Widgets Magazine
Widgets Magazine

PRESS=ಒತ್ತಿ…? ಸರ್ಕಾರದ ಕಾರ್ಯಕ್ರಮದಲ್ಲೇ ತಪ್ಪು ಪದ ಬಳಕೆ

ಬೆಂಗಳೂರು, ಮಂಗಳವಾರ, 26 ಸೆಪ್ಟಂಬರ್ 2017 (00:01 IST)

Widgets Magazine

ಬೆಂಗಳೂರು: ಸರ್ಕಾರಿ ಅಥವಾ ಖಾಸಗಿ ಯಾವುದೇ ಕಾರ್ಯಕ್ರಮ ಆಗಿರಲಿ. ಅಲ್ಲಿ ಮಾಧ್ಯಮದವರಿಗೆ ಪ್ರತ್ಯೇಕ ಆಸನಗಳನ್ನ ಮೀಸಲಿಟ್ಟಿರುತ್ತಾರೆ. ಆದರೆ ಇಂದು ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ಆಯೋಜಕರು ಮಾಡಿದ ಎಡವಟ್ಟಿನಿಂದ ತೀವ್ರ ಮುಜುಗರಕ್ಕೀಡಾಗಿದೆ.


ಇಂದು ಸಂಜೆ ಖಾಸಗಿ ಹೋಟೆಲ್ ವೊಂದರಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಹೀಗಾಗಿ ಮಾಧ್ಯಮದವರನ್ನು ಆಹ್ವಾನಿಸಲಾಗಿತ್ತು. ಇದಕ್ಕೆಂದೇ ಪ್ರತ್ಯೇಕ ಆಸನ ವ್ಯವಸ್ಥೆಯೂ ಇತ್ತು. ಮೀಡಿಯಾ ಗ್ಯಾಲರಿ ಎಂದು ಸೂಚಿಸಲು ನಾಮಫಲಕ ಹಾಕಲಾಗಿತ್ತು. ಈ ನಾಮಫಲಕದಲ್ಲಿ ಇಂಗ್ಲೀಷ್ ನಲ್ಲಿ ಎಂದಿತ್ತು. ಅದನ್ನೇ ಕನ್ನಡಕ್ಕೆ ಅನುವಾದಿಸುವಾಗ ಮಾಧ್ಯಮ ಎಂಬುದರ ಬದಲಾಗಿ `ಒತ್ತಿ’ ಎಂಬ ಪದ ಬಳಸಿದ್ದಾರೆ.

ಇನ್ನು Additional Chief Secretaries ಎಂಬುದರ ಕನ್ನಡ ಅನುವಾದವನ್ನು ಅಪಾರ ಮುಖ್ಯ ಕಾರ್ಯದರ್ಶಿಗಳು ಎಂದು ಮಾಡಲಾಗಿದೆ. ಸದ್ಯ ಈ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದ್ದು, ಕಾರ್ಯಕ್ರಮ ಆಯೋಜಕರ ವಿರುದ್ಧ ಟೀಕೆಗಳು ವ್ಯಕ್ತವಾಗಿತ್ತಿವೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಖಾರವಾಗಿ ಟ್ವೀಟ್ ಮಾಡಿದ್ದಾರೆ. `ಕರ್ನಾಟಕ ಸರ್ಕಾರದ ಕಾರ್ಯಕ್ರಮದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಕೊಟ್ಟ ಒಕ್ಕಣೆ ನೋಡಿ ಕಾಂಗ್ರೆಸ್ ಸರ್ಕಾರದಿಂದ ಕನ್ನಡ ಉಳಿವು ನಿರೀಕ್ಷಿಸಲು ಸಾಧ್ಯವೇ? ಎಂದು ಡಿವಿಎಸ್ ಕಿಡಿಕಾರಿದ್ದಾರೆ.



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಬಾಲಕಿಗೆ ಮದ್ಯ ಕುಡಿಸಿ 2 ವರ್ಷ ಅತ್ಯಾಚಾರಗೈದ ಐವರು ಕಾಮುಕರು

ಚೆರ್ತಾಲಾ(ಕೇರಳ): ಅಪ್ರಾಪ್ತ ಬಾಲಕಿಯೊಬ್ಬಳಿಗೆ ಮದ್ಯ ಕುಡಿಸಿ ಅತ್ಯಾಚಾರವೆಸಗಿದ ಆರೋಪದ ಮೇಲೆ ಇಬ್ಬರು ...

news

ವಿಶ್ವದ ಧಡೂತಿ ಮಹಿಳೆ ಎಮಾನ್ ಅಹಮದ್ ಇನ್ನಿಲ್ಲ

ಅಬುಧಾಬಿ: ವಿಶ್ವದ ಅತಿ ಹೆಚ್ಚು ತೂಕದ ಮಹಿಳೆ ಈಜಿಪ್ಟ್ ನ ಎಮಾನ್ ಅಹಮದ್(37) ಅಬುಧಾಬಿಯ ಬುರ್ಜಿಲ್ ...

news

ಕಮಲದ ಜತೆ ರೂಪದರ್ಶಿ ಫೋಟೊ ತೆಗೆಸಿದ್ದಕ್ಕೆ ಭಾರೀ ದಂಡ.. ಯಾಕೆ ಗೊತ್ತಾ…?

ರಷ್ಯಾ: ಕಮಲದ ಹೂವಿನೊಂದಿಗೆ ಫೋಟೊಗೆ ಪೋಸ್ ಕೊಟ್ಟಿದ್ದ ಮಾಡೆಲ್ ಗೆ ಈಗ ರಷ್ಯಾ ಸರ್ಕಾರ ಭಾರೀ ದಂಡ

news

ಸೌಭಾಗ್ಯ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

ನವದೆಹಲಿ: ಬಡವರ ಮನೆಗಳಿಗೆ ಉಚಿತ ವಿದ್ಯುತ್ ವಿತರಿಸುವ ಸೌಭಾಗ್ಯ ಯೋಜನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ...

Widgets Magazine