ನಗರದ ಯಲಹಂಕ ವಾಯುನೆಲೆಯಲ್ಲಿ 2015ರ ಏರ್ ಇಂಡಿಯಾ ಶೋ ನಡೆಯುತ್ತಿದ್ದ ವೇಳೆಯಲ್ಲಿ ವಿಮಾನ ಹಾರಾಟ ನಡೆಸುತ್ತಿದ್ದಾಗ ರನ್ ವೇ ಪಕ್ಕದಲ್ಲಿಯೇ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ಇಂದು ನಡೆಯಿತು. ರನ್ ವೇಯಲ್ಲಿ ವಿಮಾನಗಳು ಮೇಲಿಂದ ಮೇಲೆ ಹಾರುತ್ತಿದ್ದವು. ಈ ವೇಳೆಯಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು ಕ್ಷಣಾರ್ಧದಲ್ಲಿ ಸಾಕಷ್ಟು ಜಾಗಕ್ಕೆ ವಿಸ್ತರಿಸಿಕೊಂಡಿತು. ಇದರಿಂದ ಸಾರ್ವಜನಿಕರಲ್ಲಿ ಕೆಲ ಕಾಲ ಆಘಾತ ಉಂಟು ಮಾಡಿತ್ತು. ಆದರೆ ಘಟನೆ ಕಂಡ ಕೂಡಲೇ ಅಲ್ಲಿಯೇ ರಕ್ಷಣೆಗೆಂದಿದ್ದ