ಸಚಿವ ಜಾರ್ಜ್‌ಗೆ ತನಿಖೆಗೆ ಮುನ್ನವೇ ಕ್ಲೀನ್ ಚಿಟ್: ಕುಮಾರಸ್ವಾಮಿ ಕಿಡಿ

ಬೆಂಗಳೂರು, ಬುಧವಾರ, 15 ನವೆಂಬರ್ 2017 (13:25 IST)

ಡಿವೈಎಸ್‌ಪಿ ಎಂ.ಕೆ.ಗಣಪತಿ ಪ್ರಕರಣದಲ್ಲಿ ನಗರಾಭಿವೃದ್ಧಿ ಖಾತೆ ಸಚಿವ ಕೆ.ಜೆ.ಜಾರ್ಜ್ ಅವರಿಗೆ ಅವಸರದಲ್ಲಿ ಕ್ಲೀನ್ ಚಿಟ್ ನೀಡಲಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ಸರಕಾರದ ಒತ್ತಡದಿಂದಾಗಿ ಸಿಐಡಿ ಅಧಿಕಾರಿಗಳು ಸಚಿವ ಜಾರ್ಜ್‌ಗೆ ಕ್ಲೀನ್ ಚಿಟ್ ನೀಡಿದ್ದಾರೆ ಎನ್ನುವುದು ತನಿಖೆಯಲ್ಲಿ ಬಹಿರಂಗವಾಗಿದೆ. ಗಣಪತಿ ಆತ್ಮಹತ್ಯೆ ಮಾಡಿಕೊಂಡ ಕೋಣೆಯನ್ನು ಸಿಬಿಐ ಅಧಿಕಾರಿಗಳು ತನಿಖೆ ನಡೆಸಿದಾಗ ಬುಲೆಟ್ ಪತ್ತೆಯಾಗಿರುವುದು ಕಂಡುಬಂದಿದೆ ಎಂದರು.
 
ಹಿಂದೆ ಸಿಐಡಿ ಅಧಿಕಾರಿಗಳು ಯಾವ ರೀತಿ ಕೋಣೆಯನ್ನು ಮಹಜರು ಮಾಡಿದ್ದರು ಎನ್ನುವುದಕ್ಕೆ ಸಿಬಿಐ ತನಿಖೆಯಲ್ಲಿ ಸಿಕ್ಕ ಬುಲೆಟ್ ಸಾಕ್ಷಿಯಾಗಿದೆ. ಎಂತಹ ಅವಸರದಲ್ಲಿ ತನಿಖೆ ಮಾಡಿದ್ದರು ಎನ್ನುವುದು ಸಾಬೀತಾಗುತ್ತದೆ ಎಂದರು.
 
ಸರಕಾರ ಪ್ರಕರಣದಲ್ಲಿರುವ ಆರೋಪಿಗಳ ಸಾಕ್ಷ್ಯಗಳನ್ನು ಮುಚ್ಚಿಹಾಕಲು ಸಿಐಡಿ ಅಧಿಕಾರಿಗಳನ್ನು ಬಳಸಿಕೊಂಡಿತೆ ಎನ್ನುವ ಅನುಮಾನ ಎಲ್ಲರಲ್ಲಿ ಕಾಡುತ್ತಿದೆ. ಸರಕಾರಕ್ಕೆ ಇದರಿಂದ ನಾಚಿಕೆಯಾಗಬೇಕು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

17 ವರ್ಷದ ಯುವತಿಯ ಮೇಲೆ 10 ದಿನ ನಿರಂತರ ಗ್ಯಾಂಗ್‌ರೇಪ್

ಬೆಂಗಳೂರು: ಪ್ರತಿಷ್ಠಿತ ಖಾಸಗಿ ಕಾಲೇಜಿನಲ್ಲಿ ಓದುತ್ತಿರುವ 17 ವರ್ಷದ ವಿದ್ಯಾರ್ಥಿನಿಯನ್ನು ಅಪಹರಿಸಿದ ...

news

ಬಿಜೆಪಿಯವರಿಗೆ ಬೇರೆ ವಿಚಾರವಿಲ್ಲ, ಅದಕ್ಕೇ ಜಾರ್ಜ್ ವಿಷಯ ಕೆದಕುತ್ತಿದ್ದಾರೆ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಬೆಳಗಾವಿಯಲ್ಲಿ ನಡೆಯುತ್ತಿರುವ ವಿಶೇಷ ಅಧಿವೇಶನದಲ್ಲಿ ಪ್ರತಿಭಟನೆ ನಡೆಸುತ್ತಿರುವ ಬಿಜೆಪಿಗೆ ...

news

ಬಿಜೆಪಿಯವರ ಪ್ರತಿಭಟನೆಗೆಲ್ಲಾ ತಲೆಕೆಡಿಸಿಕೊಳ್ಳಬೇಡಿ: ಕೆಜೆ ಜಾರ್ಜ್ ಗೆ ಪರಮೇಶ್ವರ್ ಅಭಯ

ಬೆಂಗಳೂರು: ಡಿವೈಎಸ್ ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಿಬಿಐ ಎಫ್ ಐಆರ್ ದಾಖಲಿಸಿದ ಹಿನ್ನಲೆಯಲ್ಲಿ ...

news

ಪ್ರಧಾನಿ ಮೋದಿಯನ್ನು ತುಘಲಕ್ ಎಂದ ಬಿಜೆಪಿ ಹಿರಿಯ ನಾಯಕ

ನವದೆಹಲಿ: ಪ್ರಧಾನಿ ಮೋದಿ ಆಡಳಿತ ವೈಖರಿ, ನೋಟು ನಿಷೇಧ ನಿರ್ಧಾರವನ್ನು ಹಿರಿಯ ಬಿಜೆಪಿ ನಾಯಕ, ಮಾಜಿ ವಿತ್ತ ...

Widgets Magazine
Widgets Magazine