Widgets Magazine
Widgets Magazine

ಫೋನ್ ಟ್ಯಾಪಿಂಗ್ ಬಗ್ಗೆ ತನಿಖೆಯಾಗಲಿ: ಸರ್ಕಾರಕ್ಕೆ ಅಶೋಕ್ ಸವಾಲ್

ಬೆಂಗಳೂರು, ಶುಕ್ರವಾರ, 22 ಸೆಪ್ಟಂಬರ್ 2017 (14:44 IST)

Widgets Magazine

ಬೆಂಗಳೂರು: ರಾಜ್ಯ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಆದರೆ ಇಂದು ಸತ್ಯಕ್ಕೆ ಜಯ ಸಿಕ್ಕಿದೆ ಎಂದು ಮಾಜಿ ಸಿಎಂ ಆರ್.ಅಶೋಕ್ ಹೇಳಿದ್ದಾರೆ.


ಬೆಂಗಳೂರಿನಲ್ಲಿ ಮಾತನಾಡಿದ ಅವರು, ಎಲ್ಲಾ ಮುಖ್ಯಮಂತ್ರಿಗಳು ಡಿನೋಟಿಫಿಕೇಷನ್ ಮಾಡಿದ್ದಾರೆ. ಆದರೆ ಮಾಜಿ ಸಿಎಂ ಅವರ ವಿರುದ್ಧ ರಾಜ್ಯ ಸರ್ಕಾರ ದ್ವೇಷದ ರಾಜಕೀಯ ಮಾಡ್ತಿದೆ. ಬಿಎಸ್ ವೈ ಅವರನ್ನು ಎಲ್ಲೂ ಓಡಾಡದಂತೆ ಮಾಡಲು ಹುನ್ನಾರ ಮಾಡ್ತಿದ್ದಾರೆ. ಬಿಎಸ್ ವೈಗೆ ಕಿರುಕುಳ ನೀಡಲು ವಿನಾಕಾರಣ ಸುಳ್ಳು ದೂರು ದಾಖಲಿಸಿದ್ದಾರೆ. ಈಗ ಹೈಕೋರ್ಟ್ ಪ್ರಕರಣದಲ್ಲಿ ಮಧ್ಯಂತರ ತಡೆ ನೀಡಿದ್ದು, ಸತ್ಯಕ್ಕೆ ಜಯ ಸಿಕ್ಕಿದೆ ಎಂದು ಹೇಳಿದರು.

