ಬ್ಯಾಂಕ್ ಮುಂದೆ ರೈತರ ಪ್ರತಿಭಟನೆ

ಚಿತ್ರದುರ್ಗ, ಶುಕ್ರವಾರ, 7 ಡಿಸೆಂಬರ್ 2018 (19:14 IST)

ಕರ್ನಾಟಕ ಬ್ಯಾಂಕ್ ಅಧಿಕಾರಿಗಳ ಕಿರುಕುಳ ತಪ್ಪಿಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಬ್ಯಾಂಕಿನ ಎದುರು ಪ್ರತಿಭಟನೆ ನಡೆಸಿದರು.

ಕರ್ನಾಟಕ ಬ್ಯಾಂಕಿನಲ್ಲಿ ರೈತರೊಬ್ಬರು ತಾವು ಪಡೆದಿದ್ದ 4 ಲಕ್ಷ ರೂ. ಗಳನ್ನು ಪಡೆದು 2 ಲಕ್ಷ ರೂ.ಗಳನ್ನು ಮರುಪಾವತಿ ಮಾಡಿದ್ದು, ಮತ್ತೆ 9 ಲಕ್ಷ ರೂ.ಗಳ ಬೇಕೆಂದು ಕೇಳಿದಾಗ ಬ್ಯಾಂಕ್ ಅಧಿಕಾರಿಗಳು ನೀಡುವುದಾಗಿ ಭರವಸೆ ನೀಡಿ, ಎಲ್ಲಾ ದಾಖಲೆಗಳನ್ನು ಪಡೆದು ಮಾಟ್ ಗೇಜ್ ಮಾಡಿಸಿಕೊಂಡು ಇದೀಗ ಹಣವನ್ನು ನೀಡಲು  ಆಗುವುದಿಲ್ಲಾ ಎಂದು ಹೇಳುತ್ತಿದ್ದಾರೆ. ಇದರಿಂದ ಹಣ ನಮ್ಮ ದಾಖಲೆಗಳನ್ನು ವಾಪಸ್ಸು ಪಡೆದಿದ್ದೇವೆ. ಆದರೆ ಬ್ಯಾಂಕ್ ಅಧಿಕಾರಿಗಳು ಮಾಟ್ ಗೇಜನ್ನು ರದ್ದುಪಪಡಿಸದೆ 3 ವರ್ಷದಿಂದ ಸತಾಯಿಸುತ್ತಿದ್ದಾರೆ. ಅಲ್ಲದೆ ಸಾಲ ಮರುಪಾವತಿ ಮಾಡುವಂತೆ ಒತ್ತಾಯಿಸುತ್ತಿದ್ದಾರೆ.   ನ್ಯಾಯಾಲಯದಲ್ಲಿ ದಾವೆಯನ್ನು ಹೂಡುವುದಾಗಿ ಹೆದರಿಸುತ್ತಿದ್ದಾರೆ ಇದರಿಂದ ನಮಗೆ ಜೀವನ ನಡೆಸಲು ತುಂಬ  ತೊಂದರೆಯಾಗುತ್ತಿದೆ ಎಂದು ಪ್ರತಿಭಟನೆಯಲ್ಲಿ ತಮ್ಮ ಅಳಲು ತೊಡಿಕೊಂಡಿದ್ದಾರೆ.

ಜಿಲ್ಲೆಯು ಸತತ ಮೂರ್ನಾಲ್ಕು ವರ್ಷಗಳಿಂದ ಬರಗಾಲಕ್ಕೆ ತುತ್ತಾಗಿದೆ. ರೈತರು ಜೀವನ ನಡೆಸಲು ತುಂಬಾ ತೊಂದರೆಯಾಗುತ್ತಿದೆ. ಈಗಿರುವ ಪರಿಸ್ಥಿತಿಯಲ್ಲಿ ಜೀವನ ನಡೆಸುವುದೆ ಕಷ್ಟಕರವಾಗಿದೆ. ಇದರಿಂದ ಸಾಲವನ್ನು ತೀರಿಸಲು ಎಲ್ಲಿಂದ ಸಾಧ್ಯ. ರಾಜ್ಯದ ಮುಖ್ಯಮಂತ್ರಿಗಳು ರೈತರ ಸಾಲ  ಮನ್ನಾ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ ಆದರೆ ಇದುವರೆಗೂ ಯಾವೊಬ್ಬ ರೈತರ ಸಾಲ ಮನ್ನಾ ಮಾಡಿಲ್ಲಾ. ಅಧಿಕಾರಿಗಳ ಕಿರುಕುಳ ತಪ್ಪಿಲ್ಲಾ ಎಂದು ಪ್ರತಿಭಟನೆ ಮಾಡುವ ಮೂಲಕ ತಮ್ಮ ಅಳಲನ್ನು ವ್ಯಕ್ತಪಡಿಸಿದರು.


 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ವಿವಾಹಿತ ಮಹಿಳೆಯ ಭೀಕರ ಕೊಲೆ; ಪ್ರಿಯಕರ, ಪತಿ ಸುತ್ತ ಅನುಮಾನದ ಚಿತ್ತ?

22 ವರ್ಷ ಹರೆಯದ ಆ ಮಹಿಳೆ ತನ್ನ ಗಂಡನನ್ನು ಬಿಟ್ಟಿದ್ದಳು. ಪ್ರಿಯಕರನೊಂದಿಗೆ ಒಂದಷ್ಟು ದಿನ ಜೀವನ ...

news

ಋಣಮುಕ್ತ ಪ್ರಮಾಣಪತ್ರ ವಿತರಣೆಗೆ ಮುಂದಾದ ಸರಕಾರ

ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಋಣಮುಕ್ತ ಪ್ರಮಾಣ ಪತ್ರಗಳನ್ನು ರೈತರಿಗೆ ವಿತರಿಸಲಾಗುತ್ತಿದೆ. ಸರಕಾರ ಈ ...

news

ಕೊಡಗು ಸಂತ್ರಸ್ಥರಿಗೆ ಸಿಎಂ ಮಾಡಿದ್ದೇನು ಗೊತ್ತಾ?

ಪ್ರಕೃತಿ ವಿಕೋಪಕ್ಕೆ ಗುರಿಯಾಗಿ, ವಿಪರೀತ ಮಳೆಯಿಂದ ಹಾನಿಗೊಳಗಾಗಿರುವ ಕೊಡಗು ಜಿಲ್ಲೆಯ ನೆರವಿಗೆ ಸಿಎಂ ...

news

ಕೋಟೆನಾಡಿನ ಜನರಿಗೆ ಶುರುವಾದ ಹೊಸ ಕಿರಿಕಿರಿ

ಕೋಟೆನಾಡಿನ ಜನರಿಗೆ ಕಳೆದ ಇಪ್ಪತ್ತು ದಿನಗಳಿಂದ ಹೊಸ ಕಿರಿಕಿರಿಯೊಂದು ಶುರುವಾಗಿದೆ.

Widgets Magazine