ಮಾಜಿ ಶಾಸಕ ಬಾಬು ರೆಡ್ಡಿ ತುಂಗಳ ನಿಧನ

ಬಾಗಲಕೋಟೆ, ಶುಕ್ರವಾರ, 9 ನವೆಂಬರ್ 2018 (12:44 IST)

ಬಾಗಲಕೋಟೆ : ಹುಟ್ಟು ಹೋರಾಟಗಾರ, ಅತ್ಯುತ್ತಮ ವಾಗ್ಮಿ ಹಾಗೂ ಮಾಜಿ ಶಾಸಕ ಬಾಬು ರೆಡ್ಡಿ ತುಂಗಳ  ಶುಕ್ರವಾರ (ಇಂದು) ನಿಧನರಾಗಿದ್ದಾರೆ.

ಇವರಿಗೆ 85 ವರ್ಷ ವಯಸ್ಸಾಗಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದ ಬಾಬುರೆಡ್ಡಿ ಜಮಖಂಡಿಯ ಶಾರದಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ 4 ಗಂಟೆಗೆ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ.


 

1985 ರಲ್ಲಿ ಬೀಳಗಿ ಕ್ಷೇತ್ರದ ಶಾಸಕರಾಗಿದ್ದ ಬಾಬುರೆಡ್ಡಿ ತುಂಗಳ ಅವರು ಕುರುಕ್ಷೇತ್ರ ವಾರಪತ್ರಿಕೆ ಸಂಪಾದಕರೂ ಆಗಿದ್ದರು. ಇವರು ಜಮಖಂಡಿ ತಾಲೂಕಿನ ಚಿಕ್ಕಪಡಸಲಗಿ ಗ್ರಾಮದಲ್ಲಿ ದಿವಂಗತ ಶಾಸಕ ಸಿದ್ದು ನ್ಯಾಮಗೌಡರ ನೇತೃತ್ವದಲ್ಲಿ ನಿರ್ಮಾಣ ಮಾಡಲಾದ ಶ್ರಮಬಿಂದು ಸಾಗರ ಬ್ಯಾರೇಜ್ ನಿರ್ಮಾಣದ ಹೊಣೆ ಹೊತ್ತಿದ್ದ ಕೃಷ್ಣಾ ತೀರದ ರೈತ ಸಂಘದ ಮೊದಲ ಅಧ್ಯಕ್ಷರಾಗಿದ್ದರು.


 

ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಸ್ವಗ್ರಾಮ ಬಿದರಿಯಲ್ಲಿ ಇಂದು ಮಧ್ಯಾಹ್ನ 3 ಗಂಟೆಗೆ ಅಂತ್ಯಸಂಸ್ಕಾರ ನಡೆಯಲಿದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 

 



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸಿಎಂ ಕುಮಾರಸ್ವಾಮಿ ವಿಶ್ರಾಂತಿ ಹಿಂದೆ ಬೇರೆಯದೇ ಲೆಕ್ಕಾಚಾರ?!

ಬೆಂಗಳೂರು: ಸಿಎಂ ಕುಮಾರಸ್ವಾಮಿ ಇಂದಿನಿಂದ ಮೂರು ದಿನಗಳ ಕಾಲ ವಿಶ್ರಾಂತಿಗೆ ತೆರಳಿದ್ದು, ಇದರ ಹಿಂದೆ ...

news

ದೀಪಾವಳಿ ಶಾಪಿಂಗ್ ಕರೆದೊಯ್ಯಲು ನಿರಾಕರಿಸಿದ್ದಕ್ಕೆ ಕೊಲೆ

ನವದೆಹಲಿ: ದೀಪಾವಳಿ ಹಬ್ಬಕ್ಕೆ ತನ್ನ ಸ್ಕೂಟರ್ ನಲ್ಲಿ ಶಾಪಿಂಗ್ ಕರೆದೊಯ್ಯಲು ನಿರಾಕರಿಸಿದ್ದಕ್ಕೆ ನೆರೆ ...

news

ಜನಾರ್ಧನ ರೆಡ್ಡಿಯ 57 ಕೆಜಿ ಚಿನ್ನದ ರಹಸ್ಯ ಪತ್ತೆ ಮಾಡಲು ಪೊಲೀಸರ ಹರಸಾಹಸ

ಬಳ್ಳಾರಿ: ಆಂಬಿಡೆಂಟ್ ಕಂಪನಿಯ ಅಕ್ರಮ ಹಣ ವರ್ಗಾವಣೆ ಮಾಡಲು 57 ಕೆಜಿ ಚಿನ್ನ ಪಡೆದಿದ್ದಾರೆಂಬ ಆರೋಪ ...

news

ಮೂರು ದಿನ ಸಿಎಂ ಕುಮಾರಸ್ವಾಮಿಗೆ ರೆಸ್ಟ್: ಟಿಪ್ಪು ಜಯಂತಿಗೆ ಗೈರು

ಬೆಂಗಳೂರು: ಉಪಚುನಾವಣೆ ಪ್ರಚಾರದಲ್ಲಿ ಬ್ಯುಸಿಯಾಗಿ ಬಳಲಿದ ಸಿಎಂ ಕುಮಾರಸ್ವಾಮಿ ವೈದ್ಯರ ಸಲಹೆ ಮೇರೆಗೆ ...

Widgets Magazine
Widgets Magazine