ಯಡಿಯೂರಪ್ಪ ವಿರುದ್ಧ ಸುಳ್ಳು ಹೇಳಲು ಒತ್ತಡ: ಗವರ್ನರ್`ಗೆ ಅಧಿಕಾರಿ ಬಸವ ರಾಜೇಂದ್ರ ಪತ್ರ

ಬೆಂಗಳೂರು, ಶನಿವಾರ, 19 ಆಗಸ್ಟ್ 2017 (15:26 IST)

Widgets Magazine

ಎಸಿಬಿಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ವಿರುದ್ಧ ದಾಖಲಾಗಿರುವ ಡಿನೋಟಿಫಿಕೇಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿರುದ್ಧ ಹೇಳಿಕೆ ನೀಡುವಂತೆ ಭೂಸ್ವಾಧೀನಾಧಿಕಾರಿಯಾಗಿದ್ದ ಬಸವರಾಜೇಂದ್ರ ಅವರಿಗೆ ಎಸಿಬಿ ಅಧಿಕಾರಿಗಳೇ ಒತ್ತಡ ಹೇರಿರುವ ಆರೋಪ ಕೇಳಿಬಂದಿದೆ.


ಎಸಿಬಿ ಡಿವೈಎಸ್ಪಿಗಳೇ ನನಗೆ ಫೋನ್ ಕರೆ ಮಾಡಿ ಕರೆಸಿಕೊಂಡು ಎಸಿಬಿ ಕಚೇರಿಯಲ್ಲಿ ಯಡಿಯೂರಪ್ಪ ವಿರುದ್ಧ ಹೇಳಿಕೆ ನೀಡಿ, ಇಲ್ಲವಾದರೆ ನಿಮ್ಮನ್ನ ಆರೋಪಿಯನ್ನಾಗಿಸುವುದಾಗಿ ಬೆದರಿಕೆ ಹಾಕಿದ್ದಾರೆಂದು 2010-11ರಲ್ಲಿ ಭೂಸ್ವಾಧೀನಾಧಿಕಾರಿಯಾಗಿದ್ದ ಕೆಎಎಸ್ ಅಧಿಕಾರಿ ಬಸವ ರಾಜೇಂದ್ರ ಗವರ್ನರ್`ಗೆ ಪತ್ರ ಬರೆದು ತಿಳಿಸಿದ್ದಾರೆಂದು ಮಾಧ್ಯಮಗಳು ವರದಿ ಮಾಡಿವೆ.

ಶಿವರಾಮ ಕಾರಂತ ಬಡಾವಣೆ ಡಿನೋಟಿಫಿಕೆಶನ್ ಪ್ರಕರಣ ಸಂಬಂಧ ಆಗಸ್ಟ್ 10ರಂದು ಕರೆ ಮಾಡಿ ಕರೆಸಿಕೊಂಡಿದ್ದ ಎಸಿಬಿಯ ಬಾಲರಾಜ್ ಮತ್ತು ಆಂಥೋನಿ ವಿಚಾರಣೆ ನಡೆಸಿದ್ದರು. ಈ ಸಂದರ್ಭ ನನ್ನ ಮೇಲೆ ಒತ್ತಡ ಹೇರಿದ್ದಾರೆ ಎಂದು ರಾಜ್ಯಪಾಲರಿಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಗಣಿ ಇಲಾಖೆಯ ಉಪ ಕಾರ್ಯದರ್ಶಿಯಾಗಿ ಬಸವ ರಾಜೇಂದ್ರ ಕಾರ್ಯನಿರ್ವಹಿಸುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಸಿಎಂಗೆ ಮಾನ ಮರ್ಯಾದೆ ಇದ್ರೆ ರಾಜೀನಾಮೆ ಕೊಡಲಿ: ಶೋಭಾ ಕರಂದ್ಲಾಜೆ

ಬೆಂಗಳೂರು: ಭೂಸ್ವಾಧೀನಾಧಿಕಾರಿ ಬಸವರಾಜೇಂದ್ರ ಮೇಲೆ ಎಸಿಬಿ ಅಧಿಕಾರಿಗಳು ಒತ್ತಡ ಹೇರಿರುವ ವಿಷಯಕ್ಕೆ ...

news

ಕೇಜ್ರಿವಾಲ್ ಕೈಗೊಂಡ ಈ ನಿರ್ಧಾರ ಇಡೀ ದೇಶಕ್ಕೆ ಮಾದರಿ

ವಿದ್ಯಾರ್ಥಿಗಳಿಂದ ವಸೂಲಿ ಮಾಡಿರುವ ಹೆಚ್ಚುವರಿ ಶುಲ್ಕ ವಾಪಸ್ ನೀಡದಿದ್ದರೆ ಶಾಲೆಗಳನ್ನ ಸರ್ಕಾರ ವಶಕ್ಕೆ ...

news

ಬಿಎಸ್‌ವೈ ಅಕ್ರಮ ಡಿನೋಟಿಫಿಕೇಶನ್ ಮಾಡಿಲ್ಲ: ಬಿಜೆಪಿ

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಯಾವುದೇ ಅಕ್ರಮ ಡಿನೋಟಿಫಿಕೇಶನ್ ಮಾಡಿಲ್ಲ ಎಂದು ...

news

ಹೋಟೆಲ್`ನಲ್ಲಿ ಮಹಿಳಾ ಉದ್ಯೋಗಿಯ ಸೀರೆ ಎಳೆಯಲು ಯತ್ನ..!

ಫೈವ್ ಸ್ಟಾರ್ ಹೋಟೆಲ್ ಸೆಕ್ಯೂರಿಟಿ ಮ್ಯಾನೇಜರ್ ಒಬ್ಬ ಕೆಳಹಂತದ ಮಹಿಳಾ ಉದ್ಯೋಗಿಯ ಸೀರೆ ಎಳೆದು ಅಪಮಾನ ...

Widgets Magazine