ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಹೆಣ್ಣು ಶಿಶು ಅಪಹರಣ

ಕೋಲಾರ, ಬುಧವಾರ, 11 ಜುಲೈ 2018 (17:47 IST)

 
ಕೋಲಾರದ ಸರ್ಕಾರಿ ಆಸ್ಪತ್ರೆಯಲ್ಲಿ ನವಜಾತ ಶಿಶು ಅಪಹರಣವಾಗಿದೆ. ಹೆಣ್ಣು ಕೂಸು ಅಪಹರಣಕ್ಕೆ ಆಸ್ಪತ್ರೆ ಸಿಬಂದಿ ಬೇಜವಾಬ್ದಾರಿಯುತ ಕಾರಣ ಅಂತ ಪೋಷಕರು ದೂರಿದ್ದಾರೆ. ಕೋಲಾರ ನಗರದ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಹೆಣ್ಣು ಶಿಶುವಿನ ಅಪಹರಣವಾಗಿದೆ.

ಬುಧವಾರ ಬೆಳಗಿನ ಜಾವ ಈ ಘಟನೆ ನಡೆದಿದೆ. ಮುಳಬಾಗಲು ತಾಲೂಕಿನ ವಮ್ಮಸಂದ್ರ ಗ್ರಾಮದ ನಾರಾಯಣಸ್ವಾಮಿ ಮತ್ತು ವೇಣುಕುಮಾರಿ ದಂಪತಿಯ ಮಗು ಅಪಹರಣಕ್ಕೆ ಒಳಗಾಗಿದೆ. ಜನಿಸಿದ 24 ಗಂಟೆಯ ಒಳಗೆ ಅಪರಿಚಿತರಿಂದ ಈ ಕೃತ್ಯ ಜರುಗಿದೆ.  ಕೋಲಾರದ ಈ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ ವೇಣುಕುಮಾರಿ ಅವರಿಗೆ ಸೋಮವಾರ ಹೆಣ್ಣುಶಿಶು ಜನಿಸಿದೆ.

ಬುಧವಾರ ಬೆಳಗಿನ ಜಾವ 2 ಗಂಟೆವರೆಗೂ ಮಗುವಿನ ಆರೈಕೆಯಲ್ಲಿದ್ದ ಪೋಷಕರು ನಿದ್ರೆಗೆ ಜಾರಿದಾಗ ಅಪರಿಚಿತರು ಮಗುವನ್ನು ಹೊತ್ತೊಯ್ದಿದ್ದಾರೆ. ಮಗುವಿನ ನಾಪತ್ತೆಗೆ ಆಸ್ಪತ್ರೆಯ ಭದ್ರತಾ ವೈಫಲ್ಯ ಕಾರಣ ಅಂತ ಕಂದನನ್ನು ಕಳೆದೊಕೊಂಡವರು ದೂರಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  
ಹೆಣ್ಣು ಶಿಶು ಅಪಹರಣ ಗರ್ಭಿಣಿ ಆತಂಕ ಕಳ್ಳತನ ಜಿಲ್ಲಾಸ್ಪತ್ರೆ Abduction Government Girl Child District Hospital

ಸುದ್ದಿಗಳು

news

ಸಮುದಾಯ ಭವನ ಅಕ್ರಮ ನಿರ್ಮಾಣ: ಹೋರಾಟ

ಗ್ರಾಮಪಂಚಾಯಿತಿ ಮತ್ತು ಜನ ಪ್ರತಿನಿಧಿಗಳಿಂದ ಮಹಾ ಮೋಸವಾಗಿದೆಂದು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಮೋಸ ಹೋದ ಚಿನ್ನದ ವ್ಯಾಪಾರಿ: ಸೆಲ್ಫಿ ವಿಡಿಯೋ ಸಾವಿನ ಸುಳಿವು ನೀಡಿ ಕಾಣೆ

ತನ್ನ ಆಸ್ತಿಯನ್ನ ಅಡವಿಟ್ಟು ಹಣ ಪಡೆಯದೆ ಮೋಸ ಹೋದ ಚಿನ್ನದ ವ್ಯಾಪಾರಿಯೊಬ್ಬ ಮನನೊಂದು ವಾಟ್ಸ್ ಆಪ್ ನಲ್ಲಿ ...

news

ಉಚಿತ ಬಸ್‍ಗಾಗಿ ಪ್ರತಿಭಟನೆ; ಲಾಠಿ ಏಟಿಗೆ ಬೆದರಿದ್ದ ವಿದ್ಯಾರ್ಥಿಗಳು ಹಾಜರ್

ಉಚಿತ ಬಸ್ ಪಾಸ್ ಗಾಗಿ ಪೊಲೀಸರ ಲಾಠಿ ಏಟಿಗೆ ಬೆದರಿದ್ದ ವಿದ್ಯಾರ್ಥಿ ಮುಖಂಡರು ಮಾಧ್ಯಮಗಳ ಮುಂದೆ ...

news

ಶಾಲಾ ಮಕ್ಕಳಿಂದ ಶೌಚಾಲಯ ಕ್ಲಿನಿಂಗ್

ಸರ್ಕಾರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ದಿನದಿಂದ ದಿನಕ್ಕೆ ಕುಸಿಯುತ್ತಿರುವುದು ಒಂದು ಕಡೆ ಆದರೆ ಇನ್ನೊಂದು ...

Widgets Magazine