Widgets Magazine
Widgets Magazine

ಗುರುಗಳಿಗಾಗಿ ಪರಿತಪಿಸುತ್ತಾ ಪ್ರಾಣ ಬಿಟ್ಟ ಗೌರಿಶಂಕರ ಸ್ವಾಮೀಜಿ

ತುಮಕೂರು, ಬುಧವಾರ, 11 ಜನವರಿ 2017 (07:33 IST)

Widgets Magazine

ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಯವರ ಮಾಜಿ ಶಿಷ್ಯ ಅನಾರೋಗ್ಯದಿಂದ ಬಳಲುತ್ತಿದ್ದ ಗೌರಿಶಂಕರ ಸ್ವಾಮೀಜಿ ಬೆಂಗಳೂರಿನ ಕೇಂಪೇಗೌಡ ಆಸ್ಪತ್ರೆಯಲ್ಲಿ ಇಂದು ಮುಂಜಾನೆ ವಿಧಿವಶರಾಗಿದ್ದಾರೆ. ಅವರು ಬಹುಅಂಗಾಗ ವೈಫಲ್ಯದಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ.

ನನ್ನ ಗುರುಗಳನ್ನು ನೋಡಬೇಕು, ಕೊನೆಗಳಿಗೆಯಲ್ಲೂ ಅವರನ್ನು ನೋಡಲಾಗಲಿಲ್ಲ, ಎನ್ನುತ್ತ ಸ್ವಾಮೀಜಿ ಪ್ರಾಣಬಿಟ್ಟರು ಎಂದು ಅವರ ಭಕ್ತರು ಅಳಲು ತೋಡಿಕೊಂಡಿದ್ದಾರೆ.
 
ಇವರು ಸಿದ್ಧಗಂಗಾ ಮಠದ ಉತ್ತರಾಧಿಕಾರಿ ಪಟ್ಟಕ್ಕಾಗಿ ಸಾಕಷ್ಟು ಹೋರಾಟ ನಡೆಸಿದ್ದರು. ಈ ಸಂಬಂಧ ಕೋರ್ಟ್ ಮೆಟ್ಟಿಲನ್ನು ಕೂಡ ಏರಿದ್ದರು. ಈ ಕುರಿತಂತೆ ತುಮಕೂರು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಹಲವು ಕಾರಣಗಳಿಂದ ಇವರನ್ನು ಮಠದಿಂದ ಹೊರಹಾಕಲಾಗುತ್ತಿತ್ತು. ಬಳಿಕ ಗುಬ್ಬಿ ತಾಲ್ಲೂಕಿನ ಗೊಲ್ಲಹಳ್ಳಿ ಬಳಿ ಸಿದ್ದಗಂಗಾ ಮಠ ಸ್ಥಾಪಿಸಿ ವಾಸವಾಗಿದ್ದರು. 
 
ಇತ್ತೀಚಿಗಷ್ಟೇ ಸಿದ್ಧಗಂಗಾ ಶ್ರೀಗಳನ್ನು ಭೇಟಿಯಾಗುವ ಇಂಗಿತವನ್ನು ವ್ಯಕ್ತಪಡಿಸಿದ್ದರು. ಆದರೆ ಶ್ರೀಗಳು ಇದಕ್ಕೆ ನಿರಾಕರಿಸಿದ್ದರು. ಕೊನೆಗಳಿಗೆಯಲ್ಲೂ ನನಗೆ ಪಟ್ಟ ಬೇಡ, ಗುರುಗಳು ಬೇಕು ಎಂದು ಕೊರಗುತ್ತ ಅವರು ಬಿಟ್ಟಿದ್ದು ಮಾತ್ರ ವಿಪರ್ಸಾಯಸವೇ ಸರಿ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

70 ವರ್ಷಗಳಲ್ಲಿ ಇಂತಹ ಆರ್ಥಿಕ ದಿವಾಳಿಯಾಗಿರಲಿಲ್ಲ: ಪ್ರಧಾನಿ ಮೋದಿ ವಿರುದ್ಧ ಪರಮೇಶ್ವರ್ ವಾಗ್ದಾಳಿ

ನೋಟು ನಿಷೇಧದಿಂದ ದೇಶದ ಆರ್ಥಿಕತೆ ಬುಡಮೇಲಾಗಿದೆ. ಸ್ವಾತಂತ್ರ್ಯ ಬಂದು 70 ವರ್ಷಗಳ ಅವಧಿಯಲ್ಲಿ ಇಂತಹ ...

news

ಬಿಜೆಪಿಯಿಂದ ಹೊರಹಾಕುವ ತಾಕತ್ತು ಯಾರಿಗೂ ಇಲ್ಲ: ಯಡಿಯೂರಪ್ಪಗೆ ಈಶ್ವರಪ್ಪ ಬಹಿರಂಗ ಸವಾಲ್

ಯಾವುದೇ ಕಾರಣಕ್ಕೂ ನನ್ನನ್ನು ಬಿಜೆಪಿ ಪಕ್ಷದಿಂದ ಹೊರ ಹಾಕಲ್ಲ. ನನಗೆ ನೋಟಿಸ್ ನೀಡಲು ಸಹ ಯಾರಿಂದಲೂ ...

news

ಮತ್ತೊಬ್ಬ ಶಾಸಕನಿಂದ ಅಧಿಕಾರಿಗೆ ಧಮ್ಕಿ: ಇದೇನು ಗುಂಡಾರಾಜ್ಯವೇ?

ವೈದ್ಯರ ಮೇಲೆ ಸಂಸದ ಅನಂತ್ ಕುಮಾರ್ ಹೆಗಡೆ ನಡೆಸಿದ ಹಲ್ಲೆ ಪ್ರಕರಣ ಹಾಗೂ ಶಾಸಕ ರಾಜು ಕಾಗೆ ಪುತ್ರಿಯ ...

news

ಕಮಲ ಪಾಳಯದಲ್ಲಿ ಬ್ರಿಗೇಡ್ ತಳಮಳ...ಪಕ್ಷದಿಂದ ಈಶ್ವರಪ್ಪ ಬೆಂಬಲಿಗ ಅಮಾನತು

ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ನಲ್ಲಿ ಗುರುತಿಸಿಕೊಂಡ ಹಿನ್ನೆಲೆಯಲ್ಲಿ ಮಾಜಿ ಮೇಯರ್ ವೆಂಕಟೇಶ ಮೂರ್ತಿ ...

Widgets Magazine Widgets Magazine Widgets Magazine