ಎಚ್‌ಡಿಕೆ ರಾಜಕೀಯವಾಗಿ ಬೀದಿಗೆ ಬರದಿದ್ರೆ ಹೆಸರು ಬದಲಿಸಿಕೊಳ್ತಿನಿ: ಎಚ್.ಸಿ.ಬಾಲಕೃಷ್ಣ

ಮಂಡ್ಯ, ಶುಕ್ರವಾರ, 14 ಏಪ್ರಿಲ್ 2017 (15:59 IST)

Widgets Magazine

ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ರಾಜಕೀಯವಾಗಿ ಬೀದಿಗೆ ಬರದಿದ್ರೆ ಹೆಸರು ಬದಲಿಸಿಕೊಳ್ತಿನಿ ಎಂದು ಜೆಡಿಎಸ್ ಬಂಡಾಯ ಶಾಸಕ ಸವಾಲ್ ಹಾಕಿದ್ದಾರೆ.
 
ನಗರದಲ್ಲಿ ಆಯೋಜಿಸಲಾದ ಚಲುವರಾಯ ಸ್ವಾಮಿ ಸಮಾವೇಶದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಬೇಕು. ರಾಜ್ಯವನ್ನು ಅಭಿವೃದ್ಧಿಪಡಿಸಬೇಕು ಎನ್ನುವುದು ನಮ್ಮ ನಿಲುವಾಗಿದೆ. ಆದರೆ, ದೇವೇಗೌಡರಿಗೆ ನಮ್ಮ ನಿಲುವು ಅರ್ಥವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
 
ಕುಮಾರಸ್ವಾಮಿ ರಾಜಕೀಯವಾಗಿ ಬೆಳೆಯುವುದು ಮತ್ತು ಮುಖ್ಯಮಂತ್ರಿಯಾಗುವುದು ಅವರ ಮನೆಯವರಿಗೆ ಇಷ್ಟವಿಲ್ಲ. ಮನೆಯವರ ಮಾತು ಕೇಳುವುದನ್ನು ಕುಮಾರಸ್ವಾಮಿ ಮುಂದವರಿದಿದ್ದೇ ಆದಲ್ಲಿ ರಾಜಕೀಯವಾಗಿ ಬೀದಿಗೆ ಬರುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ,
 
ಇದೀಗ ಕುಮಾರಸ್ವಾಮಿ ಮತ್ತು ದೇವೇಗೌಡರು ನಮ್ಮನ್ನು ದೂರವಿಡುತ್ತಿದ್ದಾರೆ. ನಾವು ಯಾವುದೇ ತಪ್ಪು ಮಾಡಿಲ್ಲ. ಅವರು ಹೇಳಿದಂತೆ ಕೇಳಿದ್ದೇವೆ. ಅವರ ಮಾತನ್ನು ಯಾವತ್ತೂ ಮೀರಿಲ್ಲ ಎಂದು ಜೆಡಿಎಸ್ ಬಂಡಾಯ ಶಾಸಕ ಎಚ್.ಸಿ.ಬಾಲಕೃಷ್ಣ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಕಾಂಗ್ರೆಸ್ ಪಕ್ಷ ಬಿಡುವುದಿಲ್ಲ, ಏತಕ್ಕಾಗಿ ಬಿಡಬೇಕು: ಅಂಬರೀಷ್

ಬೆಂಗಳೂರು: ಕಾಂಗ್ರೆಸ್ ಪಕ್ಷವನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಏತಕ್ಕಾಗಿ ಬಿಡಬೇಕು ಎಂದು ಹಿರಿಯ ನಟ ...

news

ಕೋರ್ಟ್ ಆದೇಶದಂತೆ ಬಾಂಬ್‌ನಾಗ ನಿವಾಸದ ಮೇಲೆ ದಾಳಿ: ನಿಂಬಾಳ್ಕರ್

ಬೆಂಗಳೂರು: ಕೋರ್ಟ್ ಆದೇಶದಂತೆ ಬಾಂಬ್‌ನಾಗ ನಿವಾಸದ ಮೇಲೆ ದಾಳಿ ನಡೆಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ...

news

ಅಲ್ಲಾ ಮೇಲೆ ಆಣೆ ಮಾಡಿ ಹೇಳ್ತೇನೆ, ಕಾಂಗ್ರೆಸ್‌ಗೆ ಮತ ಹಾಕುವಂತೆ ಎಚ್‌ಡಿಕೆ ಹೇಳಿದ್ರು: ಜಮೀರ್

ಮಂಡ್ಯ: ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮತಹಾಕುವಂತೆ ಕುಮಾರಸ್ವಾಮಿ ಆದೇಶ ನೀಡಿದ್ದರು. ...

news

ಹೇಮಾಮಾಲಿನಿ ಪ್ರತಿನಿತ್ಯ ಮದ್ಯ ಸೇವಿಸ್ತಾರೆ, ಆತ್ಮಹತ್ಯೆಗೆ ಶರಣಾಗಿದ್ದಾರಾ: ಮಹಾರಾಷ್ಟ್ರ ಶಾಸಕ

ಮುಂಬೈ: ಬಾಲಿವುಡ್ ನಟಿ, ಬಿಜೆಪಿ ಸಂಸದೆ ಹೇಮಾಮಾಲಿನಿ ಪ್ರತಿನಿತ್ಯ ಮದ್ಯ ಸೇವಿಸುತ್ತಾರೆ. ಆದರೆ, ಅವರು ...

Widgets Magazine