ರಾಜ್ಯ ಕಾಂಗ್ರೆಸ್ ಗೆ ಇನ್ನೊಂದು ತಲೆನೋವು

ಬೆಂಗಳೂರು, ಶುಕ್ರವಾರ, 4 ಆಗಸ್ಟ್ 2017 (09:33 IST)

ಬೆಂಗಳೂರು: ಗಜರಾತ್ ರಾಜ್ಯಸಭೆ ಚುನಾವಣೆಗೆ ಆಪರೇಷನ್ ಕಮಲ ಭೀತಿಗೆ ಸಿಲುಕಿ ಬೆಂಗಳೂರಿಗೆ ಬಂದು ಈಗಲ್ ಟನ್ ರೆಸಾರ್ಟ್ ನಲ್ಲಿ ಬೀಡುಬಿಟ್ಟಿದ್ದ ಗುಜರಾತ್ ಶಾಸಕರು ಮರಳಿ ತವರಿಗೆ  ತೆರಳಲಿದ್ದಾರೆ.


 
ಇಂದು ಬೆಳಿಗ್ಗೆ  ಮೂವರು ಶಾಸಕರು ಗುಜರಾತ್ ನತ್ತ ಪ್ರಯಾಣ ಬೆಳೆಸಿದ್ದಾರೆ. ಉಳಿದ ಶಾಸಕರೂ ತವರಿಗೆ ಮರಳಲು ಹಠ ಹಿಡಿಯುತ್ತಿರುವಾಗಿ ತಿಳಿದುಬಂದಿದೆ.
 
ಐಟಿ ಅಧಿಕಾರಿಗಳು  ಈಗಲ್ ಟನ್ ರೆಸಾರ್ಟ್ ನಲ್ಲೂ ಬೀಡುಬಿಟ್ಟಿರುವುದರಿಂದ ಬೆದರಿದ ಶಾಸಕರು ರೆಸಾರ್ಟ್ ರಾಜಕಾರಣ ಬಿಟ್ಟು ತವರಿಗೆ ಮರಳಲು ಪಟ್ಟುಹಿಡಿದಿದ್ದಾರೆ  ಎನ್ನಲಾಗಿದೆ.  ರಾಜ್ಯ ಕಾಂಗ್ರೆಸ್ ಮುಖಂಡರು ಅಭಯ ನೀಡಿದ ಹೊರತಾಗಿಯೂ ಅವರು ಪಟ್ಟು ಬಿಡುತ್ತಿಲ್ಲ ಎನ್ನಲಾಗಿದೆ.
 
ಆಗಸ್ಟ್ 8 ರಂದು ಗುಜರಾತ್ ನಲ್ಲಿ ರಾಜ್ಯಸಭೆ ಚುನಾವಣೆ ನಡೆಯಲಿದೆ. ಹೀಗಾಗಿ ಶಾಸಕರನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಶತಾಯ ಗತಾಯ ಪ್ರಯತ್ನ ನಡೆಸುತ್ತಿದೆ. ಇದರ ಬೆನ್ನಲ್ಲೇ ಕೆಲವು ಶಾಸಕರಿಗೆ ಅನಾರೋಗ್ಯದ ಸಮಸ್ಯೆಯೂ ಕಾಡುತ್ತಿದೆ. ಇದೆಲ್ಲದರ ಬೆನ್ನಲ್ಲೇ ತವರಿಗೆ ಮರಳಲು ಉತ್ಸುಕರಾಗಿದ್ದಾರೆ ಎನ್ನಲಾಗಿದೆ.
 
ಇದನ್ನೂ ಓದಿ.. ಹಬ್ಬಕ್ಕೂ ಡಿಕೆಶಿಗೆ ಬಿಡುವಿಲ್ಲ
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಗುಜರಾತ್ ಶಾಸಕರು ಕಾಂಗ್ರೆಸ್ ರಾಜ್ಯ ಸುದ್ದಿಗಳು Congress State News Gujrath Mla’s

ಸುದ್ದಿಗಳು

news

ಹಬ್ಬಕ್ಕೂ ಡಿಕೆಶಿಗೆ ಬಿಡುವಿಲ್ಲ

ಬೆಂಗಳೂರು: ಇಂದು ವರಮಹಾಲಕ್ಷ್ಮಿ ಹಬ್ಬ. ಆದರೆ ಐಟಿ ದಾಳಿಗೊಳಗಾಗಿರುವ ಸಚಿವ ಡಿಕೆ ಶಿವಕುಮಾರ್ ಮನೆಯಲ್ಲಿ ...

news

ಐಟಿ ದಾಳಿ ಬೆನ್ನಲ್ಲೇ ಡಿಕೆಶಿ ಬೆನ್ನತ್ತಿದ ಮತ್ತೊಂದು ಪ್ರಕರಣ..?

ವರ ಮಹಾಲಕ್ಷ್ಮೀ ಹಬ್ಬದ ದಿನವೂ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಮನೆ ಮೇಲೆ ಐಟಿ ದಾಳಿ ಮುಂದುವರೆದಿರುವ ...

news

ಬೆಳ್ಳಂ ಬೆಳಗ್ಗೆ ಐಟಿ ಅಧಿಕಾರಿಗಳ ವಿರುದ್ಧ ಡಿಕೆಶಿ ಗರಂ

ಸತತ 3ನೇ ದಿನವೂ ಇಂಧನ ಸಚಿವ ಡಿ.ಕೆ. ಶಿವಕುಮಾರ್ ನಿವಾಸದಲ್ಲಿ ಐಟಿ ಅಧಿಕಾರಿಗಳ ಡ್ರಿಲ್ ಮುಂದುವರೆದಿದೆ. ...

news

ಅಪರೂಪಕ್ಕೆ ರಾಜ್ಯ ಸಭೆಗೆ ಕಾಲಿಟ್ಟ ಸಚಿನ್ ತೆಂಡುಲ್ಕರ್

ನವದೆಹಲಿ: ಸಚಿನ್ ತೆಂಡುಲ್ಕರ್ ಸಂಸದ ಎನ್ನುವ ವಿಚಾರ ಬಹುತೇಕರಿಗೆ ಮರೆತು ಹೋಗಿದೆ. ಅದನ್ನು ...

Widgets Magazine