ಗೀತಾ ವಿಷ್ಣು ತಮಿಳುನಾಡಿಗೆ ಎಸ್ಕೇಪ್..!

ಬೆಂಗಳೂರು, ಸೋಮವಾರ, 2 ಅಕ್ಟೋಬರ್ 2017 (13:47 IST)

ಸೆ.29ರಂದು ಸೌತ್ ಎಂಡ್ ಸರ್ಕಲ್`ನಲ್ಲಿ ನಡೆದಿದ್ದ ಻ಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ಆದಿಕೇಶವುಲು ಮೊಮ್ಮಗ ಗೀತಾ ವಿಷ್ಣು ಬಂಧನಕ್ಕೆ ಬಲೆ ಬೀಸಿರುವುದಾಗಿ ಡಿಸಿಪಿ ಶರಣಪ್ಪ ಮಾಧ್ಯಮಗಳಿಗೆ ತಿಳಿಸಿದ್ದಾರೆ.


ಸೆ.29ರಂದು ಘಟನೆ ಬಳಿಕ ಮಲ್ಯ ಆಸ್ಪತ್ರೆಗೆ ದಾಖಲಾಗಿದ್ದ ಗೀತಾ ವಿಷ್ಣು ಅಲ್ಲಿಂದಲೇ ಎಸ್ಕೇಪ್ ಆಗಿದ್ದ. ಬಳಿಕ ಸ್ನೇಹಿತ ವಿನಯ್ ಜೊತೆ ವೋಲ್ವೋ ಕಾರಿನಲ್ಲಿ  ಶಾಂತಿನಿಕೇತನ ಅಪಾರ್ಟ್`ಮೆಂಟ್`ಗೆ ತೆರಳಿದ್ದಾನೆ. ಅಲ್ಲಿಂದ ಮೂವರೂ ಹೈದ್ರಾಬಾದ್`ಗೆ ತೆರಳಿದ್ದಾರೆ. ಗೀತಾ ವಿಷ್ಣು ಹೈದ್ರಾಬಾದ್`ನ ಸಂಬಂಧಿಕರ ಮನೆಗೆ ತೆರಳಿರುವ ಮಾಹಿತಿ ಆಧರಿಸಿ ಪೊಲೀಸರ ತಂಡ ಸಹ ಹೈದ್ರಾಬಾದ್`ಗೆ ತೆರಳಿದೆ. ಆದರೆ, ಪೊಲೀಸರು ಬರುತ್ತಿರುವ ಮಾಹಿತಿ ಅರಿತ ಗೀತಾ ವಿಷ್ಣು ಅಲ್ಲಿಂದಲೂ ಕಾಲ್ಕಿತ್ತಿದ್ದು, ತಮಿಳುನಾಡಿನ ಮತ್ತೊಬ್ಬ ಸಂಬಂಧಿಕರ ಮನೆಗೆ ದೌಡಾಯಿಸಿದ್ದಾನೆ ಎಂದು ಡಿಸಿಪಿ ತಿಳಿಸಿದ್ದಾರೆ.

ಇತ್ತ, ಬೆಂಗಳೂರಿನಲ್ಲಿ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಪೊಲಿಸರು ಅಪಘಾತಕ್ಕೂ ಮುನ್ನ ಪಾರ್ಟಿ ಮಾಡಿದ್ದ ಎಲ್ಲರಿಗೂ ನೋಟಿಸ್ ನೀಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಪ್ರಣವ್ ದೇವರಾಜ್, ಶಶಾಂಕ್ ವಿಚಾರಣೆಗೆ ಹಾಜರಾಗಿದ್ದಾರೆ.
 
 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 
 ಇದರಲ್ಲಿ ಇನ್ನಷ್ಟು ಓದಿ :  
ಗೀತಾ ವಿಷ್ಣು ಪೊಲೀಸ್ ಗಾಂಜಾ ಅಪಘಾತ Police Ganja Hyderabadh Geetha Vishnu

ಸುದ್ದಿಗಳು

news

ಖ್ಯಾತ ಪತ್ರಕರ್ತೆ ಗೌರಿ ಲಂಕೇಶ್ ಹಂತಕರ ಪತ್ತೆ: ರಾಮಲಿಂಗಾರೆಡ್ಡಿ

ಚಿಕ್ಕಬಳ್ಳಾಪುರ: ಖ್ಯಾತ ಪತ್ರಕರ್ತೆ, ವಿಚಾರವಾದಿ ಗೌರಿ ಲಂಕೇಶ್ ಹಂತಕರ ಪತ್ತೆಯಾಗಿದೆ ಎಂದು ಗೃಹ ಸಚಿವ ...

news

ಬಿಜೆಪಿಯಿಂದ ದೇಶದ ಆರ್ಥಿಕತೆ ಸರ್ವನಾಶ: ಜಿ.ಪರಮೇಶ್ವರ್

ಬೆಂಗಳೂರು: ಕೇಂದ್ರದಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರಕಾರ ಅಡಳಿತಕ್ಕೆ ಬಂದ ನಂತರ ದೇಶದ ಆರ್ಥಿಕತೆ ...

news

ಅಮೆರಿಕದಲ್ಲಿ ಮತ್ತೆ ಅಟ್ಟಹಾಸ ಮೆರೆದ ಉಗ್ರರು

ಲಾಸ್‌ವೇಗಾಸ್: ಅಮೆರಿಕದಲ್ಲಿ ಉಗ್ರರು ಮತ್ತೆ ಅಟ್ಟಹಾಸ ಮೆರೆದಿದ್ದಾರೆ. ಲಾಸ್‌ವೇಗಾಸ್‌ನ ಬೇ ರಿಸಾರ್ಟ್ ...

news

ಗಾಂಧೀಜಿ ದೃಷ್ಟಿಕೋನದಿಂದ ದೇಶ ದೂರ: ಸತ್ಯಾಗ್ರಹದ ಬೆದರಿಕೆ ಹಾಕಿದ ಹಜಾರೆ

ನವದೆಹಲಿ: ಗಾಂಧೀಜಿಯ ದೃಷ್ಟಿಕೋನದಿಂದ ದೇಶವು ದೂರ ಹೋಗುತ್ತಿದೆ. ಗಾಂಧಿಯವರ ತತ್ವ, ಸಿದ್ದಾಂತಗಳಿಗೆ ಸರಕಾರ ...

Widgets Magazine