ಪೊರಕೆಯಿಂದ ಹೆತ್ತಮ್ಮನಿಗೆ ಹೊಡೆದ ಮಗನ ಮೇಲೆ ಎಫ್ ಐ ಆರ್

ಬೆಂಗಳೂರು, ಶನಿವಾರ, 8 ಡಿಸೆಂಬರ್ 2018 (20:38 IST)

ಬುದ್ಧಿವಾದ ಹೇಳಿದ್ದಕ್ಕೆ  ಹೆತ್ತಮ್ಮನಿಗೆ ಪೊರಕೆಯಿಂದ ಹೊಡೆದು ಕಿರುಕುಳ ನೀಡಿದ ಮಗನ ಮೇಲೆ ಸ್ವಯಂಪ್ರೇರಿತ ದೂರು ದಾಖಲಿಸಿ ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ.

ಹೆತ್ತಮ್ಮನಿಗೆ ಹೊಡೆಯುತ್ತಿರುವ ದೃಶ್ಯಗಳನ್ನು ಮಾಧ್ಯಮಗಳಲ್ಲಿ ನೋಡಿ ಪರಿಶೀಲಿಸಿದಾಗ ಜೆ.ಪಿ ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವುದು ಕಂಡುಬಂದಿದೆ. ಮಗ ಪೊರಕೆಯಿಂದ ಹೊಡೆದಿದ್ದರ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ. ವಿಡಿಯೋ ವೈರಲ್ ಆಗಿರುವುದನ್ನು ತಿಳಿದು ಮಗ  ಜೀವನ್ ವಿರುದ್ಧ  ಸ್ವಯಂಪ್ರೇರಿತ ದೂರು ದಾಖಲಿಸಿದ್ದೇವೆ ಎಂದು  ಡಿಸಿಪಿ ಅಣ್ಣಾಮಲೈ ತಿಳಿಸಿದ್ದಾರೆ.

ಮೊದಲು ಜೀವನ್ ತಾಯಿಯ ಬಳಿ ಮಾತನಾಡಿ, ಅವರಿಗೆ ಹಲ್ಲೆಯಿಂದ ಗಾಯಗಾಳಾಗಿದ್ದೀಯಾ ಎಂಬುದು ಪರಿಶೀಲಿಸಬೇಕು. ನಂತರ ಸೂಕ್ತ ಕ್ರಮಕೈಗೊಳ್ಳುತ್ತೇವೆ. ಪ್ರಕರಣದಲ್ಲಿ ತಾಯಿಯೇ ದೂರು ನೀಡಬೇಕಾಗುತ್ತೆ. ಆದರೆ ಸ್ವಂತ ಮಗನ ವಿರುದ್ಧ ಏಕೆ ದೂರು ನೀಡಬೇಕು ಎಂದು ತಾಯಿ ಹಿಂಜರಿಯುತ್ತಾರೆ. ಕುಟುಂಬದವರು ಯಾರೂ ದೂರು ನೀಡದ ಕಾರಣ ನಾವೇ ಸ್ವತಃ ದೂರು ದಾಖಲಿಸಿಕೊಳ್ಳುತ್ತಿದ್ದೇವೆ ಎಂದರು.
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬಿಸಿಲೂರಿನಲ್ಲಿ ಸಾಹಿತ್ಯ ಸಮ್ಮೇಳನದ ಸಡಗರ

ಜಾಗತೀಕರಣ ಪ್ರಭಾವದ ಕಾರಣ ಜೀವನದ ನಿರ್ವಹಣೆಗಾಗಿ ಇಂಗ್ಲೀಷ್ ಕಲಿಯಿರಿ. ಹಾಗಂತ ಮಾತೃ ಭಾಷೆಯಾಗಿರುವ ಹಾಗೂ ...

news

ಲಂಚ ಕೊಟ್ಟರೂ ಬದುಕಿ ಉಳಿಯದ ಮಗು!

ಆ ಶಿಶು ಆಗಷ್ಟೇ ಜನಿಸಿ ಎರಡು ದಿನಗಳಾಗಿತ್ತು. ಸರಕಾರಿ ಆಸ್ಪತ್ರೆಯಾಗಿದ್ದರೂ ಅಲ್ಲಿ ಎಲ್ಲ ಚಿಕಿತ್ಸೆಗೂ ...

news

ಲೈಂಗಿಕ ಕಾರ್ಮಿಕರಿಗೆ ಏನು ಬೇಕಾಗಿದೆ ಗೊತ್ತಾ?

ಲೈಂಗಿಕ ಕಾರ್ಮಿಕರ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಸಂಘಟನೆ ವತಿಯಿಂದ ರಾಜಧಾನಿಯಲ್ಲಿ ಬೃಹತ್ ಜಾಥಾ ...

news

ಜಯಲಲಿತಾ ಸಾವಿನ ಪ್ರಕರಣ ತೀವ್ರಗೊಂಡ ವಿಚಾರಣೆ

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಹಾಗೂ ಎಐಎಡಿಎಂಕೆ ಅಧ್ಯಕ್ಷೆ ಜಯಲಲಿತಾ ಸಾವಿನ ಸುತ್ತ ಎದ್ದಿರುವ ...

Widgets Magazine
Widgets Magazine