ಸೋಮವಾರದಿಂದ ಪ್ರತಿಯೊಂದು ವಸ್ತುವಿನ ಬೆಲೆ ದುಬಾರಿಯಾಗಲಿದೆ. ಈಗಾಗಲೇ ಕೊರೊನಾ ಮಹಾಮಾರಿಯಿಂದ ತತ್ತರಿಸಿದ ಜನರು ಈಗ ತಾನೇ ಹಂತ ಹಂತವಾಗಿ ಚೇತರಿಸಿಕೊಳ್ತಿದ್ದರು. ಆದ್ರೆ ಈಗ ಜನರ ಮೇಲೆ ಹೊರೆ ಹೇರಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಅಂದಹಾಗೆ ಸೋಮವಾರದಿಂದ ಎಲ್ಲ ವಸ್ತುವಿನ ಮೇಲೆ ಶೇ 5 ರಷ್ಟು ಜಿ ಎಸ್ ಟಿ ಹೆಚ್ಚಾಗಲಿದೆ. ಈ ಹಿಂದೆ ಆಹಾರ ಪದಾರ್ಥಗಳ ಮೇಲೆ , ಹೋಟೆಲ್ ಮೇಲೆ ಜಿಎಸ್ ಟಿ ವಾಪಸ್ ತಗೋಳಿ ಅಂತಾ ಜನರು ಧರಣಿ ನಡೆಸಿದ್ರು. ಆದ್ರೆ ಆ ಧರಣಿಯಿಂದ ಯಾವುದೇ ಉಪಯೋಗ ಇಲ್ಲದಂತಾಗಿದ್ದು.ಈಗ ಸೋಮವಾರದಿಂದ ಜಿ ಎಸ್ ಟಿ ದರ ಜಾರಿ ಬಾರಲಿದ್ದು , ಜನರಿಗೆ ಇನ್ನಷ್ಟು ಹೊರೆ ಬೀಳಲಿದೆ.