ವಿಧಾನ ಸಭೆ ಚುನಾವಣೆ ಪರಾಜಿತ ಅಭ್ಯರ್ಥಿಗೆ ಭರ್ಜರಿ ಸ್ವಾಗತ..!

ಮಂಡ್ಯ, ಶನಿವಾರ, 14 ಜುಲೈ 2018 (11:08 IST)

 

ಅವರು ವಿಧಾನ ಸಭೆ ಚುನಾವಣೆ ಬಳಿಕ ಈ ರಾಜ್ಯದಲ್ಲಿ ಮಾತ್ರವಲ್ಲ, ದೇಶದಲ್ಲಿಯೇ ಇರಲಿಲ್ಲ. ಅಂತಹ ಪರಾಜಿತ ಅಭ್ಯರ್ಥಿ ಇಂದು ನಗರಕ್ಕೆ ಆಗಮಿಸಿದರು. ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಜೈಕಾರ ಕೂಗಿ ಅದ್ಧೂರಿಯಾಗಿ ಬರಮಾಡಿಕೊಂಡವರು. ಯಾರವರು? ಮುಂದೆ ಓದಿ…
 
 
ದರ್ಶನ್ ಪುಟ್ಟಣ್ಣಯ್ಯಗೆ ಅದ್ಧೂರಿ ನೀಡಲಾಗಿದೆ. ವಿದೇಶದಿಂದ ವಾಪಸ್ಸಾದ ದರ್ಶನ್ ಪುಟ್ಟಣ್ಣಯ್ಯರಿಗೆ  
ರೈತಸಂಘದ ಕಾರ್ಯಕರ್ತರು, ಹಿತೈಷಿಗಳು ಅದ್ದೂರಿಯಾಗಿ ಸ್ವಾಗತ ಕೋರಿದರು. ಪಟಾಕಿ ಸಿಡಿಸಿ, ಸಿಹಿ ವಿತರಿಸಿ, ದರ್ಶನ್ ಗೆ ಜೈಕಾರ ಕೂಗಿದ ಕಾರ್ಯಕರ್ತರು ಬರಮಾಡಿಕೊಂಡರು.

ಶಾಸಕ ದಿ. ಪುಟ್ಟಣ್ಣಯ್ಯ ಪುತ್ರರಾಗಿರುವ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿಯಾಗಿದ್ದಾರೆ. ಚುನಾವಣೆಯಲ್ಲಿ ಸೋತ ನಂತರ ವಿದೇಶಕ್ಕೆ ಹಾರಿದ್ದರು. ವಿದೇಶದಲ್ಲಿ ತನ್ನ ಸಾಫ್ಟ್ವೇರ್ ಕಂಪನಿ ವ್ಯವಹಾರ ಮುಗಿಸಿ ಸ್ವಕ್ಷೇತ್ರಕ್ಕೆ ಆಗಮಿಸಿದ್ದಾರೆ. ಇನ್ಮುಂದೆ ತಂದೆ ಹಾದಿ ತುಳಿಯಲಿರುವ ದರ್ಶನ್.
ಶಾಶ್ವತವಾದ ರೈತಪರ ಹೋರಾಟಗಳಲ್ಲಿ ಭಾಗಿಯಾಗಲಿರುವ ದರ್ಶನ್ ಪುಟ್ಟಣ್ಣಯ್ಯ. ಮೈಸೂರಿನ ಸಾಫ್ಟ್ವೇರ್ ಉದ್ಯಮದ ಜೊತೆ ಜೊತೆಗೆ ರೈತರಪರವಾಗಿ ನಿಲ್ಲಲು ದರ್ಶನ್ ಚಿಂತನೆ ನಡೆಸಿದ್ದಾರೆ. ದರ್ಶನ್ ಪುಟ್ಟಣ್ಣಯ್ಯ ಆಗಮನದಿಂದ ರೈತಸಂಘದಲ್ಲಿ ಸಂಭ್ರಮ ಮನೆಮಾಡಿದೆ.
 
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಇನ್ಮುಂದೆ ಪೆಟ್ರೋಲ್, ಡೀಸೆಲ್ ಗೆ ಒಂದೇ ದರ?

ನವದೆಹಲಿ: ಇನ್ನು ಮುಂದೆ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಒಂದೇ ಆಗಲಿದೆಯಾ? ಈ ಬಗ್ಗೆ ಕೇಂದ್ರ ...

news

ಮುಖ್ಯಮಂತ್ರಿಯಾಗುವುದು ನನ್ನ ಕನಸು ಎಂದ ಎಂಬಿ ಪಾಟೀಲ್

ಬೆಂಗಳೂರು: ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಜಲಸಂಪನ್ಮೂಲ ಸಚಿವರಾಗಿದ್ದ ಕಾಂಗ್ರೆಸ್ ಶಾಸಕ ಎಂಬಿ ಪಾಟೀಲ್ ...

news

ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಹಾಗೂ ಪುತ್ರಿ ಮರಿಯಂ ಅರೆಸ್ಟ್

ಲಾಹೋರ್ : ಪನಾಮ ಪೇಪರ್ ಹಗರಣದಲ್ಲಿ ದೋಷಿ ಎಂದು ಸಾಬೀತಾದ ಕಾರಣ ಪಾಕಿಸ್ತಾನ ಸುಪ್ರಿಂ ಕೋರ್ಟ್ ಮಾಜಿ ...

news

‘ಹಿಂದೂ ಪಾಕಿಸ್ತಾನ’ ಎಂದ ಶಶಿ ತರೂರ್ ಗೆ ಮತ್ತಷ್ಟು ಸಂಕಟ

ನವದೆಹಲಿ: ಬಿಜೆಪಿ 2019 ರ ಲೋಕಸಭೆ ಚುನಾವಣೆ ಗೆದ್ದರೆ ಭಾರತವನ್ನು ಹಿಂದೂ ಪಾಕಿಸ್ತಾನ ಮಾಡಬಹುದು ಎಂದು ...

Widgets Magazine