ಡಿ.ಕೆ. ಶಿವಕುಮಾರ್ ಜೊತೆ ಒಗ್ಗಟ್ಟಿನ ಪ್ರದರ್ಶನ ಮಾಡಿದ ಗುಜರಾತ್ ಶಾಸಕರು

ಬೆಂಗಳೂರು, ಶನಿವಾರ, 5 ಆಗಸ್ಟ್ 2017 (13:14 IST)

ರಾಜ್ಯಪಾಲರ ಭೇಟಿ ಬಳಿಕ ಗುಜರಾತ್`ನ 40 ಶಾಸಕರು ವಿಧಾನಸೌಧಕ್ಕೆ ತೆರಳಿದ್ದಾರೆ. ವಿಧಾನಸೌಧದ ಬಳಿ ಇರುವ ಗಾಂಧಿ ಪ್ರತಿಮೆ ಬಳಿ ಕುಳಿತು ರಘುಪತಿ ರಾಘವ ರಾಜಾರಾಮ್ ಭಜನೆ ಮಾಡಿದ ಶಾಸಕರು ವಿಧಾನಸೌಧಕ್ಕೆ ಪ್ರವೇಶಿಸಿದ್ದಾರೆ.


ಇದೇವೇಳೆ, ಶಾಸಕರನ್ನ ಸೇರಿಕೊಂಡ ಸಚಿವ ಡಿ.ಕೆ. ಶಿವಕುಮಾರ್ ಶಾಸಕರಿಗೆ ಧೈರ್ಯ ತುಂಬಿದರು. ಈ ಸಂದರ್ಭ ಗುಜರಾತ್ ಶಾಸಕರು ಕೈಎತ್ತಿ ಒಗ್ಗಿಟ್ಟಿನ ಪ್ರದರ್ಶನ ಮಾಡಿದರು. ಬಳಿಕ ವಿಧಾನಸೌಧಕ್ಕೆ ತೆರಳಿದ ಗುಜರಾತ್ ಶಾಸಕರು ವಿಧಾನಸಭೆ ಮತ್ತು ವಿಧಾನ ಪರಿಷತ್ ಸಭಾಂಗಣವನ್ನ ವೀಕ್ಷಿಸಿದರು. ಶಾಸಕರಿಗೆ ಸ್ವತಃ ಡಿ.ಕೆ. ಶಿವಕುಮಾರ್ ವಿಧಾನಸೌಧದ ದರ್ಶನ ಮಾಡಿಸಿದರು.

ಶಾಸಕರೆಲ್ಲರೂ ಒಗ್ಗಟ್ಟಿನಿಂದ ಖುಷಿಯಾಗಿದ್ದಾರೆ. ಗುಜರಾತ್`ಗೆ ಯಾವಾಗ ತೆರಳುತ್ತಾರೆಂಬುದು ಅವರಿಗೆ ಬಿಟ್ಟ ವಿಚಾರ ಎಂದು ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 ಇದರಲ್ಲಿ ಇನ್ನಷ್ಟು ಓದಿ :  
ಡಿಕೆಶಿವಕುಮಾರ್ ಕಾಂಗ್ರೆಸ್ ಗುಜರಾತ್ ಶಾಸಕರು Vidhanasoudha Dkshivakumar Gujrath Legislatures

ಸುದ್ದಿಗಳು

news

ರಾಜ್ಯಸಭೆ ಚುನಾವಣೆಯಲ್ಲಿ ಅಹ್ಮದ್ ಪಟೇಲ್ ಜಯ ಖಚಿತ: ಡಿ.ಕೆ.ಶಿವಕುಮಾರ್

ಬೆಂಗಳೂರು: ಗುಜರಾತ್ ರಾಜ್ಯಸಭೆ ಚುನಾವಣೆಯಲ್ಲಿ ರಾಜ್ಯಸಭೆ ಅಭ್ಯರ್ಥಿ ಅಹ್ಮದ್ ಪಟೇಲ್ ಜಯ ಖಚಿತ ಎಂದು ಇಂಧನ ...

news

ಬಿಜೆಪಿಯ ಲಂಚದ ಆಮಿಷ ಶೀಘ್ರ ಬಹಿರಂಗ: ಗುಜರಾತ್ ಶಾಸಕರ ಹೇಳಿಕೆ

ನಮ್ಮನ್ನ ಯಾರೂ ರೆಸಾರ್ಟ್`ನಲ್ಲಿ ಕೂಡಿ ಹಾಕಿಲ್ಲ,ಸ್ವ ಇಚ್ಛೆಯಿಂದಲೆ ಇಲ್ಲಿಗೆ ಬಂದಿದ್ದೇವೆ ಎಂದು ರಾಜ್ಯಪಾಲ ...

news

ಐಟಿ ದಾಳಿ ಬಳಿಕ ಡಿಕೆಶಿ ಮೊದಲು ಭೇಟಿ ಮಾಡಿದ್ದು ಯಾರನ್ನ ಗೊತ್ತಾ..?

ಐಟಿ ದಾಳಿ ಮುಗಿದ ಬಳಿಕ ಮನೆಯಿಂದ ಹೊರಬಂದ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಕುಟುಂಬ ಸಮೇತ ಇಷ್ಟದೈವದ ...

news

ಭಾರತೀಯ ಸೇನೆಯನ್ನು ಹಿಮ್ಮೆಟ್ಟಿಸಲು ಚೀನಾ ಹೊಸ ತಂತ್ರ ?

ನವದೆಹಲಿ: ಡೋಕ್ಲಾಂ ಗಡಿಯಿಂದ ಭಾರತೀಯ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಲು ಶತಾಯ ಗತಾಯ ಪ್ರಯತ್ನ ...

Widgets Magazine