ಬೆಂಕಿ ಹಚ್ಚಿ ಅಜ್ಜ-ಅಜ್ಜಿಯ ಹತ್ಯೆಗೆ ಯತ್ನಿಸಿದ ಮೊಮ್ಮಗಳು

ಮೈಸೂರು, ಗುರುವಾರ, 16 ಮಾರ್ಚ್ 2017 (15:23 IST)

Widgets Magazine

ಮಾದಕ ವ್ಯಸನಿಯಾಗಿದ್ದ ಮೊಮ್ಮಗಳು ಅಜ್ಜಿ ತಾತನನ್ನೆ ಕೊಲ್ಲಲು ಯತ್ನಿಸಿದ ಘಟನೆ ಮೈಸೂರಿನ ಹೆಬ್ಬಳಾದ ಲಕ್ಷ್ಮೀಕಾಂತ ನಗರದಲ್ಲಿ ನಡೆದಿದೆ.


ಮಾದಕ ವ್ಯಸನವನ್ನ ಪ್ರಶ್ನಿಸಿದ್ದ ಅಜ್ಜ-ಅಜ್ಜಿಯನ್ನ ಕೊಠಡಿಯಲ್ಲಿ ಕೂಡಿ ಹಾಕಿ ಬೆಂಕಿ ಹಚ್ಚಿದ್ದಾಳೆ. ಬಳಿಕ ಮನೆಯ ಬಾಗಿಲನ್ನೂ ಹಾಕಿಕೊಂಡು ಹೊರಟುಹೋಗಿದ್ದಾಳೆ. ಬೆಂಕಿ ಜ್ವಾಲೆಯನ್ನ ಗಮನಿಸಿದ ನೆರೆಹೊರೆಯವರು ಅಜ್ಜ-ಅಜ್ಜಿಯನ್ನ ರಕ್ಷಿಸಿದ್ದಾರೆ.

ಮೊಮ್ಮಗಳೇ ನಮ್ಮನ್ನ ಕೊಲೆಗೆ ಯತ್ನಿಸಿದಳಾ ಎಂದು ಅಜ್ಜ-ಅಜ್ಜಿ ಶಾಕ್`ಗೆ ಒಳಗಾಗಿದ್ದಾರೆ. ಪ್ರಿಯದರ್ಶಿನಿ ಎಂಬಾಕೆ ಈ ಕೃತ್ಯ ಎಸಗಿದ್ದಾಳೆ ಎಂಬ ಆರೋಪ ಕೇಳಿಬಂದಿದೆ. ಗಂಡನಿಂದ ವಿಚ್ಛೇದನಾ ಪಡೆದಿದ್ದ ಈ ವೃದ್ಧ ದಂಪತಿಯ ಮಗಳು ಆತ್ಮಹತ್ಯೆಗೆ ಶರಣಾಗಿದ್ದಳು. ಬಳಿಕ ಮೊಮ್ಮಗಳನ್ನ ತಮ್ಮ ಮನೆಯಲ್ಲೇ ಇಟ್ಟುಕೊಂಡಿದ್ದರು. ಆದರೆ, ಮಾದಕ ವ್ಯಸನಿಯಾಗಿದ್ದ ಯುವತಿ ಅಜ್ಜಿ-ತಾತನ ಮಾತು ಕೇಳುತ್ತಿರಲಿಲ್ಲವೆಂದು ತಿಳಿದುಬಂದಿದೆ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ವಿಚಾರವಾದಿ ನರೇಂದ್ರ ನಾಯಕ್ ಹತ್ಯೆ ಯತ್ನ

ಕಲ್ಬುರ್ಗಿ ಹತ್ಯೆ ಪ್ರಕರಣದ ಬಳಿಕ ರಾಜ್ಯದಲ್ಲಿ ಮತ್ತೊಬ್ಬ ಚಿಂತಕರ ಹತ್ಯೆ ಯತ್ನ ನಡೆದಿದೆ. ಮಂಗಳೂರಿನ ಉರ್ವ ...

news

ಬೆಂಗಳೂರು ಕ್ರೈಂ ಸಿಟಿಯಾಗಿದೆ: ಜಗದೀಶ್ ಶೆಟ್ಟರ್ ಕಿಡಿ

ಬೆಂಗಳೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ದುಷ್ಕರ್ಮಿಗಳಿಗೆ ಕಾನೂನು ಭಯ ಇಲ್ಲದಂತಾಗಿದೆ. ...

news

ಚುನಾವಣೆಯಲ್ಲಿ ಯಾರೊಂದಿಗೂ ಮೈತ್ರಿಯಿಲ್ಲ: ದೇವೇಗೌಡ ಸ್ಪಷ್ಟನೆ

ಬೆಂಗಳೂರು: ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಯಾರೊಂದಿಗೂ ಮೈತ್ರಿಯಿಲ್ಲ ...

news

ವಿಧಾನಪರಿಷತ್‌ನಲ್ಲೂ ಪ್ರತಿಧ್ವನಿಸಿದ ಡೈರಿ ಗಲಾಟೆ: ಬಿಜೆಪಿ ಸಭಾತ್ಯಾಗ

ಬೆಂಗಳೂರು: ವಿಧಾನಸಭೆಯ ಕಲಾಪದಲ್ಲಿ ಡೈರಿ ವಿವಾದ ಕೋಲಾಹಲ ಸೃಷ್ಟಿಸಿದ ಬೆನ್ನಲ್ಲೆ ವಿಧಾನಪರಿಷತ್‌ನಲ್ಲೂ ...

Widgets Magazine