ಗದಗ ಜಿಲ್ಲೆಯಲ್ಲಿ ಮಹಾಮಾರಿ ವೈರಸ್ ನಿಫಾ ವೈರಸ್ ಹರಡಿರುವ ಶಂಕೆ

ಗದಗ, ಗುರುವಾರ, 24 ಮೇ 2018 (18:23 IST)

ಮಾರಣಾಂತಿಕ ಮಹಾಮಾರಿ ಶಂಕಿತ ನೀಫಾ ವೈರಸ್ ಜಿಲ್ಲೆಗೂ ಕಾಲಿಟ್ಟಿದೆ ಎನ್ನಲಾಗುತ್ತಿದೆ. ಗದಗ ಜಿಲ್ಲೆ ರೋಣ ತಾಲೂಕಿನ ವ್ಯಕ್ತಿಯೋರ್ವನಿಗೆ ನಿಫಾ ವೈರಸ್ ಇದೆ ಎಂದು ಶಂಕಿಸಲಾಗಿದೆ. 
ಸೋಂಕಿತ ವ್ಯಕ್ತಿಗೆ ಗದಗ ಜಿಮ್ಸ್ ಆಸ್ಪತ್ರೆಯ ತೀವ್ರ ನಿಗಾ ವಿಶೇಷ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಈ ವ್ಯಕ್ತಿ ಕೆಲ ತಿಂಗಳ ಕಾಲ ಕೇರಳದ ಕ್ಯಾಲಿಕಟ್ ಸಮೀಪದಲ್ಲಿ ಕೆಲಸದಲ್ಲಿದ್ದರು. ಇತ್ತೀಚೆಗೆ ಗದಗ ಜಿಲ್ಲೆಯ ತವರೂರಿಗೆ ಮರಳಿದಾಗ ಕಳೆದ ಒಂದೆರಡು ವಾರಗಳಿಂದ ಜ್ವರ, ತಲೆನೋವು, ವಾಂತಿ, ಕೆಮ್ಮು, ಸುಸ್ತು ಹೀಗೆ ನಿಫಾ ವೈರಸ್‌ನ ಲಕ್ಷಣಗಳು ಈ ವ್ಯಕ್ತಿಗೆ ಗೋಚರವಾಗಿವೆ.
 
ಮುಂಜಾಗ್ರತಾ ಕ್ರಮವಾಗಿ ಗದಗ ಜಿಮ್ಸ್ ವೈದ್ಯರು ತಪಾಸಣೆಗೊಳಪಡಿಸಿದ್ದಾರೆ. ಈ ಹಿನ್ನಲೆಯಲ್ಲಿ ಶಂಕಿತ ವ್ಯಕ್ತಿಯ ರಕ್ತದ ಮಾದರಿಯನ್ನು ಪುಣೆಯ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ರಕ್ತದ ಮಾದರಿ ಸಂಗ್ರಹಿಸಿ, ಪುಣೆಯ ಎನ್‌ಐವಿ ಲ್ಯಾಬ್‌ಗೆ ರಕ್ತ ಪರೀಕ್ಷೆಗಾಗಿ ರವಾನಿಸಿದ್ದಾರೆ.
 
 48 ಗಂಟೆಗಳಲ್ಲಿಪ್ರಯೋಗಾಲಯದ ವರದಿ ಬರಲಿದ್ದು, ಆನಂತರ ಹೆಚ್ಚಿನ ಚಿಕಿತ್ಸೆ ನೀಡುವುದಾಗಿ ಜಿಮ್ಸ್ ಆಡಳಿತ ವೈದ್ಯಾಧಿಕಾರಿ ಎ.ಬಿ ಪಾಟೀಲ್  ಮಾದ್ಯಮದವರಿಗೆ ಸ್ಪಷ್ಟನೆ ನೀಡಿದ್ದಾರೆ. ಗದಗ ಜಿಲ್ಲೆಯಲ್ಲೂ ನಿಫಾ ವೈರಸ್ ಭಯ ಕಾಡತೊಡಗಿದ್ದು, ಜಿಲ್ಲೆಯ ಜನರಲ್ಲಿ ಮತ್ತಷ್ಟು ಆತಂಕವನ್ನು ಮೂಡಿಸಿದೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕಾಂಗ್ರೆಸ್ ಪಕ್ಷದ ಪತನಕ್ಕೆ ಇದು ಮೊದಲ ಮೆಟ್ಟಿಲು: ಶ್ರೀರಾಮುಲು

ಬೆಂಗಳೂರು: ನಿನ್ನೆ ನಡೆದ ಪ್ರಮಾಣ ವಚನ ಸಮಾರಂಭದಲ್ಲಿ ತೃತಿಯ ರಂಗದವರು ಭಾಗಿಯಾಗಿದ್ದರು. ಕಾಂಗ್ರೆಸ್ ಪಕ್ಷದ ...

news

ಎಸ್‌ಸಿಒ ಸಭೆಯಲ್ಲಿ ಮಹತ್ತರವಾದ ಹೇಳಿಕೆ ನೀಡಿದ ಪಾಕಿಸ್ಥಾನ

ಪಾಕಿಸ್ತಾನ : ಪಾಕಿಸ್ತಾನದಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆ (ಎಸ್‌ಸಿಒ) ಸಭೆಯಲ್ಲಿ, ಪಾಕಿಸ್ಥಾನವು ...

news

ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರಿಗೆ ಟ್ವೀಟರ್ ಮೂಲಕ ಅಭಿನಂದನೆ ಸಲ್ಲಿಸಿದ ನಟ ಕಮಲ್ ಹಾಸನ್

ಬೆಂಗಳೂರು : ಬುಧವಾರ ಜೆಡಿಎಸ್ ಹಾಗು ಕಾಂಗ್ರೆಸ್ ಮೈತ್ರಿ ಸರ್ಕಾರದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ...

news

ಕೊಟ್ಟ ಸಾಲಮನ್ನಾ ಮಾತು ಉಳಿಸಿಕೊಳ್ಳಲಿ. ಇಲ್ಲದಿದ್ದರೆ ಕುರ್ಚಿಯಿಂದ ಕೆಳಗಿಳಿಯಲಿ – ಸಿಎಂ ಹೆಚ್.ಡಿ.ಕುಮಾರಸ್ವಾಮಿಗೆ ಶ್ರೀರಾಮುಲು ಸವಾಲು

ಬಳ್ಳಾರಿ : ಕಾಂಗ್ರೆಸ್, ಜೆಡಿಎಸ್ ಪ್ರಣಾಳಿಕೆ ಏನೇ ಇರಲಿ, ಕೊಟ್ಟ ಸಾಲಮನ್ನಾ ಮಾತು ಉಳಿಸಿಕೊಳ್ಳಲಿ. ...

Widgets Magazine