ಬಿಎಂಟಿಸಿ ಚಾಲಕರಿಗೆ ಡ್ರೈವಿಂಗ್ ವೇಳೆ ಮೊಬೈಲ್ ಬಳಕೆ ನಿಷಿದ್ಧ; ಆದೇಶ ಮೀರಿದರೆ ಕೆಲಸದಿಂದ ಅಮಾನತು

ಬೆಂಗಳೂರು, ಶನಿವಾರ, 10 ನವೆಂಬರ್ 2018 (12:46 IST)

ಬೆಂಗಳೂರು : ಫೋನ್ ಬಳಕೆಯಿಂದ ಆಕ್ಸಿಡೆಂಟ್ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿರುವ ಹಿನ್ನಲೆಯಲ್ಲಿ ಇದೀಗ ಬಿಎಂಟಿಸಿ ಚಾಲಕರ ಮೊಬೈಲ್ ಬಳಕೆ ನಿಷಿದ್ಧಗೊಳಿಸಿ ಎಂದು ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ.


ಬಿಎಂಟಿಸಿ ಚಾಲಕರಿಗೆ ಡ್ರೈವಿಂಗ್ ನಲ್ಲಿ ಮೊಬೈಲ್ ಫೋನ್ ಬಳಕೆ ಮಾಡುವಂತಿಲ್ಲ ಎಂದು ಸುತ್ತೋಲೆ ಕೊಟರೂ ಕೂಡ  ಎಚ್ಚೆತ್ತುಕೊಳ್ಳದ ಹಿನ್ನೆಲೆಯಲ್ಲಿ ಮೊಬೈಲ್ ಇಟ್ಟುಕೊಳ್ಳದಂತೆ ಇದೀಗ ಖಡಕ್ ಆದೇಶ ನೀಡಲಾಗಿದೆ ಎನ್ನಲಾಗಿದೆ.  ಒಂದು ವೇಳೆ ಆದೇಶ ಮೀರಿ ನಡೆದುಕೊಂಡರೆ ಕೆಲಸದಿಂದಲೇ ಅಮಾನತು ಮಾಡಲಾಗುತ್ತದೆ ಎಂದು ಇಲಾಖೆ ಎಚ್ಚರ ಕೂಡ ನೀಡಿದೆ.


ಆದ್ದರಿಂದ ಚಾಲಕರು ಇನ್ನು ಮುಂದೆ ಡ್ಯೂಟಿಯಲ್ಲಿ ಇರಬೇಕಾದರೆ ಮೊಬೈಲ್ ತರುವಂತಿಲ್ಲ. ಆಯಾ ಡಿಪೋಗಳಲ್ಲಿ ಫೋನ್ ಸ್ವಿಚ್ ಆಫ್ ಮಾಡಿ ಇಡಬೇಕು. ನವೆಂಬರ್ 15 ರಿಂದ ಈ ಹೊಸ ಕಾಯ್ದೆ ಬಿಎಂಟಿಸಿ ಚಾಲಕರಿಗೆ ಅನ್ವಯವಾಗಲಿದೆ ಎಂಬುದಾಗಿ ಇಲಾಖೆ ತಿಳಿಸಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಟಿಪ್ಪು ಜಯಂತಿ ವಿರೋಧಿಸಿದ್ದಕ್ಕೆ ಬಿಜೆಪಿ ಅಧಿಕಾರ ಕಳೆದುಕೊಂಡಿತು ಎಂದ ಜಮೀರ್ ಅಹಮ್ಮದ್ ಗೆ ಈಶ್ವರಪ್ಪ ತಿರುಗೇಟು

ಬಾಗಲಕೋಟೆ: ಟಿಪ್ಪು ಜಯಂತಿ ಆಚರಣೆಗೆ ಬಿಜೆಪಿ ವಿರೋಧಿಸಿದ್ದಕ್ಕೇ ಅದಕ್ಕೆ ಅಧಿಕಾರ ಸಿಗಲಿಲ್ಲ ಎಂಬ ಸಚಿವ ...

news

ಸಿಎಂ ಎಚ್ ಡಿಕೆ ನಾಪತ್ತೆ: ಬಿಜೆಪಿ ಹೀಗಂತ ಲೇವಡಿ ಮಾಡಿದ್ದೇಕೆ ಗೊತ್ತಾ?

ಬೆಂಗಳೂರು: ವ್ಯಾಪಕ ವಿರೋಧದ ನಡುವೆಯೇ ರಾಜ್ಯದ ಸಮ್ಮಿಶ್ರ ಸರ್ಕಾರದ ವತಿಯಿಂದ ಆಚರಿಸಲಾಗುತ್ತಿರುವ ಟಿಪ್ಪು ...

news

ತಲೆಮರೆಸಿಕೊಂಡಿರುವ ಜನಾರ್ಧನ ರೆಡ್ಡಿಗಾಗಿ ಸಿಸಿಬಿ ಎಚ್ಚರಿಕೆ

ಬೆಂಗಳೂರು: ಆಂಬಿಡೆಂಟ್ ಕಂಪನಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಮಾಜಿ ...

news

ಟಿಪ್ಪು ಒಬ್ಬ ದೇಶಪ್ರೇಮಿ ಅರಸ, ಬಿಜೆಪಿಯವರು ಕನ್ನಡ ಕಳಚಿಟ್ಟು ನೋಡಲಿ: ಸಿದ್ದರಾಮಯ್ಯ ಟಾಂಗ್

ಬೆಂಗಳೂರು: ಇಂದು ಟಿಪ್ಪು ಜಯಂತಿ ಆಚರಣೆಗೆ ವಿರೋಧ ವ್ಯಕ್ತಪಡಿಸುತ್ತಿರುವ ವಿಪಕ್ಷ ಬಿಜೆಪಿ ಮತ್ತು ಹಿಂದೂ ...

Widgets Magazine