ಪ್ರಿಯಕರ ಮಾತನಾಡಿಸಲಿಲ್ಲವೆಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯತಮೆ

ತುಮಕೂರು, ಭಾನುವಾರ, 19 ನವೆಂಬರ್ 2017 (13:08 IST)

ಜೀವಕ್ಕಿಂತ ಹೆಚ್ಚಿಗೆ ಪ್ರೀತಿಸುವ ಪ್ರಿಯತಮ ತನ್ನನ್ನು ನಿರ್ಲಕ್ಷಿಸುತ್ತಿದ್ದಾನೆ ಎಂದು ಬೇಸರಗೊಂಡ ಯುವತಿಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿದ ಘಟನೆ ವರದಿಯಾಗಿದೆ. 
 
ನಗರದ ಎಸ್‌.ಎಸ್.ಪುರಂ ಬಡಾವಣೆಯ ನಿವಾಸಿಯಾದ ಯುವತಿ, ನಿದ್ರೆ ಮಾತ್ರೆಗಳನ್ನು ನುಂಗುತ್ತಿರುವ ಸೆಲ್ಫಿ ವಿಡಿಯೋ ತೆಗೆದು ಆತ್ಮಹತ್ಯೆಗೆ ಯತ್ನಿಸಿ ತನ್ನ ಪ್ರಿಯಕರಿಗೆ ವಿಡಿಯೋ ಕಳಹಿಸಿಕೊಟ್ಟಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 
 
ಯುವತಿ ಸುಮಾರು 70 ನಿದ್ರಾ ಮಾತ್ರೆಗಳನ್ನು ಸೇವಿಸಿದ್ದಾಳೆ ಎಂದು ಆಕೆಗೆ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಯ ಮೂಲಗಳು ತಿಳಿಸಿವೆ.
 
ಸೆಲ್ಫಿ ವಿಡಿಯೋದಲ್ಲಿ, ನಾನು ನಿನಗೆ ಇನ್ನೊಮ್ಮೆ ತೊಂದರೆ ಕೊಡಲ್ಲ ದಯವಿಟ್ಟು ಕ್ಷಮಿಸು. ನನ್ನಿಂದ ಯಾರಿಗೂ ನೋವಾಗುವುದನ್ನು ನೋಡಲು ನನಗಿಷ್ಟವಾಗುವುದಿಲ್ಲ ಎಂದು ತಿಳಿಸಿದ್ದಾಳೆ
 
ಪ್ರಿಯತಮೆಯ ವಿಡಿಯೋ ನೋಡಿ ಕಂಗಾಲಾದ ಪ್ರಿಯಕರ ಕೂಡಲೇ ಯುವತಿ ವಾಸಿಸುತ್ತಿದ್ದ ಹಾಸ್ಟೆಲ್‌ಗೆ ಧಾವಿಸಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಜೀವ ಉಳಿಸಿದ್ದಾನೆ. ಕುರಿತಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮೋದಿ ಸರ್ಕಾರದಿಂದ ರೈತರ ಸಾಲ ಮನ್ನಾ ಸಾಧ್ಯವಿಲ್ಲ: ಸಚಿವ ಡಿ.ವಿ. ಸದಾನಂದ ಗೌಡ

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವಗ ಸರಕಾರದಿಂದ ರಾಜ್ಯದ ರೈತರ ಸಾಲ ಮನ್ನಾ ಮಾಡಲು ...

news

ಬಿಜೆಪಿ ನಾಯಕರ ಸಿಡಿಗಳನ್ನು ಬಿಡುಗಡೆ ಮಾಡ್ತೇನೆ: ಹಾರ್ದಿಕ್ ಪಟೇಲ್

ಗಾಂಧಿನಗರ: ಬಿಜೆಪಿ ನಾಯಕರು ನನ್ನ ಗೌರವಕ್ಕೆ ಧಕ್ಕೆ ತರಲು ಸೆಕ್ಸ್ ಸಿಡಿ ಬಿಡುಗಡೆ ಮಾಡುತ್ತಿದ್ದಾರೆ. ನಾನು ...

news

ರೈಲಿನಲ್ಲಿ ಸ್ನೇಹ, ಲಾಡ್ಜ್‌ನಲ್ಲಿ ರೇಪ್ ಎಸಗಿ ಕೈಕೊಟ್ಟ ಭೂಪ

ಬೆಂಗಳೂರು: ರೈಲಿನಲ್ಲಿ ಪರಿಚಯವಾದ ವ್ಯಕ್ತಿಯೊಬ್ಬ ಲಾಡ್ಜ್‌ಗೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾನೆ ...

news

ಕೃಷ್ಣ ಮಠಕ್ಕೆ ಭೇಟಿ ನೀಡಲು ಇಂದಾದರೂ ಮನಸ್ಸು ಮಾಡುತ್ತಾರಾ ಸಿಎಂ?

ಮಂಗಳೂರು: ಬಿ.ಆರ್. ಶೆಟ್ಟಿ ಮಾಲಿಕತ್ವದ ಆಸ್ಪತ್ರೆ ಉದ್ಘಾಟನೆಗೆ ಉಡುಪಿಗೆ ಇಂದು ಆಗಮಿಸಲಿರುವ ಸಿಎಂ ...

Widgets Magazine
Widgets Magazine