ರಾಜ್ಯ ಸರ್ಕಾರ ವಿರುದ್ಧ ತಾವು ಮಾಡಿರುವ ಫೋನ್ ಟ್ಯಾಪಿಂಗ್ ಆರೋಪವನ್ನು ಮಾಜಿ ಡಿಸಿಎಂ ಆರ್.ಅಶೋಕ್ ಸಮರ್ಥಿಸಿಕೊಂಡಿದ್ದಾರೆ. ರಾಜ್ಯ ಸರ್ಕಾರ ಫೋನ್ ಟ್ಯಾಪಿಂಗ್ ಮಾಡ್ತಿದೆ. ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಫೋನ್ ಕೂಡಾ ಟ್ಯಾಪ್ ಆಗಿತ್ತು. ಇದನ್ನ ಅವರೇ ಹೇಳಿದ್ದಾರೆ. ಮಾಜಿ‌ ಸಿಎಂ ಕುಮಾರಸ್ವಾಮಿ‌ ಕೂಡಾ ಫೋನ್ ಟ್ಯಾಪಿಂಗ್ ಬಗ್ಗೆ ಹೇಳಿದ್ರು. ರಾಜ್ಯ ಸರ್ಕಾರಕ್ಕೆ ಚಾಲೆಂಜ್ ಮಾಡ್ತೀನಿ. ಫೋನ್ ಟ್ಯಾಪಿಂಗ್ ಕುರಿತು ಒಂದು ತನಿಖೆ ನಡೆಸಿ‌ ಆಗ ಸತ್ಯಾಸತ್ಯತೆ ಹೊರಬರುತ್ತೆ. ನನಗೆ ಫೋನ್ ಟ್ಯಾಪಿಂಗ್ ಆಗೋದು ‌ಹೇಗೆ ಅಂತ ಗೊತ್ತು. ನಿಖರವಾಗಿ ಅಂಕಿ ಅಂಶದ ಸಮೇತ ಹೇಳ್ತಿದ್ದೇನೆ. ಸಿಎಂ‌ ಈ ಬಗ್ಗೆ ಸಿಬಿಐ ಅಥವಾ ನ್ಯಾಯಾಧೀಶರಿಂದ ತನಿಖೆ ನಡೆಸಲಿ. ಆಗ ಎಲ್ಲಾ ಸತ್ಯ ಹೊರಬರುತ್ತೆ. ತನಿಖೆಗೆ ಆದೇಶ ನೀಡಿದ್ರೆ ದಾಖಲೆ ನೀಡಲು ನಾನು ಸಿದ್ಧ. ತನಿಖೆಯಲ್ಲಿ ಟ್ಯಾಪಿಂಗ್ ಆಗ್ತಿಲ್ಲ ಅಂತ ಬಂದ್ರೆ ಯಾವುದೇ ಕ್ರಮಕ್ಕೂ ನಾನು ರೆಡಿ ಎಂದು ರಾಜ್ಯ ಸರ್ಕಾರಕ್ಕೆ ಅಶೋಕ್ ಬಹಿರಂಗ ಸವಾಲು ಹಾಕಿದ್ದಾರೆ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಕಾಂಗ್ರೆಸ್ ಕಳ್ಳರ ಪಕ್ಷ ಶಾಸಕ ರಾಜಣ್ಣ ಹೇಳಿಕೆಗೆ ಆರೋಗ್ಯ ಸಚಿವರ ಸಮರ್ಥನೆ

ಬೆಂಗಳೂರು: ಕಾಂಗ್ರೆಸ್ ಕಳ್ಳರ ಪಕ್ಷ ಎನ್ವುವ ಶಾಸಕ ಕೆ.ಎನ್.ರಾಜಣ್ಣ ಹೇಳಿಕೆಯನ್ನು ಆರೋಗ್ಯ ಸಚಿವ ರಮೇಶ್ ...

news

ಸೆಕ್ಸ್ ಮಾಡು ಎಂದು ಪೀಡಿಸುತ್ತಿಗೆ ಆಂಟಿಯನ್ನ ಬರ್ಬರವಾಗಿ ಕೊಂದ ಯುವಕ

ಸೆಕ್ಸ್ ಮಾಡು ಎಂದು ಒತ್ತಾಯಿಸುತ್ತಿದ್ದ ಮಾಲಕಿಯನ್ನ ಮನೆಗೆಲಸದ ಯುವಕ ಕೊಂದಿರುವ ಘಟನೆ ನವದೆಹಲಿಯ ಲಜಪತ್ ...

news

ಬಳ್ಳಾರಿಗೆ ಭೇಟಿ ನೀಡಲು ಜನಾರ್ದನ ರೆಡ್ಡಿಗೆ ಸುಪ್ರೀಂಕೋರ್ಟ್ ಅನುಮತಿ

ಬೆಂಗಳೂರು: ಗಣಿನಾಡು ಬಳ್ಳಾರಿಗೆ ಭೇಟಿ ನೀಡಲು ಅಕ್ರಮ ಗಣಿಗಾರಿಕೆ ಹಗರಣದಲ್ಲಿದ್ದ ಮಾಜಿ ಸಚಿವ ಜನಾರ್ದನ ...

news

ಪ್ರಧಾನಿ ಮೋದಿ ಬಾಂಬೆಮಿಠಾಯಿ ಕಥೆ ಹೇಳ್ತಾರೆ: ಸಿಎಂ ಸಿದ್ದರಾಮಯ್ಯ

ಬಳ್ಳಾರಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಬಾಂಬೆ ಮಿಠಾಯಿ ಕಥೆ ಹೇಳ್ತಾರೆ. ಅವರದು ಕೇವಲ ಬೂಟಾಟಿಕೆ ಅದರ ...

Widgets Magazine Widgets Magazine Widgets Magazine