ದಿನಗೂಲಿ ನೌಕರನೊರ್ವನಿಗೆ ಕೂಲಿ ಪಾವತಿಸದ ಸಾಮಾಜಿಕ ಅರಣ್ಯ ವಲಯಾಧಿಕಾರಿ ಕಚೇರಿ ಜಪ್ತಿಗೆ ಕೋರ್ಟ್ ಆದೇಶಿದ್ದು, ಅಮೀನ್ ದಾರರು ಅಧಿಕಾರಿಗಳಿಗಾಗಿ ಕಾದು, ಕಚೇರಿ ಅವಧಿ ಮುಗಿದ ನಂತರ ವಾಪಸ್ಸು ತೆರಳಿದ ಘಟನೆ ನಡೆದಿದೆ.ಚಾಮರಾಜನಗರದಲ್ಲಿ ಈ ಘಟನೆ ನಡೆದಿದೆ. ದಿನಗೂಲಿ ಅರಣ್ಯ ವೀಕ್ಷಕನಾಗಿ ನೇಮಕಗೊಂಡು ಕರ್ತವ್ಯ ನಿರ್ವಹಿಸಿದ್ದ ಥಾಮಸ್ ಎಂಬುವರಿಗೆ ಕಾರಣ ನೀಡದೆ ಕೆಲಸದಿಂದ ವಜಾಗೊಳಿಸಿದ್ದನ್ನು ಪ್ರಶ್ನಿಸಿ 2003ರಲ್ಲಿ ಕೋರ್ಟ್ ಮೆಟ್ಟಿಲೇರಿದ್ದ ಪ್ರಕರಣ ಚಾಮರಾಜನಗರದಲ್ಲಿ ನಡೆದಿತ್ತು. 2012 ರಲ್ಲಿ ಅಂತಿಮ ತೀರ್ಪು ಹೊರಬಂದು