ಮಾಜಿ ಸಿಎಂ ಕುಮಾರಸ್ವಾಮಿಗೆ ಹೃದಯ ಶಸ್ತ್ರಚಿಕಿತ್ಸೆ, ನಾಳೆ ಆಸ್ಪತ್ರೆಗೆ ದಾಖಲು

ಬೆಂಗಳೂರು, ಬುಧವಾರ, 20 ಸೆಪ್ಟಂಬರ್ 2017 (16:37 IST)

ಇಸ್ರೇಲ್ ಪ್ರವಾಸ ಮುಗಿಸಿಕೊಂಡು ಬಂದ ಮಾಜಿ ಸಿಎಂ ಕುಮಾರಸ್ವಾಮಿ ಆರೋಗ್ಯದಲ್ಲಿ ಏರುಪೇರಾಗಿದೆ. ಶನಿವಾರ ಮಾಜಿ ಸಿಎಂ ಕುಮಾರಸ್ವಾಮಿಗೆ ಹೃದಯ ಶಸ್ತ್ರಚಿಕಿತ್ಸೆ ನಡೆಯಲಿದೆ. ಜಯದೇವ ಆಸ್ಪತ್ರೆಯಲ್ಲಿ ಡಾ. ಮಂಜುನಾಥ್ ನೇತೃತ್ವದಲ್ಲಿ ಈ ಶಸ್ತ್ರಚಿಕಿತ್ಸೆ ನಡೆಯಲಿದೆ.


ಮೆಟಲ್ ವಾಲ್ವ್ ಹಾಕಿದರೆ ಮೆಡಿಸಿನ್ ತೆಗೆದುಕೊಳ್ಳುವಾಗ ವ್ಯತ್ಯಾಸವಾಗಿ ಬ್ರೈನ್ ಹೆಮರೇಜ್ ಸಮಸ್ಯೆ ಉಂಟಾಗಬಹುದು. ಹೀಗಾಗಿ, ಟಿಶು ವಾಲ್ವ್ ಬದಲಾವಣೆಗೆ ನಿರ್ಧರಿಸಲಾಗಿದೆ.  15 ವರ್ಷಗಳ ಕಾಲ ಯಾವುದೇ ಸಮಸ್ಯೆ ಬಾರದಂತೆ ಟಿಶ್ಯೂ ವಾಲ್ವ್ ಅಳವಡಿಸಲಾಗುತ್ತದೆ. 15 ವರ್ಷಗಳ ಬಳಿಕ ಸಮಸ್ಯೆ ಕಂಡುಬಮದರೆ ಶಸ್ತ್ರಚಿಕಿತ್ಸೆ ಮಾಡಲಾಗುತ್ತೆ ಎಂದು ಹೇಳಲಾಗುತ್ತಿದೆ.. ಇಸ್ರೇಲ್ ಪ್ರವಾಸದಲ್ಲಿದ್ದ ಸಂದರ್ಭ ಕುಮಾರಸ್ವಾಮಿ ಆರೋಗ್ಯದಲ್ಲಿ ಏರುಪೇರಾಗಿ 98 ಕೆ.ಜಿ ಇದ್ದ ತೂಕ 7 ಕೆ.ಜಿ ಏರಿಕೆ ಕಂಡಿತ್ತು. ಇದೀಗ, 13 ಕೆ.ಜಿಯಷ್ಟು ತೂಕ ಇಳಿಸಲಾಗಿದೆ.

2007ರಲ್ಲಿ ಟಿಶ್ಯೂ ವಾಲ್ವ್ ಅಳವಡಿಸಲಾಗಿತ್ತು. ಇದೀಗ, ಅದರ ರಿ[ಪ್ಲೇಸ್ ಮೆಂಟ್ ಶಸ್ತ್ರಚಿಕಿತ್ಸೆ ನಡೆಯಲಿದೆ. ಹೀಗಾಗಿ, ಕುಮಾರಸ್ವಾಮಿ ನಾಳೆಯೇ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ ಎಂದು ತಿಳಿದು ಬಂದಿದೆ.
 
 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮೆಕ್ಸಿಕೊದಲ್ಲಿ ಭೀಕರ ಭೂಕಂಪ: 250 ಕ್ಕೂ ಹೆಚ್ಚು ಜನರ ಸಾವು

ಮೆಕ್ಸಿಕೊ: ರಿಕ್ಟರ್ ಪ್ರಮಾಣದಲ್ಲಿ 7.1 ರಷ್ಟು ತೀವ್ರತೆಯನ್ನು ಹೊಂದಿರುವ ಭೂಕಂಪ ಸಂಭವಿಸಿದ್ದು 248 ಜನರು ...

news

ಉದ್ಘಾಟನೆಗೆ 24 ಗಂಟೆಗಳಿರುವಂತೆಯೇ ಕುಸಿದ ಆಣೆಕಟ್ಟು: 389 ಕೋಟಿ ನೀರುಪಾಲು

ಭಾಗಲ್ಪುರ್: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಉದ್ಘಾಟನಾ ಸಮಾರಂಭಕ್ಕೆ 24 ಗಂಟೆಗಳ ಮುಂಚೆಯೇ ...

news

ದರ್ಶನ್ ಫೋಟೊ ತೆಗೆದವರ ವಿರುದ್ಧ ಕ್ರಿಮಿನಲ್ ಕೇಸ್: ಮುನಿರತ್ನ

ಬೆಂಗಳೂರು: ಕುರುಕ್ಷೇತ್ರ ಸೆಟ್ ನಲ್ಲಿ ನಟ ದರ್ಶನ್ ಜತೆಯಿದ್ದ ನಟಿ ಪವಿತ್ರ ಗೌಡ ಫೋಟೊ ಸಾಕಷ್ಟು ಚರ್ಚೆಗೆ ...

news

18 ಶಾಸಕರ ಅನರ್ಹ ಆದೇಶಕ್ಕೆ ತಡೆ ನೀಡಲು ಮದ್ರಾಸ್ ಹೈಕೋರ್ಟ್ ನಕಾರ

ಚೆನ್ನೈ: ತಮಿಳುನಾಡಿನಲ್ಲಿ ರಾಜಕೀಯ ಹೈಡ್ರಾಮಾ ಮುಂದುವರಿದಿದೆ. 18 ಅನರ್ಹ ಶಾಸಕರ ಅನರ್ಹ ಆದೇಶಕ್ಕೆ ತಡೆ ...

Widgets Magazine
Widgets Magazine