ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಬಿಗ್ ರಿಲೀಫ್

ಬೆಂಗಳೂರು, ಸೋಮವಾರ, 13 ಮಾರ್ಚ್ 2017 (19:04 IST)

Widgets Magazine

ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಬಿಗ್ ರಿಲೀಫ್ ಸಿಕ್ಕಿದೆ. ಬಳ್ಳಾರಿಯಲ್ಲಿ 2003-04ರಲ್ಲಿ ನಡೆದಿದ್ದ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ರೆಡಿ ಪತ್ನಿ ಅರುಣಾ ಲಕ್ಷ್ಮೀ, ಓಎಂಸಿ ಮತ್ತು ಬ್ರಹ್ಮಿಣಿ ಸ್ಟೀಲ್ಸ್ ವಿರುದ್ಧ ಜಾರಿನಿರ್ದೇಶನಾಲಯ ದಾಖಲಿಸಿದ್ದ ಕೇಸ್ ವಜಾಗೊಳಿಸಿರುವ ಹೈಕೋರ್ಟ್ ವಿಭಾಗೀಯ ಪೀಠ,  ಜಪ್ತಿ ಮಾಡಿದ್ದ 884 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹಿಂದಿರುಗಿಸುವಂತೆ ಸೂಚಿಸಿದೆ.


ಇಡಿ ಕೇಸಿಗೆ ಆಕ್ಷೇಪ ವ್ಯಕ್ತಪಡಿಸಿರುವ ಹೈಕೋರ್ಟ್, 2009ರಲ್ಲಿ ಪಿಎಂಎಲ್ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದ್ದು  ಪೂರ್ವಾನ್ವಯ ಸಾಧ್ಯವಿಲ್ಲ ಎಂದು ಹೇಳಿದೆ.

2011ರಲ್ಲಿ ಜನಾರ್ದನ ರೆಡ್ಡಿ ಮನೆ ಮೇಲಿನ ದಾಳಿ ಬಳಿಕ ಜಾರಿ ನಿರ್ದೇಶನಾಲಯ ಹೆಲಿಕಾಪ್ಟರ್ ಸೇರಿ 884 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ ಮಾಡಿತ್ತು. ಆಸ್ತಿ ಹಿಂದಿರುಗಿಸುವಂತೆ ಕೋರಿ ಜನಾರ್ದನ ರೆಡ್ಡಿ ಹೈಕೋರ್ಟ್ ಮೊರೆ ಹೋಗಿದ್ದರು.
 Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ ಬಿಗ್ ರಿಲೀಫ್

ಬೆಂಗಳೂರು: ಬಳ್ಳಾರಿ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ, ಬ್ರಹ್ಮಿಣಿ ಸ್ಟೀಲ್ಸ್‌ ಕಂಪೆನಿಯ ವಿರುದ್ಧದ ...

news

ಮಧು ಬಂಗಾರಪ್ಪರನ್ನ ಭೇಟಿಯಾದ ಡಿಕೆಶಿ

ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಮಾಜಿ ಸಿಎಂ ...

news

ನೇಪಾಳಿ ಮಹಿಳೆಯ ಮೇಲೆ ಐವರು ಕಾಮುಕರಿಂದ ಗ್ಯಾಂಗ್‌ರೇಪ್

ನವದೆಹಲಿ: ನೇಪಾಳಿ ಮೂಲದ ಮಹಿಳೆಯ ಮೇಲೆ ಐವರು ಕಾಮುಕರು ಗ್ಯಾಂಗ್‌ರೇಪ್ ಎಸಗಿದ ಘಟನೆ ಪೂರ್ವ ದೆಹಲಿಯ ಪಾಂಡವ್ ...

news

ಬೆದರಿಕೆಗಳಿಗೆ ಹಾಡಿನ ಮೂಲಕವೇ ಉತ್ತರಿಸಿದ ಸುಹಾನಾ

ಖಾಸಗಿ ಚಾನಲ್`ನ ರಿಯಾಲಿಟಿ ಶೋನಲ್ಲಿ ಹಿಂದೂ ದೇವರ ಭಕ್ತಿಗೀತೆ ಹಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದ ...

Widgets Magazine