ಪ್ರವಾಸಕ್ಕಾಗಿ ಗುಜರಾತ್ ಶಾಸಕರು ರಾಜ್ಯಕ್ಕೆ: ಡಿ.ಕೆ.ಸುರೇಶ್

ಬೆಂಗಳೂರು, ಶನಿವಾರ, 29 ಜುಲೈ 2017 (12:48 IST)

ಗುಜರಾತ್ ಶಾಸಕರು ಪ್ರವಾಸಕ್ಕಾಗಿ ರಾಜ್ಯಕ್ಕೆ ಆಗಮಿಸಿದ್ದಾರೆಯೇ ಹೊರತು ಬೇರೆ ಯಾವುದೇ ಕಾರಣಗಳಿಲ್ಲ ಎಂದು ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ.
 
ನಿನ್ನೆ ಬೆಳಗಿನ ಜಾವ 1.30 ಗಂಟೆಗೆ ಗುಜರಾತ್‌ನಿಂದ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಶಾಸಕರು ಅಲ್ಲಿಂದ ನೇರವಾಗಿ ಈಗಲ್‌ಟೌನ್ ರೆಸಾರ್ಟ್‌ಗೆ ತೆರಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ನಾಳೆ ಶಾಸಕರು ಮೈಸೂರು-ಕೊಡುಗು ಜಿಲ್ಲೆಗಳ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಸಾಧ್ಯತೆಗಳಿವೆ ಎಂದು ಕಾಂಗ್ರೆಸ್ ಮುಖಂಡರು ತಿಳಿಸಿದ್ದಾರೆ.
 
ಕಳೆದ ಕೆಲ ದಿನಗಳ ಹಿಂದೆ ಆರು ಕಾಂಗ್ರೆಸ್ ಶಾಸಕರು ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿರುವುದು ಕಾಂಗ್ರೆಸ್ ಪಕ್ಷಕ್ಕೆ ತಲೆನೋವು ತಂದಿದೆ. ಆದ್ದರಿಂದಲೇ ಕಾಂಗ್ರೆಸ್ ಶಾಸಕರನ್ನು ರಾಜ್ಯಕ್ಕೆ ರವಾನಿಸಲಾಗಿದೆ ಎನ್ನಲಾಗುತ್ತಿದೆ.
 
ಬಿಜೆಪಿ ಆಪರೇಷನ್ ಕಮಲ್ ಆರಂಭಿಸಿದ್ದು ಕಾಂಗ್ರೆಸ್ ಪಕ್ಷದ ಶಾಸಕರಿಗೆ 10 ಕೋಟಿ ರೂಪಾಯ ಆಫರ್ ನೀಡಿದೆ ಎನ್ನುವ ವರದಿಗಳು ಹರಡಿವೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮಾಧಕ ವ್ಯಸನಿಗಳು ಕ್ರಿಮಿನಲ್ ಗಳಲ್ಲ; ಸಂತ್ರಸ್ತರು: ಕೆಸಿಆರ್

ಟಾಲಿವುಡ್ ನಟ-ನಟಿ ಹಾಗೂ ನಿರ್ದೇಶಕರ ಹೆಸರುಗಳು ಡ್ರಗ್ಸ್ ಮಾಫಿಯಾದಲ್ಲಿ ತಳುಕು ಹಾಕಿಜೊಂಡಿರುವ ಬೆನ್ನಲ್ಲೇ ...

news

ಅಮೆರಿಕಕ್ಕೆ ಆಘಾತವನ್ನುಂಟುಮಾಡಿದ ಉತ್ತರ ಕೊರಿಯಾ

ಜಗತ್ತಿಗೇ ದೊಡ್ಡಣ್ಣ ಎಂದು ಬೀಗುವ ಅಮೆರಿಕಕ್ಕೇ ದಂಗು ಬಡಿಸಿರುವ ಉತ್ತರ ಕೊರಿಯಾ ರಾಷ್ಟ್ರ ಇದೀಗ ಮತ್ತೊಂದು ...

news

ಆಕಾಶ್ ಕ್ಷಿಪಣಿ ವಿಫಲ: ಆದಾಗ್ಯೂ ಭಾರತ-ಚೀನಾ ಗಡಿಯಲ್ಲಿ ಕ್ಷಿಪಣಿ ನಿಯೋಜಿಸುತ್ತಿರುವುದೇಕೆ: ಸಿಎಜಿ ಪ್ರಶ್ನೆ

ಭಾರತ-ಚೀನಾ ಗಡಿಯಲ್ಲಿ ಆಕಾಶ್ ಕ್ಷಿಪಣಿಗಳನ್ನು ನಿಯೋಜಿಸುವ ಸೇನೆಯ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ...

news

ಇಂದ್ರಾಣಿ ಮುಖರ್ಜಿ ಶೀನಾ ಬೋರಾಳನ್ನು ಕೊಲೆ ಮಾಡಿದ್ದು ಹೇಗೆ ಗೊತ್ತಾ?!

ನವದೆಹಲಿ: ದೇಶವೇ ಬೆಚ್ಚಿಬೀಳುವಂತೆ ಮಾಡಿದ ಶೀನಾ ಬೋರಾ ಕೊಲೆ ವೃತ್ತಾಂತವನ್ನು ಆರೋಪಿ ಇಂದ್ರಾಣಿ ಮುಖರ್ಜಿ ...

Widgets Magazine