ಭಕ್ತರ ಜಯಘೋಷದ ನಡುವೆ ನಗರದ ಅಧಿದೇವತೆ ಹಾಸನಾಂಬೆ ಗುರುವಾರ ಮಧ್ಯಾಹ್ನ 12.17ಕ್ಕೆ ವಿಶ್ವರೂಪ ದರ್ಶನ ನೀಡಿದಳು. ಸಂಪ್ರದಾಯದಂತೆ ದೇಗುಲದ ಗರ್ಭಗುಡಿ ಬಾಗಿಲು ತೆರೆದೊಡನೆ ಮೈಸೂರು ಅರಸು ಮನೆತನದ ನರಸಿಂಹರಾಜ ಅವರು ಬಾಳೆ ಕಂದು ಕಡಿದರು. ಭಕ್ತರು, ಜನಪ್ರತಿನಿಧಿಗಳು ಜಯಘೋಷ ಮೊಳಗಿಸಿ ಭಾವಪರವಶರಾದರು. ಗರ್ಭಗುಡಿ ಬಾಗಿಲು ತೆರೆದ ನಂತರ ಅರ್ಚಕರು, ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಬಿಬಿಎಂಪಿ ಮಾಜಿ ಉಪಮೇಯರ್ ಹೇಮಾವತಿ. ಕೆ.ಗೋಪಾಲಯ್ಯ ಸ್ಥಳೀಯ ಶಾಸಕ ಪ್ರೀತ್ಂ ಗೌಡ