ಮಾಜಿ ಸಚಿವ ವಿಜಯ್ ಶಂಕರ್ ಬಿಜೆಪಿಗೆ ಗುಡ್‌ಬೈ?

ಮೈಸೂರು, ಗುರುವಾರ, 5 ಅಕ್ಟೋಬರ್ 2017 (16:56 IST)

ಬಿಜೆಪಿ ಮುಖಂಡ ಮಾಜಿ ಸಂಸದ, ಮಾಜಿ ಅರಣ್ಯ ಸಚಿವ ವಿಜಯ್ ಶಂಕರ್ ಬಿಜೆಪಿಗೆ ಗುಡ್‌ಬೈ ಹೇಳುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಬಿಜೆಪಿ ನಾಯಕರ ನಡೆಯಿಂದಾಗಿ ಬೇಸರಗೊಂಡಿರುವ ವಿಜಯ್ ಶಂಕರ್, ಬಿಜೆಪಿಗೆ ಗುಡ್‌ಬೈ ಹೇಳಿದಲ್ಲಿ ಮೈಸೂರು ಜಿಲ್ಲೆಯಲ್ಲಿ ಬಿಜೆಪಿಗೆ ಭಾರಿ ಹೊಡೆತ ಬೀಳಲಿದೆ ಎನ್ನಲಾಗುತ್ತಿದೆ.
 
ಬಿಜೆಪಿ ಮುಖಂಡ ವಿಜಯ್ ಶಂಕರ್, ಕಾಂಗ್ರೆಸ್ ಪಕ್ಷ ಸೇರುವ ಸಾಧ್ಯತೆಗಳು ದಟ್ಟವಾಗಿವೆ ಎನ್ನಲಾಗುತ್ತಿದ್ದು, ಅವರೊಂದಿಗೆ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಒಂದು ವೇಳೆ, ವಿಜಯ್ ಶಂಕರ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಮುಖಂಡ ಎಚ್.ವಿಶ್ವನಾಥ್ ವಿರುದ್ಧ ಸ್ಪರ್ಧಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.
 
ಕಳೆದ 2014 ರ ಲೋಕಸಭೆ ಚುನಾವಣೆಯಲ್ಲಿ ವಿಜಯ್ ಶಂಕರ್ ಅವರನ್ನು ಕಡೆಗೆಣಿಸಿದ ಬಿಜೆಪಿ ಹೈಕಮಾಂಡ್, ಮೈಸೂರು ಬದಲಿಗೆ ಹಾಸನ ಲೋಕಸಭಾ ಕ್ಷೇತ್ರಕ್ಕೆ ಟಿಕೆಟ್ ನೀಡಿತ್ತು. ವಿಜಯ್ ಶಂಕರ್, ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧ ಸೋಲನುಭವಿಸಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪಿಎಫ್‍ಐ, ಕೆಎಫ್‍ಡಿ ಸಂಘಟನೆಗಳೊಂದಿಗೆ ಕಾಂಗ್ರೆಸ್ ಸಂಪರ್ಕ: ಕರಂದ್ಲಾಜೆ ಆರೋಪ

ಬೆಂಗಳೂರು: ಪಿಎಫ್‍ಐ, ಕೆಎಫ್‍ಡಿ ಸಂಘಟನೆಗಳೊಂದಿಗೆ ಬಿಜೆಪಿ ನಾಯಕರಿಗೆ ಸಂಪರ್ಕವಿಲ್ಲ. ಅಂತಹ ಸಂಘಟನೆಗಳ ...

news

ಸಿಎಂ ಸಿದ್ದರಾಮಯ್ಯಗೆ ವಿನಾಶಕಾಲೇ ವಿಪರೀತ ಬುದ್ದಿ: ಶೆಟ್ಟರ್

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರೋಧಿಗಳನ್ನು ಹಣಿಯಲು ಭ್ರಷ್ಟಾಚಾರ ನಿಗ್ರಹ ದಳ ...

news

ಐಟಿ ಅಧಿಕಾರಿಗಳ ಮುಂದೆ ಹಾಜರಾದ ಸಚಿವ ಡಿಕೆಶಿ

ಬೆಂಗಳೂರು: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಮುಂದೆ ಇಂಧನ ಖಾತೆ ಸಚಿವ ಡಿ.ಕೆ.ಶಿವಕುಮಾರ್ ಇಂದು ...

news

2018ರಲ್ಲಿ ವಿಧಾನಸಭೆ, ಲೋಕಸಭೆಗೆ ಒಂದೇ ಬಾರಿ ಚುನಾವಣೆ: ಚುನಾವಣೆ ಆಯೋಗ

ನವದೆಹಲಿ: ಮುಂದಿನ ವರ್ಷದಲ್ಲಿ ನಡೆಯಲಿರುವ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳನ್ನು ಒಂದೇ ಬಾರಿಗೆ ...

Widgets Magazine