದೆ ಸಜೀವ ದಹನವಾಗಿರಬಹುದು ಎಂದು ತಿಳಿದುಬಂದಿದೆ.
ಮಧ್ಯಾಹ್ನದವರೆಗೂ ಪುಟ್ಟಸ್ವಾಮಿಗೌಡ ಮನೆಗೆ ವಾಪಸ್ ಬರದಿರುವ ಹಿನ್ನೆಲೆಯಲ್ಲಿ ಕುಟುಂಬ ಸದಸ್ಯರು ಹೊಲದ ಬಳಿಗೆ ತೆರಳಿದಾಗ ತೇಗದ ಮರಗಳ ಬಳಿ ಸುಟ್ಟುಕರಕಲಾದ ಪುಟ್ಟಸ್ವಾಮಿಗೌಡರ ದೇಹ ಪತ್ತೆಯಾಗಿದೆ. ಸ್ಥಳಕ್ಕೆ ಪೊಲಿಸರು ಭೆಟಿ ನಿಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಶಾಸಕ ಎಚ್.ಕೆ. ಕುಮಾರಸ್ವಾಮಿ ಭೇಟಿ ನೀಡಿದ್ದಾರೆ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಜಡ್ಜ್ ವಿರುದ್ಧವೇ ಬಂಧನ ವಾರಂಟ್!

ನವದೆಹಲಿ: ಇಂತಹದ್ದೊಂದು ಪ್ರಕರಣ ಭಾರತದ ನ್ಯಾಯಾಂಗ ಇತಿಹಾಸದಲ್ಲೇ ಮೊದಲು. ಅಂತಹದ್ದೇನು ನಡೆಯಿತು ಎಂಬ ...

news

10 ವರ್ಷಗಳಿಂದ ದೈಹಿಕ ಸಂಪರ್ಕ ಬೆಳೆಸದ ಗಂಡನಿಗೆ ಪತ್ನಿ ಮಾಡಿದ್ದೇನು ಗೊತ್ತಾ..?

ಗಾಜಿಯಾ ಬಾದ್(ಮಾ.10): ಹೆಣ್ಣು ಒಲಿದರೆ ನಾರಿ.. ಮುನಿದರೆ ಮಾರಿ ಎಂಬ ಮಾತಿಗೆ ಈ ಪ್ರಕರಣ ಸಾಕ್ಷಿಯಾಗಿ ...

news

ಪ್ರೀತಿಸು ಎಂದು ಹಿಂದೆ ಬೀಳುವ ಹುಡುಗರೆಲ್ಲಾ ಕಲಿಯಲೇಬೇಕಾದ ಪಾಠವಿದು!

ಸಿಂಧನೂರು: ಹುಡುಗಿಯರ ಹಿಂದೆ ಒಂದೇ ಒಂದು ಸಾರಿ ನನ್ನ ಪ್ರೀತಿಸು ಎಂದು ಹಿಂದೆ ಬೀಳುವ ಯುವಕರೆಲ್ಲಾ ಈ ಘಟನೆ ...

news

ಬೆಂಗಳೂರಿನಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ ದಾಖಲು

ಬೆಂಗಳೂರು: ನಗರದಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ ದಾಖಲಾಗಿದೆ. ಒಂದು ವರ್ಷದ ಹಿಂದೆ ನಡೆದ ಪ್ರಕರಣದ ...

Widgets Magazine