ಭೀಕರ ರಸ್ತೆ ಅಪಘಾತ: ಹಬ್ಬಕ್ಕೆ ಹೊರಟಿದ್ದ ಮೂವರು ಸೇರಿ ಐವರು ಸಾವು

ಬೆಂಗಳೂರು, ಗುರುವಾರ, 19 ಅಕ್ಟೋಬರ್ 2017 (20:45 IST)

ಬೆಂಗಳೂರು: ದೀಪಾವಳಿ ಹಬ್ಬದ ಆಚರಣೆಗೆ ಊರಿಗೆ ತೆರಳುತ್ತಿದ್ದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಸೇರಿದಂತೆ ಐವರು ಮೃತಪಟ್ಟಿರುವ ಘಟನೆ ಸಮೀಪದ ಬೈಚಾಪುರ ಗ್ರಾಮದ ಬಳಿ ನಡೆದಿದೆ.


ಸ್ಕಾರ್ಪಿಯೋ ಕಾರಿನಲ್ಲಿದ್ದ ಕೆಂಪರಾಜು(40), ಮಕ್ಕಳಾದ ಸೌಮ್ಯ(10), ಸಂಜಯ್(2), ಸಾಜನ್(24) ಮತ್ತು ನವನೀದ್(25) ಮೃತರು. ನಾಲ್ವರಿಗೆ ಗಾಯಗಳಾಗಿದ್ದು, ಕೆಂಪರಾಜು ಪತ್ನಿ ಮಮತಾ(30) ಸ್ಥಿತಿ ಗಂಭೀರವಾಗಿದೆ. ನಾಲ್ವರು ಗಾಯಾಳುಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಕಾರ್ಪಿಯೋದಲ್ಲಿ 6 ಮಂದಿ ಬೆಂಗಳೂರಿನ  ನಾಗವಾರ ನಿವಾಸಿಗಳು ಚುಂಚಿಫಾಲ್ಸ್ ಗೆ ತೆರಳುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಕಾರು, ರಸ್ತೆ ಪಕ್ಕದಲ್ಲಿ ಟೀ ಕುಡಿಯಲು ನಿಲ್ಲಿಸಿದ್ದ ಬೈಕ್ ಗೆ ಡಿಕ್ಕಿ ಹೊಡೆದು ನಂತರ ತಂಗುದಾಣಕ್ಕೆ ಗುದ್ದಿದೆ. ಈ ವೇಳೆ ಕಾರಿನಲ್ಲಿದ್ದ ಮೂವರು, ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತ ಬೈಕ್ ಸವಾರರು, ಬೆಂಗಳೂರಿನ ಹೆಗ್ಗನಹಳ್ಳಿ ನಿವಾಸಿಗಳಾಗಿದ್ದಾರೆ. ಈ ಕುರಿತು ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ವಜ್ರಮಹೋತ್ಸವ ಸಾಕ್ಷ್ಯಚಿತ್ರಗಳ ಕೋಟಿ ಖರ್ಚು ಲಕ್ಷಕ್ಕೆ ಇಳಿಕೆ..!

ಬೆಂಗಳೂರು: ವಿಧಾನಸೌಧ ವಜ್ರ ಮಹೋತ್ಸವಕ್ಕೆ ಶಾಸಕರಿಗೆ ಬೆಳ್ಳಿ, ಚಿನ್ನದ ಚಿಸ್ಕತ್ ವಿಚಾರ ರಾಜ್ಯದಲ್ಲಿ ...

news

ಮುಸ್ಲಿಮರು ಸೋಷಿಯಲ್ ಮೀಡಿಯಾದಲ್ಲಿ ಫೋಟೊ ಹಾಕುವುದು ಬ್ಯಾನ್

ನವದೆಹಲಿ: ಇತ್ತೀಚೆಗಷ್ಟೇ ಮುಸ್ಲಿಂ ಮಹಿಳೆಯರು ಹೇರ್ ಸ್ಟೈಲ್, ಐಬ್ರೋ ಶೇಪ್ ಮಾಡುವುದು ಧರ್ಮಕ್ಕೆ ...

news

ಸಾವು, ಬದುಕಿನ ನಡುವೆ ಹೋರಾಟದಲ್ಲಿ ಬದುಕಲಿಲ್ಲ ಸಂಜನಾ…

ಬೆಂಗಳೂರು: ಈಜಿಪುರ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಪವಾಡ ಸದೃಶ ಪಾರಾಗಿದ್ದ ಮೂರು ವರ್ಷದ ಮಗು ...

news

ಪಾಕ್ ರೋಗಿಗಳಿಗೆ ದೀಪಾವಳಿ ಬಂಪರ್ ಗಿಫ್ಟ್ ನೀಡಿದ ಸುಷ್ಮಾ ಸ್ವರಾಜ್

ನವದೆಹಲಿ: ಪಾಕಿಸ್ತಾನ ರೋಗಿಗಳಿಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ದೀಪಾವಳಿಗೆ ಬಂಪರ್ ಗಿಫ್ಟ್ ...

Widgets Magazine
Widgets Magazine